IND-C vs AUS-C WCL 2024: ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್​!

World Championship of Legends 2024: ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಭಾರಿಸಿರುವ ಟೀಂ ಇಂಡಿಯಾ ಭಾನುವಾರ(ಜುಲೈ 13)ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. 

Written by - Puttaraj K Alur | Last Updated : Jul 13, 2024, 09:19 AM IST
  • ಪಠಾಣ್ ಬ್ರದರ್ಸ್ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ
  • ಆಸೀಸ್‌ ಮಣೀಸಿ ಫೈನಲ್​ಗೇರಿದ ಇಂಡಿಯಾ ಚಾಂಪಿಯನ್ಸ್​
  • ನಾಳೆ ಪ್ರಶಸ್ತಿಗಾಗಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೆಣಸಾಟ
IND-C vs AUS-C WCL 2024: ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್​! title=
ಫೈನಲ್​ಗೇರಿದ ಇಂಡಿಯಾ ಚಾಂಪಿಯನ್ಸ್

IND-C vs AUS-C WCL 2024: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 2ನೇ ಸೆಮಿಫೈನಲ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು 86 ರನ್‌ಗಳಿಂದ ಮಣಿಸುವ ಮೂಲಕ ಇಂಡಿಯಾ ಲೆಜೆಂಡ್ಸ್ ಫೈನಲ್‌ ಪ್ರವೇಶಿಸಿದೆ. ನಾರ್ಥಾಂಪ್ಟನ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ಸ್ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಇಂಡಿಯಾ ಚಾಂಪಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 254 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿತು. ದೊಡ್ಡ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಕೇವಲ 168 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇಂಡಿಯಾ ಚಾಂಪಿಯನ್ಸ್ ಪರ ರಾಬಿನ್‌ ಉತ್ತಪ್ಪ 35 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6‌ ಬೌಂಡರಿ ಇದ್ದ 65 ರನ್‌ಗಳ ಸ್ಫೋಟಕ ಆಟವಾಡಿದದರು. ನಾಯಕ ಯುವರಾಜ್‌ ಸಿಂಗ್ ಸಹ 28 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4‌ ಬೌಂಡರಿ ಇದ್ದ 59‌ ರನ್‌ ಗಳಿಸಿ ಮಿಂಚಿದರು.

ಇದನ್ನೂ ಓದಿ: ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?

ಬಳಿಕ ಬಂದ ಪಠಾಣ್‌ ಬ್ರದರ್ಸ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ನೀಡಿದರು. ಯೂಸಫ್‌ ಪಠಾಣ್‌ 23 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4‌ ಬೌಂಡರಿ ಇದ್ದ ಅಜೇಯ 51 ರನ್‌ ಗಳಿಸಿದರೆ, ಇರ್ಫಾನ್‌ ಪಠಾಣ್‌‌ 19 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿ ಇದ್ದ 50 ರನ್ ಭರ್ಜರಿ ಅರ್ಧಶತಕ ಭಾರಿಸಿ ಮಿಂಚಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಪೀಟರ್ ಸಿಡಲ್ 4‌ ವಿಕೆಟ್‌ ಪಡೆದು ಮಿಂಚಿದರು. ನಾಥನ್ ಕೌಲ್ಟರ್-ನೈಲ್ ಮತ್ತು ಕ್ಸೇವಿಯರ್ ಡೊಹೆರ್ಟಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.  

ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಟಿಮ್ ಪೈನ್(ಅಜೇಯ 40) ಉತ್ತಮ ಆಟವಾಡಿದರು. ಇನ್ನುಳಿದಂತೆ ನಾಥನ್ ಕೌಲ್ಟರ್-ನೈಲ್ (30), ಕ್ಯಾಲಮ್ ಫರ್ಗುಸನ್ (23), ಡ್ಯಾನ್ ಕ್ರಿಶ್ಚಿಯನ್ (18) ಮತ್ತು ಆರನ್ ಫಿಂಚ್ (16) ರನ್‌ ಗಳಿಸಿದರು. ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಧವಳ್‌ ಕುಲಕರ್ಣಿ ಮತ್ತು ಪವನ್‌ ನೇಗಿ ತಲಾ 2, ರಾಹುಲ್‌ ಶುಕ್ಲಾ, ಹರ್ಭಜನ್ ಸಿಂಗ್ ಮತ್ತು ಇರ್ಫಾನ್‌ ಪಠಾಣ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: ಟೆನಿಸ್‌ ವೀಕ್ಷಿಸಲು ಸ್ಟೈಲಿಶ್‌ ಲುಕ್‌ನಲ್ಲಿ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ

ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಭಾರಿಸಿರುವ ಟೀಂ ಇಂಡಿಯಾ ಭಾನುವಾರ(ಜುಲೈ 13)ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News