T20 World Cup 2024: ಜೂನ್ 28 ರಂದು ಬಾರ್ಬಡೋಸ್‌ನಲ್ಲಿ, ಟಿ20 ವಿಶ್ವಕಪ್ 2024ರ (T20 World Cup 2024) ಫೈನಲ್ ಪಂದ್ಯ ಭಾರತ(India) ಮತ್ತು ದಕ್ಷಿಣ ಆಫ್ರಿಕಾ(South Africa) ತಂಡದ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ತಂಡಗಳು ಭಾರಿ ಸಿದ್ದತೆ ನಡೆಸಿದೆ. ಇದರ ಮಧ್ಯೆ ಪಂದ್ಯದ ಅಂಪೈರ್‌ಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್‌ನ ಕ್ರಿಸ್ ಗಫ್ನಿ(Cris Grifney) ಮತ್ತು ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ತ್(Richard Illingworth) ಅವರನ್ನು ಅಂಪೈರ್‌ಗಳನ್ನಾಗಿ ನೇಮಿಸಲಾಗಿದೆ. ಈ ಇಬ್ಬರು ಆನ್-ಫೀಲ್ಡ್ ಅಂಪೈರ್‌ಗಳಾಗಿದ್ದು, ಇಂಗ್ಲೆಂಡ್‌ನ ರಿಚರ್ಡ್ ಕೆಟಲ್‌ಬ್ರೋ(Richard kettleborough) ಟಿವಿ ಅಂಪೈರ್ ಆಗಿರಲಿದ್ದಾರೆ. ಆಸ್ಟ್ರೇಲಿಯಾದ ರಾಡ್ನಿ ಟಕರ್(Rodney Tucker) ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ, ರಿಚಿ ರಿಚರ್ಡ್ಸನ್ ರೆಫರಿಯಾಗಿ ಕೆಲಸ ಮಾಡಲಿದ್ದಾರೆ
ಇದನ್ನೂ ಓದಿ: ರೋಹಿತ್ ವಿರುದ್ಧ ಇಂಜಮಾಮ್ ಉಲ್ ಹಕ್ ಕಿಡಿ ಕಿಡಿ: " ನೀನು ನಮಗೆ ಪಾಠ ಹೇಳಿ ಕೊಡ್ತೀಯಾ" ಎಂದ ಪಾಕ್ ಮಾಜಿ ನಾಯಕ
ಕಳೆದ ನಾಲ್ಕು ವರ್ಷಗಳಲ್ಲಿ, ಐಸಿಸಿ(ICC) ಟೂರ್ನಮೆಂಟ್‌ಗಳಲ್ಲಿ ಭಾರತದ ಐದು ನಾಕೌಟ್ ಸೋಲುಗಳಲ್ಲಿ, ನಾಲ್ಕರಲ್ಲಿ ಇಲ್ಲಿಂಗ್‌ವರ್ತ್ ಮತ್ತು ಕೆಟಲ್‌ಬ್ರೋ ಅಂಪೈರ್‌ಗಳಾಗಿದ್ದರು. 2019 ರ ವಿಶ್ವಕಪ್ ಸೆಮಿಫೈನಲ್, 2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, 2023 WTC ಫೈನಲ್ ಮತ್ತು 2023 ವಿಶ್ವಕಪ್ ಫೈನಲ್‌ಗಳಲ್ಲಿ ಕೂಡ ಭಾರತ ತಂಡ ಸೋಲನ್ನು ಅನುಭವಿಸಿತ್ತು.
2013ರ ನಂತರ ಭಾರತ ತಂಡ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡ ಇಲ್ಲಿಯವರೆಗೆ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಇದೀಗ ಭಾರತಕ್ಕೆ ಯಮನಾಗಿ ಕಾಡುವ ಅಂಪೈರ್‌ಗಳು ಈ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಭಾರತ ತಂಡಕ್ಕೆ ದೊಡ್ಡ ತಲೆ ನೋವಾಗಿ ಕಾಡಿದೆ. ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಈ ವಿಚಾರ ಗಾಬರಿ ಮೂಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ