VIDEO: ಪತ್ನಿ ಸಾಕ್ಷಿ ಕಾಲೆಳೆದ ಧೋನಿ!

ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಗೆ ಸಂಬಂಧಿಸಿದ ಆಸಕ್ತಿದಾಯಕ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Last Updated : Dec 17, 2019, 11:47 AM IST
VIDEO: ಪತ್ನಿ ಸಾಕ್ಷಿ ಕಾಲೆಳೆದ ಧೋನಿ! title=

ನವದೆಹಲಿ: ಆರು ತಿಂಗಳು ಟೀಮ್ ಇಂಡಿಯಾದಿಂದ ದೂರವಿದ್ದರೂ, ಮಹೇಂದ್ರ ಸಿಂಗ್ ಧೋನಿ(Mahendra Singh Dhoni)  ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರು ಕ್ರಿಕೆಟ್ ಹೊರತುಪಡಿಸಿ ಬೇರೆ ಆಟವನ್ನು ಆಡುತ್ತಾರೆ. ಏತನ್ಮಧ್ಯೆ, ಧೋನಿ ತಮ್ಮ ಪತ್ನಿ ಸಾಕ್ಷಿಗೆ ಸಂಬಂಧಿಸಿದ ಆಸಕ್ತಿದಾಯಕ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಸಾಕ್ಷಿ ಧೋನಿ (Sakshi Dhoni)  ಈ ವೀಡಿಯೊದಲ್ಲಿ ಅವರ ಸಂವಾದವನ್ನು ಓದಲು ಪ್ರಯತ್ನಿಸುತ್ತಿದ್ದಾರೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಕ್ಷಿ ಧೋನಿಯ ಈ ವಿಡಿಯೋ ಜಾಹೀರಾತು ಚಿತ್ರೀಕರಣದ ವೇಳೆ ತೆಗೆಯಲಾಗಿದೆ. ಜಾಹೀರಾತಿನ ಚಿತ್ರೀಕರಣದ ಮೊದಲು ಸಾಕ್ಷಿ ತನ್ನ ಸಂಭಾಷಣೆಯನ್ನು ಪೂರ್ವಾಭ್ಯಾಸ ಮಾಡುತ್ತಿದ್ದಾರೆ. ಅವಳು ಕಾಗದದಲ್ಲಿ ಬರೆದ ಸಂಭಾಷಣೆಗಳನ್ನು ಅಭ್ಯಾಸ ಮಾಡುತ್ತಾ ತೊದಲುತ್ತಿದ್ದಾರೆ. ಹೀಗೆ ಸಂಭಾಷಣೆಯನ್ನು ಅಭ್ಯಾಸ ಮಾಡುವಾಗ ಅವರ ಕಣ್ಣು ಕ್ಯಾಮೆರಾ ಬದಲಿಗೆ ಕಾಗದವನ್ನು ನೋಡುತ್ತಿದ್ದವು. ಇದನ್ನು ನೋಡಿ ಧೋನಿ ಸೇರಿದಂತೆ ಅಲ್ಲಿದ್ದವರು ನಗುತ್ತಾರೆ. ಅಷ್ಟೇ ಏಕೆ ಸ್ವತಃ ಸಾಕ್ಷಿ ಧೋನಿಯವರಿಗೂ ನಗು ತಡೆಯಲು ಸಾಧ್ಯವಾಗುತ್ತಿಲ್ಲ. 

ಎರಡರಿಂದ ಮೂರು ಬಾರಿ ಪ್ರಯತ್ನ ಮಾಡಿದಾಗಲೂ ಸಾಕ್ಷಿಗೆ ಸರಿಯಾಗಿ ಸಂಭಾಷಣೆಯನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಸಾಕ್ಷಿಗೆ ಸಲಹೆ ನೀಡಿದ ಧೋನಿ ಹಾಗೆ ನಗುತ್ತಾ ಅವರ ಕಾಲೆಳೆದಿದ್ದಾರೆ. ಅದೇನು.... ಅಂತ ನೀವೇ ನೋಡಿ....

ವೀಡಿಯೊವನ್ನು ಪೋಸ್ಟ್ ಮಾಡಿದ ಎಂಎಸ್ ಧೋನಿ, 'ಸಮಯ ವೇಗವಾಗಿ ಓಡುತ್ತಿದೆ. ಇದು ಒಂದು ವರ್ಷದ ಹಳೆಯ ವಿಡಿಯೋ' ಎಂದು ಬರೆದಿದ್ದಾರೆ. 
 

Trending News