ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು: ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ ಪ್ರೀತಂ ಗೌಡ ಬೆಂಬಲಿಗರು

Hassan Lok Sabha Election Result 2024: ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ಕಂಡಿದ್ದು, ಪ್ರಜ್ವಲ್ ರೇವಣ್ಣ ಸೋಲನ್ನು ಅನುಭವಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. 

Written by - Bhavishya Shetty | Last Updated : Jun 4, 2024, 03:32 PM IST
    • ಕಾಂಗ್ರೆಸ್’ನ ಶ್ರೇಯಸ್ ಪಟೇಲ್ ಗೆಲುವು
    • 25 ವರ್ಷಗಳ ದಳಪತಿ ಆಡಳಿತಕ್ಕೆ ಕಾಂಗ್ರೆಸ್ ಡಿಚ್ಚಿ
    • ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಪ್ರೀತಂ ಗೌಡಗೆ ಜೈಕಾರ ಕೂಗಿದ ಬೆಂಬಲಿಗರು
ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು: ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ ಪ್ರೀತಂ ಗೌಡ ಬೆಂಬಲಿಗರು title=
Hassan Lok Sabha Election 2024 Result

Hassan Lok Sabha Election Result 2024: 25 ವರ್ಷಗಳ ದಳಪತಿ ಆಡಳಿತಕ್ಕೆ ಕಾಂಗ್ರೆಸ್ ಡಿಚ್ಚಿ ಹೊಡೆದಿದೆ. ಈಗಾಗಲೇ ಭರ್ಜರಿ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್’ನ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಜೊತೆಗೆ ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ ಸೋಲಿನ ರುಚಿ ಕಂಡಿದ್ದಾರೆ.

ಇದನ್ನೂ ಓದಿ: Mysuru Kodagu Lokasabha Election Result :ಮೈಸೂರು ಕೊಡಗು ಕ್ಷೇತ್ರದಲ್ಲಿ ಮಹಾರಾಜ ಜಯಭೇರಿ 

ಇನ್ನೊಂದೆಡೆ ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ಕಂಡಿದ್ದು, ಪ್ರಜ್ವಲ್ ರೇವಣ್ಣ ಸೋಲನ್ನು ಅನುಭವಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. “ಗೌಡರ ಗೌಡ... ಪ್ರೀತಂ ಗೌಡ” ಎಂದು ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಾ ಡೈರಿ ಸರ್ಕಲ್’ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಜೊತೆ ಸಂಭ್ರಮಾಚರಿಸಿದ್ದಾರೆ.

ಇದನ್ನೂ ಓದಿ: Dakshina Kannada Lok Sabha Election Result: ದಕ್ಷಿಣ ಕನ್ನಡದಲ್ಲಿ ಮತ್ತೆ ಅರಳಿದ ಕಮಲ: ಕ್ಯಾ. ಬ್ರಿಜೇಶ್ ಚೌಟಗೆ ಗೆಲುವು

ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಪ್ರೀತಂ ಗೌಡಗೆ ಜೈಕಾರ ಕೂಗಿದ ಬೆಂಬಲಿಗರು, ಗೌಡರ ಗೌಡ ಪ್ರೀತಂ ಗೌಡ ಎಂದು ಜೈಕಾರ ಕೂಗಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ತಿಕ್‌ ಗೌಡ, ಪುಟ್ಟರಾಜುರನ್ನು ಹೆಗಲ ಮೇಲೆ ಹೊತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News