ನವದೆಹಲಿ: ಭಾರತಕ್ಕೆ ಭೇಟಿ ನೀಡಿದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಔಪಚಾರಿಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾರ್ಕೆಲ್, "ನಾನು ಭಾರತಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ. ಈ ಬೃಹತ್ ದೇಶ ಹಾಗೂ ಇಲ್ಲಿನ ವೈವಿಧ್ಯತೆಯನ್ನು ನಾವು ಗೌರವಿಸುತ್ತೇವೆ" ಎಂದು ಹೇಳಿದರು.
'ಭಾರತಕ್ಕೆ ಬಂದಿರುವುದು ನನಗೆ ಬಹಳ ಸಂತಸದ ವಿಷಯ. ಜರ್ಮನಿ ಮತ್ತು ಭಾರತ ಎರಡೂ ದೇಶಗಳು ನಿಕಟ ಸಂಬಂಧವನ್ನು ಹೊಂದಿವೆ. ಈ ಬೃಹತ್ ದೇಶವನ್ನು ಮತ್ತದರ ವೈವಿಧ್ಯತೆಯನ್ನು ನಾವು ಗೌರವಿಸುತ್ತೇವೆ" ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ತಿಳಿಸಿದರು.
ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ರಾಜ್ಘಾಟ್ಗೆ ತೆರಳಿ ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು.
German Chancellor Angela Merkel at Rashtrapati Bhawan in Delhi: I am delighted to be here in India. Germany-India are linked by very close ties. We have great respect for this vast country and its diversity. pic.twitter.com/i3g3Or62yK
— ANI (@ANI) November 1, 2019
ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಐದನೇ ದ್ವೈವಾರ್ಷಿಕ ಇಂಟರ್ ಗವರ್ನಮೆಂಟಲ್ ಡೈಲಾಗ್ (ಐಜಿಸಿ) ಗಾಗಿ ಭಾರತಕ್ಕೆ ಬಂದಿದ್ದಾರೆ. ಐಜಿಸಿ ಅಡಿಯಲ್ಲಿ, ಎರಡೂ ದೇಶಗಳ ಸಮಾನ ಮಂತ್ರಿಗಳು ತಮ್ಮ ಜವಾಬ್ದಾರಿಯ ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಮರ್ಕೆಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಾತುಕತೆಯ ಫಲಿತಾಂಶದ ಬಗ್ಗೆ ಐಜಿಸಿಗೆ ಅರಿವು ಮೂಡಿಸಲಾಗಿದೆ.