Lakshmi Narayana Yoga 2024: ಲಕ್ಷ್ಮೀ ನಾರಾಯಣ ಯೋಗದಿಂದ ಈ 3 ರಾಶಿಗೆ ಅದೃಷ್ಟದ ಜೊತೆಗೆ ಸುಖ-ಸಂಪತ್ತು ಸಿಗಲಿದೆ!

Lakshmi Narayana Yoga 2024: ಶುಕ್ರ & ಗ್ರಹಗಳ ರಾಜಕುಮಾರ ಬುಧ ಈ ತಿಂಗಳು ಕೆಲವು ಪ್ರಮುಖ ರಾಶಿಗಳ ಜೀವನದಲ್ಲಿ ಬದಲಾವಣೆ ತರಲಿವೆ. ಜುಲೈ 19ರಂದು ಬುಧ ಗ್ರಹವು ಕರ್ಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದೆ. ಜುಲೈ 31ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಈ 2 ಗ್ರಹಗಳ ಸಂಯೋಜನೆಯಿಂದ ಸಿಂಹರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗವು ಉಂಟಾಗುತ್ತದೆ.

Lakshmi Narayana Yoga 2024: ನವಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ನಡೆಸುತ್ತವೆ. ಕೆಲ ಗ್ರಹಗಳು ಒಂದೇ ರಾಶಿಯಲ್ಲಿ ವರ್ಷಗಟ್ಟಲೆ ಇದ್ದರೆ, ಕೆಲವು ವಾರಗಟ್ಟಲೆ ಇರುತ್ತವೆ. ಈ ರಾಶಿ ಬದಲಾವಣೆಯಿಂದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಶುಕ್ರ & ಗ್ರಹಗಳ ರಾಜಕುಮಾರ ಬುಧ ಈ ತಿಂಗಳು ಕೆಲವು ಪ್ರಮುಖ ರಾಶಿಗಳ ಜೀವನದಲ್ಲಿ ಬದಲಾವಣೆ ತರಲಿವೆ. ಜುಲೈ 19ರಂದು ಬುಧ ಗ್ರಹವು ಕರ್ಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದೆ. ಜುಲೈ 31ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಈ 2 ಗ್ರಹಗಳ ಸಂಯೋಜನೆಯಿಂದ ಸಿಂಹ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗವು ಉಂಟಾಗುತ್ತದೆ. ಇದು ರಾಜಯೋಗಗಳಲ್ಲೇ ಅತ್ಯಂತ ಮಂಗಳಕರ ರಾಜಯೋಗ. ಈ ರಾಜಯೋಗದ ಮೂಲಕ 3 ರಾಶಿಯವರಿಗೆ ಉತ್ತಮ ಸಮಯ ಶುರುವಾಗಲಿದೆ. ಯಾವ ರಾಶಿಯವರು ಈ ಯೋಗದಿಂದ ಅದೃಷ್ಟ ಪಡೆಯುತ್ತಾರೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /3

ಮೇಷ ರಾಶಿಯವರಿಗೆ 5ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. ಇದರಿಂದ ಮೇಷ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಪ್ರಗತಿ ಸಾಧಿಸುತ್ತಾರೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಈ ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ಕುಟುಂಬಸ್ಥರೊಂದಿಗೆ ನೀವು ಸಂತೋಷದ ಪ್ರವಾಸ ಮಾಡಬಹುದು. ಅನಿರೀಕ್ಷಿತ ಆರ್ಥಿಕ ಅದೃಷ್ಟವು ನಿಮಗೆ ಲಭಿಸಲಿದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ವಾಹನ ಅಥವಾ ಇತರ ಆಸ್ತಿಗಳನ್ನು ಖರೀದಿಸುವ ಅವಕಾಶಗಳು ಸಿಗಲಿವೆ. ಆರೋಗ್ಯಕ್ಕೆ ಇದು ಉತ್ತಮ ಸಮವಾಗಿದೆ. ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.  

2 /3

ಮಿಥುನ ರಾಶಿಯ 3ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತಿದೆ. ಈ ರಾಶಿಯಲ್ಲಿ ಜನಿಸಿದವರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುವ ಅವಕಾಶ ಪಡೆಯಲಿದ್ದಾರೆ. ಕೆಲಸದ ಸಂದರ್ಭಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ. ಇದು ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಅವಿವಾಹಿತರಿಗೆ ಉತ್ತಮ ವಿವಾಹ ನಿರೀಕ್ಷೆಗಳಿವೆ. ಅನೇಕ ಯೋಜಿತ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮ್ಮ ಆರೋಗ್ಯವು ತುಂಬಾ ತೃಪ್ತಿಕರವಾಗಿರುತ್ತದೆ.

3 /3

ಸಿಂಹ ರಾಶಿಯವರ ಲಗ್ನ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಬಹುಕಾಲದಿಂದ ಅಪೂರ್ಣಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬ ಸದಸ್ಯರಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ವ್ಯಾಪಾರದಲ್ಲಿ ಲಾಭ ಬರಲಿದ್ದು, ಹೊಸ ಆದಾಯದ ಮೂಲಗಳು ಸಿಗಲಿವೆ. ವಿವಾಹಿತರಿಗೆ ಮತ್ತು ಮಕ್ಕಳಿಗೆ ಸಂತೋಷದ ಸುದ್ದಿ ಸಿಗಲಿದೆ. ಆರೋಗ್ಯದಲ್ಲಿ ಯಾವುದೇ ನ್ಯೂನತೆ ಇರುವುದಿಲ್ಲ. ಶೀಘ್ರವೇ ನಿಮಗೆ ಅದೃಷ್ಟದ ಬೆಂಬಲದಿಂದ ಧನಲಾಭವಾಗುವ ನಿರೀಕ್ಷೆ ಇದೆ.