Gautam Gambhir demands to BCCI: ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ರೂಪದಲ್ಲಿ ಹೊಸ ಮುಖ್ಯ ಕೋಚ್ ಸಿಕ್ಕಿದೆ, ಆದರೆ ತಂಡದ ಇತರ ಸಿಬ್ಬಂದಿಯನ್ನು ಇನ್ನೂ ಆಯ್ಕೆ ಮಾಡಿಲ್ಲ. ಈ ನಡುವೆ ಗಂಭೀರ್ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕ್ರಿಕ್ ಬಜ್’ನಲ್ಲಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ನೆದರ್‌ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ರಿಯಾನ್ ಟೆನ್ ಡ್ಯೂಷೆ ಅವರನ್ನು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮುಂಬರುವ ಶ್ರೀಲಂಕಾ ಪ್ರವಾಸದಿಂದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಅಧಿಕಾರಾವಧಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಈ ಸ್ಟಾರ್ ಕ್ರಿಕೆಟರ್ ಜೊತೆ ಶುಭ್ಮನ್ ಗಿಲ್ ಸಹೋದರಿ ಮೋಜು ಮಸ್ತಿ!
ಗಂಭೀರ್ ಮತ್ತು ರಿಯಾನ್ ಟೆನ್ ಡ್ಯೂಷೆ ಈ ಹಿಂದೆ ಕೆಕೆಆರ್ ಪರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೆಕೆಆರ್ ಮಾತ್ರವಲ್ಲದೆ, ಕೆರಿಬಿಯನ್ ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಕ್ರಿಕೆಟ್ ಮತ್ತು ಐಎಲ್’ಟಿ 20 ಸೇರಿದಂತೆ ಫ್ರ್ಯಾಂಚೈಸ್’ನ ಅಂಗಸಂಸ್ಥೆಗಳಲ್ಲಿ ಟೆನ್ ಡ್ಯೂಷೆ ಕೆಲಸ ಮಾಡಿದ್ದಾರೆ. ಆದರೆ ಅಂತಿಮ ನಿರ್ಧಾರವು ಬಿಸಿಸಿಐ ಮೇಲಿದೆ.
ಈ ಹಿಂದೆ ಕೆಲವು ಮಾಧ್ಯಮ ವರದಿಗಳು, ಮಾಜಿ ಭಾರತೀಯ ಆಲ್’ರೌಂಡರ್ ಮತ್ತು ಕೆಕೆಆರ್ ಬ್ಯಾಕ್‌ರೂಮ್ ತಂಡದ ಭಾಗವಾಗಿರುವ ಅಭಿಷೇಕ್ ನಾಯರ್ ಗಂಭೀರ್ ತಂಡಕ್ಕೆ ಸಹಾಯಕ ಕೋಚ್ ಆಗಿ ಸೇರಿಕೊಳ್ಳಬಹುದು ಎಂದು ಹೇಳಿಕೊಂಡಿತ್ತು. ಇನ್ನೊಂದೆಡೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ತಂಡದ ಸದಸ್ಯರಾಗಿದ್ದ ಟಿ ದಿಲೀಪ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಉಳಿಸಿಕೊಳ್ಳಲು ಬಿಸಿಸಿಐ ಬಯಸಿದೆ. ಹೀಗಿರುವಾಗ ಟೆನ್ ಡ್ಯೂಷ್ ಅವರು ಆಯ್ಕೆಯಾದರೆ ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.
ಇದನ್ನೂ ಓದಿ: ರೋಹಿತ್ ಶರ್ಮಾ 2ನೇ ಪತ್ನಿ ಇವರೇ! ಧರ್ಮಪತ್ನಿ ರಿತಿಕಾಗೂ ಗೊತ್ತಿದೆ ಈ ವಿಚಾರ… ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿಕೆ
ಗಂಭೀರ್ ಅವರ ಮುಖ್ಯ ಕೋಚ್ ಅಧಿಕಾರಾವಧಿ 2027 ರ ಅಂತ್ಯದವರೆಗೆ ಇದೆ. ಗಂಭೀರ್ ಮುಖ್ಯ ಕೋಚ್ ಆದ ನಂತರ, ಟೀಮ್ ಇಂಡಿಯಾ ತನ್ನ ಮೊದಲ ICC ಟೂರ್ನಮೆಂಟ್ ಅನ್ನು ಚಾಂಪಿಯನ್ಸ್ ಟ್ರೋಫಿ ರೂಪದಲ್ಲಿ 2025 ರಲ್ಲಿ ಆಡಲಿದೆ. ಈ ವರ್ಷ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುವ ಜೊತೆಗೆ ಅದನ್ನು ಗೆಲ್ಲುವತ್ತ ಟೀಮ್ ಇಂಡಿಯಾ ಕಣ್ಣಿಟ್ಟಿದೆ. ಭಾರತ 2026ರಲ್ಲಿ ಟಿ20 ವಿಶ್ವಕಪ್ ಆಡಬೇಕಿದೆ. ನಂತರ 2027 ರಲ್ಲಿ ತಂಡವು ಏಕದಿನ ವಿಶ್ವಕಪ್ ಅನ್ನು ಆಡಲಿದೆ ಮತ್ತು ಅದೇ ವರ್ಷದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಕೂಡ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ