ನವದೆಹಲಿ: ಇತ್ತೀಚಿಗೆ ಐಎಮ್‌ಡಿಬಿಯಲ್ಲಿ ತಮ್ಮ ಛಪಾಕ್ ಸಿನಿಮಾದ ರೇಟಿಂಗ್ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ನೀಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ದೀಪಿಕಾ ಅವರು 'ಅವರು ನನ್ನ ಸಿನಿಮಾದ ಐಎಂಡಿಬಿ ರೇಟಿಂಗ್ ಬದಲಾಯಿಸಬಹುದು ಹೊರತು ನನ್ನ ಮನಸ್ಸನ್ನಲ್ಲ' ಎಂದು ದೀಪಿಕಾ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಕ್ಕೆ ಭೇಟಿ ನೀಡಿ ಅಲ್ಲಿ ಹಲ್ಲೆಗೋಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದೇ ಸಂದರ್ಭದಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಛಪಾಕ್ ಸಿನಿಮಾ ಕೂಡ ಬಿಡುಗಡೆಯಾಯಿತು.
Deepika’s comment to all Bhakts and fascists downvoting Chhapaak - “ Unho ne meri IMDB rating badli hai, mera mann nahi “ 😂😂🔥 you go girl @deepikapadukone pic.twitter.com/Grvpiaub2G
— ria (@MonaDarlingx) January 29, 2020
ಹಲವರು ಈ ಈ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಿದರೆ ಹಲವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ದೀಪಿಕಾ ಪರವಾಗಿ ನಿಂತರು. ಇದರ ತರುವಾಯ, ಚಿತ್ರದ ಋಣಾತ್ಮಕ ವಿಮರ್ಶೆಗಳು ಮತ್ತು ಐಎಮ್‌ಡಿಬಿ ರೇಟಿಂಗ್ ತಕ್ಷಣ ಕಡಿಮೆಯಾಯಿತು.ಸದ್ಯ ಐಎಂಡಿಬಿಯಲ್ಲಿ ಛಪಾಕ್ ಶೇ 56 ರಷ್ಟು 1-ಸ್ಟಾರ್ ರೇಟಿಂಗ್ಸ್ ಮತ್ತು 31 ಶೇಕಡಾ 10-ಸ್ಟಾರ್ ರೇಟಿಂಗ್ ಹೊಂದಿದೆ.
ಜನವರಿ 7 ರಂದು, ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಆ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ಮುಖವಾಡಧಾರಿಗಳಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತರು. ವಿದ್ಯಾರ್ಥಿ ಮುಖಂಡರಾದ ಐಶೆ ಘೋಷ್ ಮತ್ತು ಇತರರೊಂದಿಗೆ ದೀಪಿಕಾ ನಿಂತಿರುವ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಅವರ ಪರ ಮತ್ತು ವಿರೋಧ ಹ್ಯಾಶ್ ಟ್ಯಾಗ್ ಗಳು ಕೇಳಿ ಬಂದವು.