ವಾಸ್ತವ ಅರಿಯದ ಟೀಕಾಕಾರರಿಂದ ಸಂಸ್ಕ್ರತಿ ಪಾಠ ಸಲ್ಲದು -ಗೀತಾ ಶಿವರಾಜ್ ಕುಮಾರ್

Geetha Shivaraj Kumar : ಮುಸ್ಲಿಂ ಮತದಾರರ ಓಲೈಕೆಗೆ ಹಣೆಯಲ್ಲಿದ್ದ ಕುಂಕುಮ ಅಳಸಿಕೊಂಡು ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರೆಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಹೀಗೆ ಅಪಪ್ರಚಾರ ಮಾಡುವ ಮೊದಲು  ವಾಸ್ತವವನ್ನು ಅರಿತುಕೊಳ್ಳಬೇಕು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.   

Written by - Ranjitha R K | Last Updated : Apr 25, 2024, 01:21 PM IST
  • ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್
  • ವಾಸ್ತವ ಅರಿಯದ ಟೀಕಾಕಾರರಿಂದ ಸಂಸ್ಕ್ರತಿ ಪಾಠ ಸಲ್ಲದು
  • ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಆಕ್ರೋಶ
ವಾಸ್ತವ ಅರಿಯದ ಟೀಕಾಕಾರರಿಂದ ಸಂಸ್ಕ್ರತಿ ಪಾಠ ಸಲ್ಲದು -ಗೀತಾ ಶಿವರಾಜ್ ಕುಮಾರ್  title=

ಶಿವಮೊಗ್ಗ:'ಹಣೆಗೆ ಕುಂಕುಮ ಇಡುವ ಸಂಸ್ಕೃತಿಯನ್ನು ಟೀಕಾಕಾರರಿಂದ ಕಲಿಯಬೇಕಿಲ್ಲ. ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ರಾಜಕಾರಣಿಗಳಾಗಲಿ ವಿಡಿಯೋಗಳನ್ನು ತಿರುಚಿ ಅಪಪ್ರಚಾರ ನಡೆಸುವ ಮೊದಲು ಪ್ರಜ್ಞಾವಂತಿಕೆ ರೂಢಿಸಿಕೊಳ್ಳಬೇಕು'ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಸ್ಲಿಂ ಮತದಾರರ ಓಲೈಕೆಗೆ ಹಣೆಯಲ್ಲಿದ್ದ ಕುಂಕುಮ ಅಳಸಿಕೊಂಡು ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರೆಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಹೀಗೆ ಅಪಪ್ರಚಾರ ಮಾಡುವ ಮೊದಲು  ವಾಸ್ತವವನ್ನು ಅರಿತುಕೊಳ್ಳಬೇಕು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. 

ಇದನ್ನೂ ಓದಿ : ಬರ್ತ್ ಟ್ಯಾಕ್ಸ್ಯೂ ಇಲ್ಲ, ಡೆತ್ ಟ್ಯಾಕ್ಸ್ಯೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಕಡೆಗಳಲ್ಲಿ ಮಹಿಳೆಯರು ತವರು ಮನೆಯ ಪ್ರೀತಿ-ವಾತ್ಸಲ್ಯ ತೋರುತ್ತಿದ್ದಾರೆ.ಹಣೆಗೆ ಕುಂಕುಮ ಇರಿಸಿ, ಉಡಿ ತುಂಬಿ ಹರಸುತ್ತಿದ್ದಾರೆ.ಇಲ್ಲಿ, ಬಿಸಿಲ ಝಳ ಹೆಚ್ಚಿದೆ.ಬೆವರಿಗೆ ಕುಂಕುಮ ಮುಖದ ತುಂಬೆಲ್ಲಾ ಹರಡುತ್ತದೆ ಎನ್ನುವ ಕಾರಣಕ್ಕೆ ಮಾತ್ರ, ಕೆಲವು ಬಾರಿ ಕುಂಕುಮದ ಗಾತ್ರ ಚಿಕ್ಕದು ಮಾಡಿಕೊಂಡಿರಬಹುದು.ಇದನ್ನೇ ತಿರುಚಿದರೆ ಹೇಗೆ ಎಂದು ಗೀತಾ ಶಿವರಾಜ್ ಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ. 

ರಾಜ್ಯದ ಜನರು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿಗರಿಗೆ ಟೀಕಿಸಲು ವಿಚಾರ ಇಲ್ಲದಂತಾಗಿದೆ. ಅದೇ ರೀತಿ, ಪಕ್ಷದಿಂದ ಹೊರಗುಳಿದು ಪಕ್ಷದ ಅಸ್ತಿತ್ವವೇ ಇಲ್ಲದವರೂ ಕೂಡಾ ಇಲ್ಲಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ.ಟೀಕಿಸುವ ಮೊದಲು ಪಕ್ಷದ ಅಸ್ತಿತ್ವ ಕಂಡುಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ. 

ಇದನ್ನೂ ಓದಿ : ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ

ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜಕುಮಾರ ಅವರು ಸಮರ್ಥ ಸಂಸದರಾಗಿ ಹೊರಹೊಮ್ಮಲಿದ್ದಾರೆ ಎಂದು ಇದೇ ವೇಳೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ. ಇಲ್ಲಿನ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗೀತಾ ಅವರಿಗೆ ಮತ ನೀಡಿ ಹರಸಬೇಕು ಎಂದು ವಿನಂತಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News