Hassan PenDrive Case: CID ಕಚೇರಿಯಲ್ಲೇ 3 ರಾತ್ರಿ ಕಳೆದ ಪ್ರಜ್ವಲ್, ಮೊಬೈಲ್‌ ಮೇಲೆ SIT ಕಣ್ಣು‌!

Hassan Pen Drive Case: ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಮೊಬೈಲ್‌ ಎಲ್ಲಿದೆ ಎಂದು ಕೇಳಿದ SIT ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್‌ ರೇವಣ್ಣ, ನೀವು ಜಪ್ತಿ ಮಾಡಿರುವ ಮೊಬೈಲ್‌ ಬಿಟ್ಟು ಬೇರೆ ಮೊಬೈಲ್‌ ನನ್ನಲ ಹತ್ತಿರವಿಲ್ಲವೆಂದು ಹೇಳಿದ್ದಾರೆ. ​

Written by - Puttaraj K Alur | Last Updated : Jun 2, 2024, 09:43 AM IST
  • ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ SIT ಅಧಿಕಾರಿಗಳಿಂದ ಪ್ರಜ್ವಲ್‌ ರೇವಣ್ಣ ವಿಚಾರಣೆ
  • ಸಿಐಡಿ ಕಚೇರಿಯಲ್ಲೇ 3 ರಾತ್ರಿಗಳನ್ನು ಕಳೆದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ
  • ಅಶ್ಲೀಲ ವಿಡಿಯೋ ಸೆರೆಹಿಡಿದ ಮೊಬೈಲ್‌ ಮೇಲೆ SIT ಅಧಿಕಾರಿಗಳು ಕಣ್ಣು
Hassan PenDrive Case: CID ಕಚೇರಿಯಲ್ಲೇ 3 ರಾತ್ರಿ ಕಳೆದ ಪ್ರಜ್ವಲ್, ಮೊಬೈಲ್‌ ಮೇಲೆ SIT ಕಣ್ಣು‌! title=
ಮೊಬೈಲ್‌ ಮೇಲೆ SIT ಕಣ್ಣು

Hassan Pen Drive Case: ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಜೂನ್ 6ರವರೆಗೆ ವಿಶೇಷ ತನಿಖಾ ದಳ(SIT)ದ ಕಸ್ಟಡಿಗೊಪ್ಪಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಹೆಚ್ಚಿನ ವಿಚಾರಣೆಗೆ 15 ದಿನ ತನ್ನ ವಶಕ್ಕೆ ನೀಡುವಂತೆ SIT ಅಧಿಕಾರಿಗಳು ಕೇಳಿದ್ದರು. ವಾದ-ವಿವಾದ ಆಲಿಸಿದ್ದ ನ್ಯಾಯಾಲಯ 1 ವಾರ ಕಸ್ಟಡಿಯಲ್ಲಿರಿಸಿಕೊಳ್ಳಲು ಅವಕಾಶ ನೀಡಿದೆ.

ಸದ್ಯ ಪ್ರಕರಣ ಸಂಬಂಧ SIT ಅಧಿಕಾರಿಗಳು ಪ್ರಜ್ವಲ್‌ ರೇವಣ್ಣನನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಿಐಡಿ ಕಚೇರಿಯಲ್ಲೇ ಪ್ರಜ್ವಲ್‌ 3 ರಾತ್ರಿಗಳನ್ನು ಕಳೆದಿದ್ದಾರೆ. ಶನಿವಾರ ಬೆಳಗ್ಗೆ SIT ಸಿಬ್ಬಂದಿ ಕೊಟ್ಟ ಉಪಾಹಾರ ಸೇವಿಸಿ, ಚಹಾ ಕುಡಿದರು. ಬಳಿಕ ಮಧ್ಯಾಹ್ನ 1.30ರವರೆಗೆ SIT ಅಧಿಕಾರಿಗಳು ನಿರಂತರ ವಿಚಾರಣೆ ನಡೆಸಿದೆ. ನಂತರ ಪೊಲೀಸ್‌ ಸಿಬ್ಬಂದಿ ಕೊಟ್ಟಿರುವ ಅನ್ನ-ಸಾಂಬಾರ್‌ ಸೇವಿಸಿ ಕೋಣೆಯಲ್ಲಿ ಕೊಂಚ ವಿಶ್ರಾಂತಿ ಪಡೆದರು. ತದನಂತರ ಮತ್ತೆ SIT ಅಧಿಕಾರಿಗಳು ವಿಚಾರಣೆ ಆರಂಭಿಸಿ ರಾತ್ರಿಯವರೆಗೂ ಪ್ರಶ್ನೆಗಳ ಮೇಳೆ ಪ್ರಶ್ನೆಗಳನ್ನು ಕೇಳಿದರು. SIT ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾದ ಪ್ರಜ್ವಲ್‌, ರಾತ್ರಿ ಊಟ ಮಾಡಿ ಸಪ್ಪೆ ಮುಖ ಮಾಡಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Prajwal Revanna Arrest: ಪ್ರಜ್ವಲ್ ರೇವಣ್ಣನನ್ನು ಮಹಿಳಾ ಅಧಿಕಾರಿಗಳೇ ಬಂಧಿಸಿದ್ದು ಏಕೆ?

ಮೊಬೈಲ್‌ ಮೇಲೆ SIT ಕಣ್ಣು

ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಮೊಬೈಲ್‌ ಎಲ್ಲಿದೆ ಎಂದು ಕೇಳಿದ SIT ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್‌ ರೇವಣ್ಣ, ನೀವು ಜಪ್ತಿ ಮಾಡಿರುವ ಮೊಬೈಲ್‌ ಬಿಟ್ಟು ಬೇರೆ ಮೊಬೈಲ್‌ ನನ್ನಲ ಹತ್ತಿರವಿಲ್ಲವೆಂದು ಹೇಳಿದ್ದಾರೆ. ನನ್ನ ಮೊಬೈಲ್‌ಗಳು ಪಿಎ ಬಳಿ ಇರುತ್ತವೆ. ಅವರು ಕಳೆದು ಹೊಗಿದೆ ಎನ್ನುತ್ತಿದ್ದರು. ಕಳೆದ ವರ್ಷ ಈ ಬಗ್ಗೆ ದೂರು ದಾಖಲಾಗಿರಬೇಕು ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಅಶ್ಲೀಲ ವಿಡಿಯೋ ಸೆರೆಹಿಡಿದಿದ್ದಾರೆ ಎನ್ನಲಾದ ಮೊಬೈಲ್‌ ನಾಶವಾಗಿದ್ದರೆ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿರುವ ಮೂಲ ದಾಖಲೆ ಪತ್ತೆಹಚ್ಚುವುದು ಕಷ್ಟಸಾಧ್ಯ. ಆ ಮೊಬೈಲ್‌ನಿಂದ ಬೇರೆಡೆ ಫಾರ್ವರ್ಡ್‌ ಆಗಿರುವ ವಿಡಿಯೋಗಳು ಎರಡನೇ ಸಾಕ್ಷಿಗಳು ಎನಿಸಿಕೊಳ್ಳುತ್ತವೆ. ಹೀಗಾಗಿ ಅಶ್ಲೀಲ ವಿಡಿಯೋ ಸೆರೆಹಿಡಿದ ಮೊಬೈಲ್‌ ಮೇಲೆ ಇದೀಗ SIT ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಇನ್ನು ಪ್ರಜ್ವಲ್‌ ರೇವಣ್ಣ ಪರ ನ್ಯಾಯವಾದಿ ಅರುಣ್‌ ಅವರು ಶನಿವಾರ ಸಿಐಡಿ ಕಚೇರಿಗೆ ತೆರಳಿ ಪ್ರಜ್ವಲ್‌ ಜೊತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿರುವ ಅವರು ಮುಂದಿನ ಕಾನೂನು ಕ್ರಮಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಪ್ರಕರಣದ ಬಗ್ಗೆ ಇದ್ದ ಕೆಲವು ಗೊಂದಲಗಳನ್ನು ಪ್ರಜ್ವಲ್‌ ಅವರು ವಕೀಲರ ಮೂಲಕ ಬಗೆಹರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ಐಟಿ ವಶದಲ್ಲಿ ಪ್ರಜ್ವಲ್...! ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಚಾಲೆಂಜ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News