ಲೈಂಗಿಕ ಆರೋಗ್ಯದ ಕುರಿತು ಬಹುತೇಕ ಜನರು ಜಾಗ್ರತೆ ವಹಿಸುವುದಿಲ್ಲ. ಪರಿಣಾಮವಶಾತ್ ಹಲವರು ಅದರ ಗಂಭೀರ ಪರಿಣಾಮಗಳನ್ನು ಎದುರಿಸುತ್ತಾರೆ. ಕೆಲ ದಿನಗಳ ಹಿಂದೆ ಅಮೇರಿಕಾದಲ್ಲಿ ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ
ಅಮೆರಿಕಾದ ವೈದ್ಯರು ಕೇಸ್ ಸ್ಟಡಿವೊಂದನ್ನು ನಡೆಸಿದ್ದಾರೆ. 'Almost Killed by Love' ಹೆಸರಿನ ಈ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಹಿರಂಗಗೊಂಡಿವೆ.
ಅಮೇರಿಕಾ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಾಶಿತಗೊಂಡ ಈ ಸಂಶೋಧಾನಾ ವರದಿಯಲ್ಲಿ ತನ್ನ ಪತಿ ಜೊತೆ ನಿರಂತರವಾಗಿ ಶಾರೀರಿಕ ಸಂಬಂಧ ಬೆಳೆಸಿದ ಮಹಿಳೆಯೋರ್ವರು ಅಲರ್ಜಿಗೆ ತುತ್ತಾಗಿದ್ದರು ಎಂದು ಹೇಳಲಾಗಿದೆ. ಅಲರ್ಜಿ ಕಾರಣದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದ ಮಹಿಳೆ ಸ್ಥಿತಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡುವ ಹಂತಕ್ಕೆ ತಲುಪಿದೆ.
ಸೆಕ್ಸ್ ಮಾಡುವ ವೇಳೆ ಮಹಿಳೆಯ ಪತಿ ಕೆಲ ಮಾತ್ರೆಗಳನ್ನು ಸೇವಿಸುತ್ತಿದ್ದು, ಇದರ ಪರಿಣಾಮವಾಗಿ ಆತನ ವೀರ್ಯದಲ್ಲಿ ಕೆಲ ಬದಲಾವಣೆಗಳು ಆಗಿದ್ದವು ಎಂದು ಕೇಸ್ ಸ್ಟಡಿ ಹೇಳಿದೆ. ಪತಿಯ ಈ ಬದಲಾವಣೆ ಪತ್ನಿಯಲ್ಲಿ 'ಎನಾಫಾಯಿಲೈಕ್ಟಿಕ್ ರಿಯಾಕ್ಷನ್'ಗೆ ಕಾರಣವಾಗಿದೆ. ಈ ರಿಯಾಕ್ಷನ್ ನಿಂದ ಹರಸಾಹಸಪಟ್ಟು ಮಹಿಳೆ ಬದುಕುಳಿದಿದ್ದಾರೆ.
'ಎನಾಫಾಯಿಲೈಕ್ಟಿಕ್ ರಿಯಾಕ್ಷನ್' ಅಂದರೇನು?
Almost Killed by Love ಹೆಸರಿನ ಈ ಕೇಸ್ ಸ್ಟಡಿಯಲ್ಲಿ ನಮೂದಿಸಿರುವ ಪ್ರಕಾರ ಪತಿ ಜೊತೆ ಸೆಕ್ಸ್ ನಡೆಸಿದ ಬಳಿಕ ಪತ್ನಿಯಲ್ಲಿ ತಲೆಸುತ್ತುವಿಕೆ, ಡಯೋರಿಯಾ ಹಾಗೂ ಕೈ-ಕಾಲುಗಳಲ್ಲಿ ತುರಿಕೆ ಕಾಣಿಸಿಕೊಳ್ಳಲಾರಂಭಿಸಿದೆ. ವೈದ್ಯರು ಹೇಳುವ ಪ್ರಕಾರ ಮಹಿಳೆ ಮೊದಲು ಮಹಿಳೆಯ ರಕ್ತದೊತ್ತಡದಲ್ಲಿ ಕಡಿಮೆಯಾಗಿದ್ದು ಕಂಡುಬಂದಿದೆ. ಬಳಿಕ ಅವರು ಎನಾಫಾಯಿಲೈಕ್ಟಿಕ್ ರಿಯಾಕ್ಷನ್ ಗೆ ತುತ್ತಾಗಿದ್ದು ತಿಳಿದುಬಂದಿದೆ.
ಪೆನ್ಸಿಲಿನ್ ಆಂಟಿಬಯೋಟಿಕ್ ಕಾರಣ
ವೈದ್ಯರು ನಡೆಸಿರುವ ತನಿಖೆಯ ಪ್ರಕಾರ ಪತಿ ಬ್ಯಾಕ್ಟಿರಿಯಲ್ ಇನ್ಫೆಕ್ಷನ್ ಗೆ ತುತ್ತಾಗಿದ್ದರು ಎಂದಿದ್ದಾರೆ. ಇದನ್ನು ಗುಣಪಡಿಸಲು ಅವರು ನೈಫಸಿಲಿನ್ ಆಂಟಿ-ಬಯೋಟಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಇದು ಪೆನ್ಸಿಲಿನ್ ಗ್ರೂಪ್ ನ ಆಂಟಿ-ಬಯೋಟಿಕ್ ಆಗಿದೆ. ಸೆಕ್ಸ್ ಸಂಬಂಧ ಬೆಳೆಸುವ ವೇಳೆ ಪುರುಷನ ವೀರ್ಯದ ಸಂಪರ್ಕಕ್ಕೆ ಪತ್ನಿ ಬಂದಿದ್ದು, ಪೆನ್ಸಿಲಿನ್ ಕಾರಣ ಅವಳಲ್ಲಿ ಈ ಅಲರ್ಜಿ ಕಾಣಿಸಿಕೊಂಡಿದೆ. ಪತಿ ತೆಗೆದುಕೊಳ್ಳುತ್ತಿದ್ದ ಪೆನ್ಸಿಲಿನ್ ಆತನ ಸ್ಪರ್ಮ್ ಮೂಲಕ ಮಹಿಳೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ವೈದ್ಯರು ನೀಡಿದ ಸಲಹೆ ಏನು?
ಇದಾದ ಬಳಿಕ ಜನಸಾಮಾನ್ಯರಿಗೆ ಸಲಹೆ ನೀಡಿರುವ ವೈದ್ಯರು, ರೋಗಿಗಾಗಿ ಔಷಧಿ ಬರೆದು ಕೊಡುವ ಮೊದಲು ಆ ಔಷಧಿಯಿಂದ ಆಗುವ ರಿಯಾಕ್ಷನ್ ಬಗ್ಗೆಯೂ ಕೂಡ ರೋಗಿಗಳಿಗೆ ತಿಳಿಹೇಳಬೇಕು. ಔಷಧಿಯ ಪರಿಣಾಮ ಅವರ ದೇಹದ ಮೇಲೆ ಹೇಗೆ ಆಗುತ್ತದೆ ಎಂಬುದನ್ನೂ ಸಹ ಅವರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ.