ಪಕ್ಷಗಳಿಗೆ ದೇಣಿಗೆ ನೀಡಲು 'ಚುನಾವಣಾ ಬಾಂಡ್'ಗೆ ಚಾಲನೆ ನೀಡಿದ ಜೈಟ್ಲಿ

     

Last Updated : Jan 2, 2018, 07:24 PM IST
ಪಕ್ಷಗಳಿಗೆ ದೇಣಿಗೆ ನೀಡಲು 'ಚುನಾವಣಾ ಬಾಂಡ್'ಗೆ ಚಾಲನೆ ನೀಡಿದ ಜೈಟ್ಲಿ title=

ನವದೆಹಲಿ: ಚುನಾವಣಾ ಪ್ರಕ್ರಿಯೆಯನ್ನು ಸ್ವಚ್ಛಗೊಳಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೊಸ 'ಚುನಾವಣಾ ಬಾಂಡ್ಗಳನ್ನು' ರೂಪಿಸಿದ್ದಾರೆ. ಆ ಮೂಲಕ ಎಸ್ಬಿಐನ ನಿರ್ದಿಷ್ಟ ಶಾಖೆಗಳಿಂದ ಆ ಬಾಂಡ್ ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ಹಣವನ್ನು ದೇಣಿಗೆ ನೀಡಬಹುದು ಎಂದು ಅವರು ತಿಳಿಸಿದ್ದಾರೆ 

ಬಾಂಡ್ ಗಳು ಪಾವತಿದಾರನ ಹೆಸರನ್ನು ಹೊಂದಿರುವುದಿಲ್ಲ, ರೂ 1,000, ರೂ 10,000, ರೂ 1 ಲಕ್ಷ, ರೂ 10 ಲಕ್ಷ ಅಥವಾ ರೂ 1 ಕೋಟಿಗಳಲ್ಲಿ ಯಾವುದೇ ಮೌಲ್ಯಕ್ಕೆ  ಅವುಗಳನ್ನು ಖರೀದಿಸಬಹುದು ಎಂದು ಜೈಟ್ಲಿ ಲೋಕಸಭೆಯಲ್ಲಿ ಹೇಳಿದ್ದಾರೆ.

ಅವು ಬಾಂಡ್ ಗಳೆಂದು ಕರೆಯಲ್ಪಟ್ಟರು ಸಹಿತ ಅವು ಬಡ್ಡಿರಹಿತವಾಗಿರುತ್ತವೆ ಎಂದು ಹೇಳಲಾಗುತ್ತಿದೆ. ಈ ಚುನಾವಣಾ ಬಾಂಡ್ಗಳ ಅವಧಿಯು 15 ದಿನಗಳಾಗಿರುತ್ತದೆ. ಆ ದಿನಗಳ ಒಳಗೆ ಈಗಾಗಲೇ ನೊಂದಣಿಯಾಗಿರುವ ರಾಜಕೀಯ ಪಕ್ಷಗಳಿಗೆ ಹಣವನ್ನು ದೇಣಿಗೆ ನೀಡಬಹುದು ಎಂದು ತಿಳಿಸಿದರು.

ಚುನಾವಣಾ ಬಾಂಡ್ಗಳು  ಜನೆವರಿ, ಏಪ್ರಿಲ್,ಜುಲೈ ಅಕ್ಟೋಬರ್ ತಿಂಗಳಲ್ಲಿ 10 ದಿನಗಳವರೆಗೆ ಅವುಗಳನ್ನು ಖರೀದಿಸಲು ಲಭ್ಯವಾಗಿರುತ್ತವೆ. 

Trending News