ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಶುಭ ಸುದ್ದಿ..! 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ

Railway Recruitment 2024 : ರೈಲ್ವೆ ನೇಮಕಾತಿ ಮಂಡಳಿಯು ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್‌ ಪ್ರಕಟಿಸಿದೆ. ರೈಲ್ವೇ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಎಲ್ಲರಿಗೂ ಇದೊಂದು ಸಂತಸದ ಸುದ್ದಿ. 7,911 ಜೆಇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

Written by - Krishna N K | Last Updated : Jun 19, 2024, 02:48 PM IST
    • ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯಿಂದ ಸಿಹಿ ಸುದ್ದಿ
    • ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ
    • ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಯ ಮಾನದಂಡಗಳ ಸಂಪೂರ್ಣ ವಿವರ
ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಶುಭ ಸುದ್ದಿ..! 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆ title=

RRB JE Recruitment 2024 Notification: ಉದ್ಯೋಗಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದ್ದು, ಖಾಲಿ ಇರುವ 7,911 ಜೆಇ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಯ ಮಾನದಂಡಗಳ ಸಂಪೂರ್ಣ ವಿವರ ನಿಮಗಾಗಿ.. ಇಲ್ಲಿದೆ..

ರೈಲ್ವೆ ನೇಮಕಾತಿ ಮಂಡಳಿ (RRB) JE ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 7,911 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಜೂನಿಯರ್ ಇಂಜಿನಿಯರ್ (Safety, non-safety), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಇದನ್ನೂ ಓದಿ:ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: 19 ರೈಲುಗಳ ಸಂಚಾರ ರದ್ದು

ಖಾಲಿ ಹುದ್ದೆಗಳ ವಿವರಗಳು - ರೈಲ್ವೆ ನೇಮಕಾತಿ ಮಂಡಳಿ (RRB) JE 7,911 ಹುದ್ದೆಗಳ ಭರ್ತಿ. 

ಅರ್ಹತೆ - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ - ಅಧಿಕೃತ ಪ್ರಕಟಣೆಯ ನಂತರ, ಈ ಪೋಸ್ಟ್‌ಗಳ ಭರ್ತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. RRB ಅಧಿಕೃತ ವೆಬ್‌ಸೈಟ್ rrbcdg.gov.in ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡಿದೆ.

ಅರ್ಜಿ ಸಲ್ಲಿಸುವ ವಿಧಾನ 
ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು RRB ಅಧಿಕೃತ ವೆಬ್‌ಸೈಟ್ rrbcdg.gov.in ಭೇಟಿ ನೀಡಿ.
ಮುಖಪುಟದಲ್ಲಿ JE ನೋಂದಣಿ 2024 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ವಿವರಗಳನ್ನು ನಮೂದಿಸಿ.
ಪ್ರತಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ - ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT1&2) ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. ಆಸಕ್ತ ಅಭ್ಯರ್ಥಿಗಳು ಕಾಲಕಾಲಕ್ಕೆ ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News