ಸಚಿನ್ ತೆಂಡೂಲ್ಕರ್ ವಿರುದ್ಧ ನೆರೆಮನೆಯವರ ದೂರು… ತಕ್ಷಣವೇ ಕ್ರಮ ಕೈಗೊಂಡ ಕ್ರಿಕೆಟ್ ಗಾಡ್! ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

Sachin Tendulkar: ಮಾಸ್ಟರ್ ಬ್ಲಾಸ್ಟರ್ ಅವರ ನೆರೆಹೊರೆಯವರು ತಮ್ಮ ಮನೆಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಗದ್ದಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಚಿನ್ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ಕ್ರಮ ತೆಗೆದುಕೊಂಡಿದ್ದಾರೆ.

Written by - Bhavishya Shetty | Last Updated : May 7, 2024, 07:38 PM IST
    • ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವದ 'ಕ್ರಿಕೆಟ್ ದೇವರು' ಎಂದು ಕರೆಯಲಾಗುತ್ತದೆ
    • ಸಚಿನ್ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ಕ್ರಮ ತೆಗೆದುಕೊಂಡಿದ್ದಾರೆ
    • ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು.
ಸಚಿನ್ ತೆಂಡೂಲ್ಕರ್ ವಿರುದ್ಧ ನೆರೆಮನೆಯವರ ದೂರು… ತಕ್ಷಣವೇ ಕ್ರಮ ಕೈಗೊಂಡ ಕ್ರಿಕೆಟ್ ಗಾಡ್! ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? title=
Sachin Tendulkar

Sachin Tendulkar: ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವದ 'ಕ್ರಿಕೆಟ್ ದೇವರು' ಎಂದು ಕರೆಯಲಾಗುತ್ತದೆ. ಇನ್ನು ಸಚಿನ್ ಮೈದಾನದಲ್ಲಿ ಮಾತ್ರವಲ್ಲ ಹೊರಗೆ ಕೂಡ ಉತ್ತಮ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಕೈಗೊಂಡ ನಿರ್ಧಾರ.

ಇದನ್ನೂ ಓದಿ: ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!

ಮಾಸ್ಟರ್ ಬ್ಲಾಸ್ಟರ್ ಅವರ ನೆರೆಹೊರೆಯವರು ತಮ್ಮ ಮನೆಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಗದ್ದಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಚಿನ್ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ಕ್ರಮ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್ ಎಕ್ಸ್’ನಲ್ಲಿ ದಿಲೀಪ್ ಡಿಸೋಜಾ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. “ಪ್ರಿಯ ಸಚಿನ್ ತೆಂಡೂಲ್ಕರ್, ಪ್ರಸ್ತುತ ರಾತ್ರಿ ಸುಮಾರು 9 ಗಂಟೆಯಾಗಿದೆ. ನಿಮ್ಮ ಬಾಂದ್ರಾ ಮನೆಯ ಹೊರಗಿನ ಸಿಮೆಂಟ್ ಮಿಕ್ಸರ್ ಇಡೀ ದಿನ ಜೋರಾಗಿ ಸದ್ದು ಮಾಡುತ್ತಿದೆ. ಕಾರ್ಮಿಕರು ಇನ್ನೂ ಗದ್ದಲ ಮಾಡುತ್ತಿದ್ದಾರೆ. ದಯವಿಟ್ಟು ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಸರಿಯಾದ ಸಮಯವನ್ನು ಅನುಸರಿಸಲು ಕೇಳಬಹುದೇ? ಧನ್ಯವಾದಗಳು” ಎಂದು ಪೋಸ್ಟ್ ಮಾಡಲಾಗಿತ್ತು.

ಸಚಿನ್ ಈ ಟ್ವೀಟ್ ನಿರ್ಲಕ್ಷಿಸದೆ ಕೆಲಸಗಾರರನ್ನು ಸಂಪರ್ಕಿಸಿದ ಸಮಯವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವಂತೆ ಹೇಳಿದ್ದಾರೆ. ಇದನ್ನು ಸ್ವತಃ ದಿಲೀಪ್ ಡಿಸೋಜಾ ಖಚಿತಪಡಿಸಿದ್ದಾರೆ.

ಇದನ್ನೂ ಓದಿ:  ಆ ವ್ಯಕ್ತಿಯ ಬಟ್ಟೆಗಳನ್ನು ಕಳ್ಳತನ ಮಾಡ್ತಾರಂತೆ ಅನುಷ್ಕಾ! ಸಾವಿರ ಕೋಟಿ ಒಡೆಯರಾದ್ರೂ ವಿರಾಟ್ ಪತ್ನಿಗಿದೆ ಅದೊಂದು ಚಟ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

 

 

Trending News