VIRAL VIDEO: ಸಾರ್ವಜನಿಕರ ಮಧ್ಯೆ ರೋಮಾನ್ಸ್ ಗೆ ಮುಂದಾದ ಸಾರಾ-ಕಾರ್ತಿಕ್

ಉದಯೋನ್ಮುಖ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಾರ್ವಜನಿಕರ ಮಧ್ಯೆಯೇ ಖ್ಯಾತ ನಟಿ ಸಾರಾ ಅಲಿ ಖಾನ್ ಅವಳನ್ನು ತನ್ನ ಎರಡು ಕೈಗಳಲ್ಲಿ ಎತ್ತಿಕೊಂಡಿದ್ದಾರೆ. ಕಾರ್ತಿಕ್ ಅವರ ಈ ಅವತಾರ ನೋಡಿ ಸಾರಾ ಸೇರಿದಂತೆ ನೆರೆದ ಜನರೂ ಕೂಡ ನಿಬ್ಬೆರಗಾಗಿದ್ದಾರೆ.

Last Updated : Feb 6, 2020, 12:54 PM IST
VIRAL VIDEO: ಸಾರ್ವಜನಿಕರ ಮಧ್ಯೆ ರೋಮಾನ್ಸ್ ಗೆ ಮುಂದಾದ ಸಾರಾ-ಕಾರ್ತಿಕ್ title=

ನವದೆಹಲಿ: ಉದಯೋನ್ಮುಖ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ಖ್ಯಾತ ನಟಿ ಸಾರಾ ಅಲಿ ಖಾನ್ ಇತ್ತೀಚಿಗೆ ತಮ್ಮ ಮುಂಬರುವ ಚಿತ್ರ 'ಲವ್ ಆಜ್ ಕಲ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ಅಹ್ಮದಾಬಾದ್ ಗೆ ತಲುಪಿದ ಈ ಇಬ್ಬರು 'ಹಾಂ ಮೈ ಗಲತ್...' ಹಾಡಿಗೆ ಜಬರ್ದಸ್ತ್ ಡಾನ್ಸ್ ಮಾಡಿದ್ದಾರೆ. ಈ ಡಾನ್ಸ್ ವೇಳೆ ಆಕಸ್ಮಿಕವಾಗಿ ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್ ಅವರನ್ನು ತಮ್ಮ ಎರಡೂ ಕೈಗಳಲ್ಲಿ ಎತ್ತಿಕೊಂಡಿದ್ದಾರೆ. ಇದನ್ನು ವೀಕ್ಷಿಸಿದ ಸಾರಾ ಹಾಗೂ ನೆರೆದ ಅಭಿಮಾನಿಗಳು ಸ್ವಲ್ಪ ಕಾಲ ನಿಬ್ಬೇರಗಾಗಿದ್ದಾರೆ.  ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

 
 
 
 

 
 
 
 
 
 
 
 
 

#SarTik in #Ahmedabad ❤️ kem Cho #LoveAajKal 🔥❤️🎷 #14thFeb

A post shared by KARTIK AARYAN (@kartikaaryan) on

ಈ ವಿಡಿಯೋ ಅನ್ನು ಕಾರ್ತಿಕ್ ಆರ್ಯನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಾರಾ ಅಲಿ ಖಾನ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡುಬಂದಿದ್ದಾರೆ. ಇತ್ತ ಕಾರ್ತಿ ಕಾರ್ಯನ ಕೂಡ ಶ್ವೇತ ಬಣ್ಣದ ಟಿ-ಶರ್ಟ್, ಜಾಕೆಟ್ ಹಾಗೂ ಜೀನ್ಸ್ ಧರಿಸಿದ್ದಾರೆ. ಈ ವಿಡಿಯೋ ಅನ್ನು ಹಂಚಿಕೊಂಡಿರುವ ಕಾರ್ತಿಕ್ 'ಅಹ್ಮದಾಬಾದ್ ಮೇ ಕಾರ್ತಿಕ್, ಕೇಮ್ ಛ್ಹೋ' ಎಂಬ ಅಡಿ ಅಡಿ ಬರಹ ನೀಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಾರಾ ಹಾಗೂ ಕಾರ್ತಿಕ್ ಯಾವುದೇ ರೀತಿಯ ಕೊರತೆ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾರಾ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ಬಿಡುಗಡೆಯಾಗುತ್ತಲೇ ಈ ಇಬ್ಬರನ್ನು ಬೆಳ್ಳಿ ಪರದೆಯ ಮೇಲೆ ನೋಡಬಯಸುವ ಅವರ ಅಭಿಮಾನಿಗಳ ತವಕ ಇನ್ನೂ ಹೆಚ್ಚಿಸಿವೆ. ಈ ಟ್ರೈಲರ್ ನಲ್ಲಿ ಸಾರಾ, ನಟ ಕಾರ್ತಿಕ್ ಆರ್ಯನ್ ಜೊತೆ ಲಿಪ್ ಲಾಕ್ ನಡೆಸುತ್ತಿರುವುದನ್ನು ಕೂಡ ತೋರಿಸಲಾಗಿದೆ. ಈ ಮೊದಲು ಎಂದಿಗೂ ಕೂಡ ಸಾರಾ ಈ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಚಿತ್ರದಲ್ಲಿ ಒಟ್ಟು ಎರಡು ಪ್ರೇಮಕಥೆಗಳನ್ನು ತೋರಿಸಲಾಗಿದೆ. ಮೊದಲ ಲವ್ ಸ್ಟೋರಿ 1990ರ ಲವ್ ಸ್ಟೋರಿ ಆಗಿದ್ದು ಆಗ ಕಾರ್ತಿಕ್ ಸ್ಕೂಲ್ ನಲ್ಲಿರುವುದನ್ನು ತೋರಿಸಲಾಗಿದೆ. ಎರಡನೇ ಲವ್ ಸ್ಟೋರಿ 2020 ಕಥಾ ಹಂದರ ಹೊಂದಿದೆ.

ಟ್ರೈಲರ್ ನಲ್ಲಿ ಕಾರ್ತಿಕ್ ಅವರಿಗೆ ಸಾರಾ ಜೊತೆ ಲವ್ ಆಗುವುದನ್ನು ತೋರಿಸಲಾಗಿದೆ. ಆದರೆ, ಸಾರಾ ಪಾಲಿಗೆ ಅವರ ಕರಿಯರ್ ತುಂಬಾ ಮಹತ್ವದ್ದಾಗಿರುತ್ತದೆ. ಆದರೂ ಸಹ ಕಾರ್ತಿಕ್ ಸಾರಾ ಮನಸ್ಸಿನಲ್ಲಿ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಟ್ರೈಲರ್ ನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕಸ್ಮಿಕವಾಗಿ ಟ್ರೈಲರ್ ನಲ್ಲಿ ಟ್ವಿಸ್ಟ್ ಎದುರಾಗುತ್ತಿದ್ದು, ಇದರಲ್ಲಿ ಸಾರಾ ತಾನು ಕರಿಯರ್ ಹಾಗೂ ಕಾರ್ತಿಕ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಸಂಬಂಧ ಮುರಿದುಹೋಗುವ ಹಂತ ತಲುಪುತ್ತದೆ.

ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರುಷಿ ಜೊತೆ ಕಾರ್ತಿಕ್ ಅವರ 1990 ಲವ್ ಸ್ಟೋರಿ ಅನ್ನು ತೋರಿಸಲಾಗಿದೆ.

ಖ್ಯಾತ ನಿರ್ದೇಶಕ ಕರಣ್ ಜೋಹರ್ ಷೋನಲ್ಲಿ ಪಾಲ್ಗೊಂಡಿದ್ದ ಸಾರಾ ತಾವು ಕಾರ್ತಿಕ್ ಜೊತೆ ಡೇಟ್ ನಡೆಸುತ್ತಿರುವುದಾಗಿ ಹೇಳಿದ್ದರು. 'ಲವ್ ಆಜ್ ಕಲ್' ಚಿತ್ರದ ನೆಪದಲ್ಲಿ ಒಟ್ಟಿಗೆ ಬಂದ ಈ ಜೋಡಿಯ ಮಧ್ಯೆ ಬಳಿಕ ಸ್ನೇಹ ಚಿಗುರಿದೆ. ಹಲವು ಬಾರಿ ಈ ಇಬ್ಬರನ್ನು ಒಟ್ಟಿಗೆ ನೋಡಲಾಗಿದ್ದು, ಬಳಿಕ ಆಕಸ್ಮಿಕವಾಗಿ ಈ ಇಬ್ಬರು ಬೇರೆ ಬೇರೆಯಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಈ ಚಿತ್ರ ವ್ಯಾಲೆಂಟೈನ್ ಡೇ ಅಂದರೆ ಫೆಬ್ರುವರಿ 14ಕ್ಕೆ ಬಿಡುಗಡೆಯಾಗಲಿದೆ. ಸಾರಾ-ಕಾರ್ತಿಕ್ ಜೊತೆ ಈ ಚಿತ್ರದಲ್ಲಿ ರಣದೀಪ್ ಹುಡ್ಡಾ ಅವರೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ದೀಪಿಕಾ ಪಡುಕೋಣೆ ಹಾಗೂ ಸೈಫ್ ಅಲಿ ಖಾನ್ ಅಭಿನಯದ 'ಲವ್ ಆಜ್ ಕಲ್' ಚಿತ್ರದ ಸಿಕ್ವಲ್ ಆಗಿದೆ.

Trending News