IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ

ಈ ಬಾರಿ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ಯಾಟ್ ಕಮ್ಮಿನ್ಸ್ ತಂಡವನ್ನು 8 ವಿಕೆಟ್‌’ಗಳಿಂದ ಸೋಲಿಸಿದ ಶ್ರೇಯಸ್ ಅಯ್ಯರ್ ಪಡೆ, ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು

Written by - Bhavishya Shetty | Last Updated : May 27, 2024, 06:08 PM IST
    • ಎಲ್ಲರ ಮನ ಗೆದ್ದಿರುವ ಅನ್‌ ಕ್ಯಾಪ್ಡ್ ಆಟಗಾರರ ಬಗ್ಗೆ ಮಾಹಿತಿ
    • ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಅನ್‌ ಕ್ಯಾಪ್ಡ್ ಆಟಗಾರ
    • ಡೆಲ್ಲಿ ಕ್ಯಾಪಿಟಲ್ಸ್‌ನ ಅಭಿಷೇಕ್ ಪೊರೆಲ್‌ ಕೂಡ ಈ ಸೀಸನ್’ನಲ್ಲಿ ಅಬ್ಬರಿಸಿದ್ದಾರೆ
IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ title=
Uncapped Indian Players

Top 5 Indian uncapped run-scorers in IPL 2024: ಪ್ರತಿ ಸೀಸನ್‌’ನಂತೆ, ಐಪಿಎಲ್ 2024ರಲ್ಲಿ ಅನೇಕ ಅನ್‌’ಕ್ಯಾಪ್ಡ್ ಭಾರತೀಯ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಈ ಬಾರಿ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ಯಾಟ್ ಕಮ್ಮಿನ್ಸ್ ತಂಡವನ್ನು 8 ವಿಕೆಟ್‌’ಗಳಿಂದ ಸೋಲಿಸಿದ ಶ್ರೇಯಸ್ ಅಯ್ಯರ್ ಪಡೆ, ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ: ಮೂರು ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ವೈದ್ಯ ತಂಡ  

ಇನ್ನು ಈ ವರದಿಯಲ್ಲಿ, ತಮ್ಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿರುವ ಅನ್‌ ಕ್ಯಾಪ್ಡ್ ಆಟಗಾರರ ಬಗ್ಗೆ ಮಾಹಿತಿ ನೀಡಿಲಿದ್ದೇವೆ.

ರಿಯಾನ್ ಪರಾಗ್, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಅನ್‌ ಕ್ಯಾಪ್ಡ್ ಆಟಗಾರ. ಈ ಸೀಸನ್’ನಲ್ಲಿ ಆಡಿದ 16 ಪಂದ್ಯಗಳ 14 ಇನ್ನಿಂಗ್ಸ್‌’ಗಳಲ್ಲಿ 573 ರನ್ ಗಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಐಪಿಎಲ್ 2024 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಅವರನ್ನು 2020 ರಲ್ಲಿ ಸನ್‌ರೈಸರ್ಸ್ ಡೆಲ್ಲಿ ಕ್ಯಾಪಿಟಲ್ಸ್‌ ಜತೆ ವ್ಯಾಪಾರ ಮಾಡಿತು. ಅಭಿಷೇಕ್ 16 ಪಂದ್ಯಗಳ 16 ಇನ್ನಿಂಗ್ಸ್‌’ಗಳಲ್ಲಿ 32.27 ಸರಾಸರಿಯಲ್ಲಿ 484 ರನ್ ಗಳಿಸಿದ್ದಾರೆ. ಅವರು ಅರೆಕಾಲಿಕ ಸ್ಪಿನ್ ಬೌಲರ್ ಕೂಡ.

ಶಶಾಂಕ್ ಸಿಂಗ್ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನಂತಹ ಫ್ರಾಂಚೈಸಿಗಳಿಗಾಗಿ ಆಡಿದ್ದರು, ಆದರೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್‌’ ಕಣಕ್ಕಿಳಿದಿದ್ದು, ತಂಡ ನಿರಂತರ ಅವಕಾಶಗಳನ್ನು ನೀಡಿತು. ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರಿದರು. ಈ ಆಲ್‌ರೌಂಡರ್ 44.25 ಸರಾಸರಿ ಮತ್ತು 164.65 ಸ್ಟ್ರೈಕ್ ರೇಟ್‌ನಲ್ಲಿ 354 ರನ್ ಗಳಿಸಿದರು.

ಪ್ರಭಾಸಿಮ್ರನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸೀಸನ್’ನಲ್ಲಿ 14 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ 23.86 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 156.80 ಆಗಿತ್ತು. ಎರಡು ಅರ್ಧಶತಕಗಳನ್ನು ಗಳಿಸಿದರು.

ಇದನ್ನೂ ಓದಿ:    “ನಾನೇ SIT ಮುಂದೆ ಹಾಜರಾಗುತ್ತೇನೆ”- ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣನಿಂದ ವಿಡಿಯೋ ರಿಲೀಸ್

ಡೆಲ್ಲಿ ಕ್ಯಾಪಿಟಲ್ಸ್‌ನ ಅಭಿಷೇಕ್ ಪೊರೆಲ್‌ ಕೂಡ ಈ ಸೀಸನ್’ನಲ್ಲಿ ಅಬ್ಬರಿಸಿದ್ದಾರೆ. 12 ಇನ್ನಿಂಗ್ಸ್‌’ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಅವರು 32.70 ಸರಾಸರಿಯಲ್ಲಿ 327 ರನ್ ಗಳಿಸಿದರು ಮತ್ತು ಸ್ಟ್ರೈಕ್ ರೇಟ್ 159.51 ಆಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

                                                                                                      

Trending News