Glenn Maxwell Break from IPL : ಐಪಿಎಲ್ 2024ರಲ್ಲಿ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.ಇದರ ಹಿಂದಿನ ಕಾರಣವನ್ನೂ ಅವರು ತಿಳಿಸಿದ್ದಾರೆ. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ಹೇಳಿಕೊಳ್ಳುವಂತೆ ಏನೂ ಇರಲಿಲ್ಲ.ನಿರಂತರವಾಗಿ ಪ್ಲಾಪ್ ಆಗುತ್ತಲೇ ಬಂದಿದ್ದಾರೆ. ಐಪಿಎಲ್ 2024 ರಲ್ಲಿ, ಆಡಿರುವ 6 ಪಂದ್ಯಗಳಲ್ಲಿ 28ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 32 ರನ್ ಗಳನ್ನಷ್ಟೇ ಗಳಿಸಿದ್ದಾರೆ. ಈ ಅವಧಿಯಲ್ಲಿ ಖಾತೆ ತೆರೆಯದೆ ಮೂರು ಬಾರಿ ಪೆವಿಲಿಯನ್ ಗೆ ಮರಳಿದರು. 6 ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್‌ಗಳು 0, 3, 28, 0, 1, 0.
ಈ ಕಾರಣಕ್ಕೆ ತೆಗೆದುಕೊಂಡರಂತೆ ಬ್ರೇಕ್ :
ಮಾನಸಿಕ ಮತ್ತು ದೈಹಿಕ ಆಯಾಸದಿಂದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಂಡಿದ್ದಾರೆ. ಹೈದರಾಬಾದ್ ವಿರುದ್ಧ RCB ಪಂದ್ಯದಲ್ಲಿಯೂ ಮ್ಯಾಕ್ಸ್‌ವೆಲ್ ಪ್ಲೇಯಿಂಗ್-11 ರ ಭಾಗವಾಗಿರಲಿಲ್ಲ.ಆಗಲೂ ತಾನು ಸಕಾರಾತ್ಮಕ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ತಂಡದಿಂದ ಹೊರಗೆ ಉಳಿಯುವುದಾಗಿ ಸ್ವತಃ ಮ್ಯಾಕ್ಸ್‌ವೆಲ್ ಕೇಳಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Derek Underwood Dies: ಐಪಿಎಲ್ ನಡುವೆ ಕ್ರಿಕೆಟ್ ಪ್ರೇಮಿಗಳಿಗೆ ಕೆಟ್ಟ ಸುದ್ದಿ, ಶ್ರೇಷ್ಠ ಸ್ಪಿನ್ನರ್ ಡೆರೆಕ್ ಅಂಡರ್‌ವುಡ್ ಇನ್ನಿಲ್ಲ
'ಮೊದಲ ಕೆಲವು ಪಂದ್ಯಗಳು ವೈಯಕ್ತಿಕವಾಗಿ ನನಗೆ ಉತ್ತಮವಾಗಿರಲಿಲ್ಲ. ಈಗ ತೆಗೆದುಕೊಂಡ ನಿರ್ಧಾರ ಬಹಳ ಸುಲಭವಾಗಿತ್ತು. ನಾನು ಕಳೆದ ಪಂದ್ಯದಲ್ಲಿ (ರಾಯಲ್ ಚಾಲೆಂಜರ್ಸ್ ನಾಯಕ ಫಾಫ್ ಡು ಪ್ಲೆಸಿಸ್) ಮತ್ತು ತಂಡದ ತರಬೇತುದಾರರ ಬಳಿಗೆ ಹೋಗಿ ಬಹುಶಃ ಬೇರೆಯವರನ್ನು ಪ್ರಯತ್ನಿಸುವ ಸಮಯ ಬಂದಿದೆ ಎಂದು ಹೇಳಿದ್ದೆ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಈ ಹಿಂದೆ ಕೂಡಾ ತಾನು ಇಂಥ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಏನೂ ಪ್ರಯೋಜನವೈಲ್ಲದೆ ಆತವದುವುದನ್ನು ಮುಂದುವರೆಸಬಹುದು. ಆದರೆ ಇದು ತಂಡ ಮತ್ತು ವೈಯಕ್ತಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ನೀಡಲು ಇದೀಗ ಉತ್ತಮ ಸಮಯ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.