ನವದೆಹಲಿ: ಶರದ್ ಪವಾರ್ ಅವರ ನವದೆಹಲಿ ನಿವಾಸದಲ್ಲಿನ ಸರ್ಕಾರ ಭದ್ರತೆಯನ್ನು ಹಿಂತೆಗೆದುಕೊಂಡ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಶುಕ್ರವಾರ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಮಹಾರಾಷ್ಟ್ರದ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಕೂಡ ಈ ವಿಷಯವನ್ನು ಎತ್ತಿದ್ದು, ದೆಹಲಿಯ 6, ಜನಪಥ್ ನಿವಾಸದಲ್ಲಿ ಭದ್ರತೆಯನ್ನು ಹಿಂಪಡೆದಿದ್ದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಜಯ್ ರೌತ್. ಇದು ಆಘಾತಕಾರಿ? ಶರದ್ ಪವಾರ್ ಅವರು ಬೆದರಿಕೆಗಳನ್ನು ಎದುರಿಸುತ್ತಿರುವ ಮತ್ತು ಈ ಹಿಂದೆ ಪವಾರ್ ಮೇಲೆ ಹಲ್ಲೆ ನಡೆದಿರುವುದು ಪ್ರಧಾನಿಗೆ ತಿಳಿದಿದೆ. ನಾವು ಅದಕ್ಕೆ ಸಾಕ್ಷಿಯಾಗಿದ್ದೇವೆ" ಎಂದು ಹೇಳಿದ್ದಾರೆ.
ಕೇಂದ್ರವು ಈ ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಭದ್ರತೆಯನ್ನು ಕೆಳಮಟ್ಟಕ್ಕಿಳಿಸಿತ್ತು, ಮತ್ತು ಈಗ ಅದು ಪವಾರ್ ಅವರ ನಿವಾಸದಲ್ಲಿನ ಭದ್ರತೆಯನ್ನು ಹಿಂತೆಗೆದುಕೊಂಡಿದೆ, ಇದು ಗಂಭೀರ ಕಳವಳಕಾರಿ ಸಂಗತಿಯಾಗಿದೆ ಎಂದು ರೌತ್ ಹೇಳಿದ್ದಾರೆ.ಏತನ್ಮಧ್ಯೆ, ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಕೂಡ ಪ್ರತಿಪಕ್ಷ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರದ ಬದಲಾವಣೆಯಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು. "ಅದಕ್ಕಾಗಿಯೇ ಬಿಜೆಪಿ ಈಗ ಸೇಡು ತೀರಿಸಿಕೊಳ್ಳುತ್ತಿದೆ? ಪ್ರಜಾಪ್ರಭುತ್ವದಲ್ಲಿ ಇದು ಅಪಾಯಕಾರಿ" ಎಂದು ಪಾಟೀಲ್ ಹೇಳಿದರು.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ವಸತಿ ಸಚಿವ ಜಿತೇಂದ್ರ ಅವಾದ್,"ಶರದ್ ಪವಾರ್ ಸಹ್ಯಾದ್ರಿ ಪರ್ವತಗಳಂತೆ? ಯಾವುದೇ ಬೆದರಿಸುವ ತಂತ್ರಗಳಿಂದ ಅವರು ಮಣಿಯುವುದಿಲ್ಲ ಎಂದಿದ್ದಾರೆ."ಜನಸಾಮಾನ್ಯರ ಪ್ರೀತಿಯು ಪವಾರ್ ಸಾಹೇಬರ ನಿಜವಾದ ಭದ್ರತಾ ಕವರ್" ಆಗಿರುವುದರಿಂದ ಆತಂಕಪಡಬೇಕಾಗಿಲ್ಲ ಎಂದು ಅವಾದ್ ಹೇಳಿದರು. ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯ ಪವಾರ್ ನಿವಾಸದಲ್ಲಿ ನಿಯೋಜಿಸಲಾದ ದೆಹಲಿ ಪೊಲೀಸರ ಭದ್ರತಾ ಸಿಬ್ಬಂದಿಯನ್ನು ಜನವರಿ 20 ರಿಂದ ಹಠಾತ್ತನೆ ಹಿಂತೆಗೆದುಕೊಳ್ಳಲಾಯಿತು.