ಚಳಿಗಾಲದಲ್ಲಿ ಕಣ್ಣುಗಳ ಬಗ್ಗೆ ಇರಲಿ ಎಚ್ಚರ!

ಚಳಿಗಾಲದಲ್ಲಿ ಹಗಲಿನಲ್ಲಿ ನೀವು ಹೆಚ್ಚಾಗಿ ಹೊರಗಡೆ ಇರಬೇಕಾದರೆ, ನೀವು ಸನ್ ಗ್ಲಾಸಸ್ ಬಳಸುವುದು ಒಳ್ಳೆಯದು. ಇದು ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

Last Updated : Dec 7, 2019, 01:12 PM IST
ಚಳಿಗಾಲದಲ್ಲಿ ಕಣ್ಣುಗಳ ಬಗ್ಗೆ ಇರಲಿ ಎಚ್ಚರ! title=

ನವದೆಹಲಿ: ಚಳಿಗಾಲದಲ್ಲಿ ನಾವು ಚರ್ಮ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಈ ಸಮಯದಲ್ಲಿ ಕಣ್ಣುಗಳ ಕಾಳಜಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನೆನಪಿಡಿ: ತಂಪಾದ ಗಾಳಿ ಕೂಡ ಕಣ್ಣುಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಚಳಿಗಾಲದ ಅವಧಿಯಲ್ಲಿ, ಕಣ್ಣುಗಳಲ್ಲಿ ಕಿರಿಕಿರಿ, ಮಸುಕುಗೊಳಿಸುವಿಕೆ ಮತ್ತು ಯಾವುದೇ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕಣ್ಣುಗಳ ರಕ್ಷಣೆಗೆ ನಾವು ನಿಮಗೆ ಒಂದಿಷ್ಟು ಸಲಹೆಗಳನ್ನು ನೀಡುತ್ತೇವೆ. ಇದಲ್ಲದೆ ಕಣ್ಣಿಗೆ ಸಂಬಂದಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಕಾನಿಸಿಕೊಂಡರೆ ಮೊದಲು ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 

ಸನ್ ಗ್ಲಾಸ್ ಬಳಸಿ:
ಚಳಿಗಾಲದಲ್ಲಿ ಹಗಲಿನಲ್ಲಿ ನೀವು ಹೆಚ್ಚಾಗಿ ಹೊರಗಡೆ ಇರಬೇಕಾದರೆ, ನೀವು ಸನ್ ಗ್ಲಾಸಸ್ ಬಳಸುವುದು ಒಳ್ಳೆಯದು. ಇದು ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ. ಸನ್ ಗ್ಲಾಸ್ ಬಳಸುವುದರಿಂದ ತಣ್ಣನೆಯ ಗಾಳಿ ನೇರವಾಗಿ ನಿಮ್ಮ ಕಣ್ಣುಗಳನ್ನು ಪ್ರವೇಶಿಸುವುದಿಲ್ಲ. ಜೊತೆಗೆ ನಿಮ್ಮ ಕಣ್ಣುಗಳು ಒಣಗದಂತೆ ರಕ್ಷಿಸುತ್ತದೆ. ನೀವು ಹಿಮಾವೃತ ಸ್ಥಳಕ್ಕೆ ಹೋದರೆ, ತಪ್ಪದೇ ಸನ್ ಗ್ಲಾಸಸ್ ಬಳಸಿ. ಏಕೆಂದರೆ ಹಿಮವು ಸೂರ್ಯನ ಯುವಿ ಬೆಳಕಿನ 80 ಪ್ರತಿಶತದಷ್ಟು ಪ್ರತಿಫಲಿಸುತ್ತದೆ.

Eye ಡ್ರಾಪ್ಸ್:
ಚಳಿಗಾಲದಲ್ಲಿ, ಮನೆಯ ಹೊರಗಿನ ತಂಪಾದ ಗಾಳಿ ಮತ್ತು ಮನೆಯೊಳಗಿನ ಬಿಸಿ ಗಾಳಿಯಿಂದಾಗಿ ಒಣ-ಕಣ್ಣಿನ ಸಿಂಡ್ರೋಮ್‌ನ ಅಪಾಯ ಹೆಚ್ಚಾಗಿರುತ್ತದೆ. ಇದರಿಂದಾಗಿ ಕಣ್ಣುಗಳಲ್ಲಿ ತೇವಾಂಶದ ಕೊರತೆ ಉಂಟಾಗುವ ಸಾಧ್ಯತೆಯಿದ್ದು ಕಣ್ಣುಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಮೇರೆಗೆ Eye ಡ್ರಾಪ್ಸ್ ಬಳಸಬೇಕು. 

ಹೆಚ್ಚು ನೀರು ಕುಡಿಯಿರಿ:
ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ದೇಹಕ್ಕೆ ಪ್ರಯೋಜನವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಚಳಿಗಾಲದಲ್ಲಿ ಸಹ ದೇಹದ ಆರೋಗ್ಯದ ದೃಷ್ಟಿಯಿಂದ ಹೆಚ್ಚು ನೀರು ಕುಡಿಯುವುದು ಅಗತ್ಯವಾಗಿರುತ್ತದೆ. ನೀವು ಪ್ರತಿದಿನ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುತ್ತಿದ್ದರೆ ನಿಮಗೆ ಒಣ ಕಣ್ಣಿನ ಸಮಸ್ಯೆ ಇರುವುದಿಲ್ಲ. ವಿಶೇಷವಾಗಿ ನೀವು ಶೀತ ಮತ್ತು ಶುಷ್ಕ ಗಾಳಿಯಲ್ಲಿ ಮನೆಯಿಂದ ಹೊರಬಂದರೆ ಅಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಿರಿ.

ಕಣ್ಣಿನಿಂದ ಕೈಗಳನ್ನು ದೂರವಿಡಿ:
ಕಣ್ಣಿನ ಒಣಗಿದ ಸಂದರ್ಭದಲ್ಲಿ, ಕಣ್ಣುಗಳಲ್ಲಿ ತುರಿಕೆ ಮತ್ತು ಉರಿಯುವುದು ಕಂಡುಬರುತ್ತದೆ ಮತ್ತು ಈ ಕಾರಣದಿಂದಾಗಿ ಜನರು ತಮ್ಮ ಕೈಗಳಿಂದ ನಿರಂತರವಾಗಿ ಕಣ್ಣುಗಳನ್ನು ಉಜ್ಜುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಪರಿಹಾರ ಸಿಗುತ್ತದೆ ಎಂದು ಜನರು ಭಾವಿಸುತ್ತಾರೆ ಆದರೆ ವಾಸ್ತವದಲ್ಲಿ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ನಿಮ್ಮ ಕಣ್ಣುಗಳಲ್ಲಿ ನೋವು ಉಂಟುಮಾಡಬಹುದು ಮತ್ತು ಕಣ್ಣುಗಳನ್ನು ಕೆಂಪಾಗಿಸಬಹುದು. ಅದೇ ಸಮಯದಲ್ಲಿ, ನಿಮ್ಮ ಕೈಗಳು ಯಾವಾಗಲೂ ಸ್ವಚ್ಛವಾಗಿರುವುದಿಲ್ಲ. ನಿಮ್ಮ ಕೈಯಲ್ಲಿ ಅನೇಕ ಬ್ಯಾಕ್ಟೀರಿಯಾಗಳಿರುತ್ತವೆ. ಇದರಿಂದಾಗಿ ನಿಮ್ಮ ಕಣ್ಣಿನಲ್ಲಿ ಸೋಂಕಿ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಕಂಪ್ಯೂಟರ್‌ನಿಂದ ವಿರಾಮ ತೆಗೆದುಕೊಳ್ಳಿ:
ನೀವು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಣ್ಣುಗಳು ಬೇಗನೆ ಒಣಗುತ್ತವೆ. ಜೊತೆಗೆ ಕಣ್ಣಿಗೆ ಬಹಳ ಬೇಗ ಆಯಾಸವಾಗುತ್ತದೆ. ಹಾಗಾಗಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ, ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮರೆಯದಿರಿ ಮತ್ತು ಸ್ವಲ್ಪ ಸಮಯದವರೆಗೆ ಕಂಪ್ಯೂಟರ್ ಪರದೆಯನ್ನು ನೋಡಬೇಡಿ.
 

Trending News