ಹಾರ್ದಿಕ್‌ ಪಾಂಡ್ಯ ಇನ್ನೊಂದು ಪಂದ್ಯ ಆಡಿದ್ರೆ ಸಾಕು ಗಂಗೂಲಿಯ ಈ ವಿಶ್ವದಾಖಲೆ ಉಡೀಸ್...!‌ ಕೊಹ್ಲಿಯೂ ಮುಟ್ಟದ ಅಸಾಮಾನ್ಯ ರೆಕಾರ್ಡ್‌ ಅದು

Champions Trophy 2025: ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ.

Written by - Bhavishya Shetty | Last Updated : Aug 11, 2024, 07:21 PM IST
    • ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಒಂದು ವಿಶೇಷವಾದ ವಿಶ್ವದಾಖಲೆ ಇದೆ.
    • ಹಾರ್ದಿಕ್ ಪಾಂಡ್ಯ ಈ ಶ್ರೇಷ್ಠ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.
    • ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ
ಹಾರ್ದಿಕ್‌ ಪಾಂಡ್ಯ ಇನ್ನೊಂದು ಪಂದ್ಯ ಆಡಿದ್ರೆ ಸಾಕು ಗಂಗೂಲಿಯ ಈ ವಿಶ್ವದಾಖಲೆ ಉಡೀಸ್...!‌ ಕೊಹ್ಲಿಯೂ ಮುಟ್ಟದ ಅಸಾಮಾನ್ಯ ರೆಕಾರ್ಡ್‌ ಅದು title=
File Photo

Champions Trophy 2025: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಒಂದು ವಿಶೇಷವಾದ ವಿಶ್ವದಾಖಲೆ ಇದೆ. ಆ ದಾಖಲೆಯನ್ನು ಇದುವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ಭಾರತದ ಸ್ಫೋಟಕ ಆಲ್‌ʼರೌಂಡರ್ ಹಾರ್ದಿಕ್ ಪಾಂಡ್ಯ ಈ ಶ್ರೇಷ್ಠ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್

ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2024 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೀಗ ತಂಡದ ಕಣ್ಣು ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. 2013ರಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುರಿ ಭಾರತದ ದಂತಕಥೆ ಸೌರವ್ ಗಂಗೂಲಿ ಅವರ ವಿಶ್ವ ದಾಖಲೆಯಾಗಿದೆ. ಇದನ್ನು ಮುರಿಯುವ ಓಟದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಹಿಂದುಳಿದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಬ್ಯಾಟ್ಸ್‌ʼಮನ್ ಗಂಗೂಲಿ. ಹಾರ್ದಿಕ್ ಪಾಂಡ್ಯ ಈ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಗಂಗೂಲಿ 2004ರಲ್ಲಿ ತಮ್ಮ ಕೊನೆಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಡಿದ್ದರು. ಅಂದಿನಿಂದ, ಈ ಐಸಿಸಿ ಈವೆಂಟ್ ಅನ್ನು 4 ಬಾರಿ ಆಯೋಜಿಸಲಾಗಿದೆ, ಆದರೆ ಅವರು ಮಾಡಿದ ಹೆಚ್ಚಿನ ಸಿಕ್ಸರ್‌ಗಳ ವಿಶ್ವದಾಖಲೆ ಇನ್ನೂ ಅಜೇಯವಾಗಿದೆ. ಗಂಗೂಲಿ 13 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 17 ಸಿಕ್ಸರ್ ಬಾರಿಸಿದ್ದಾರೆ. ಹಾರ್ದಿಕ್ ಪಾಂಡ್ಯ 2025ರಲ್ಲಿ ಈ ಟೂರ್ನಿಯ ಭಾಗವಾದರೆ ಗಂಗೂಲಿ ದಾಖಲೆ ಮುರಿಯಬಹುದು. ಇದುವರೆಗೆ ಆಡಿರುವ 5 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಹಾರ್ದಿಕ್ 11 ಸಿಕ್ಸರ್ ಬಾರಿಸಿದ್ದಾರೆ. ಗಂಗೂಲಿ ಅವರನ್ನು ಹಿಂದಿಕ್ಕಲು ಕೇವಲ 7 ಸಿಕ್ಸರ್‌ʼಗಳು ಬೇಕಾಗಿವೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ʼಗಳು

ಸೌರವ್ ಗಂಗೂಲಿ - 17
ಕ್ರಿಸ್ ಗೇಲ್ - 15
ಇಯಾನ್ ಮಾರ್ಗನ್ - 14
ಶೇನ್ ವ್ಯಾಟ್ಸನ್ - 12
ಪಾಲ್ ಕಾಲಿಂಗ್ವುಡ್ - 11

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯರು

ಸೌರವ್ ಗಂಗೂಲಿ - 17
ಹಾರ್ದಿಕ್ ಪಾಂಡ್ಯ - 11
ಶಿಖರ್ ಧವನ್ - 8
ರೋಹಿತ್ ಶರ್ಮಾ - 8
ವಿರಾಟ್ ಕೊಹ್ಲಿ - 8

ಇದನ್ನೂ ಓದಿ: ತೂಕ ಇಳಿಕೆಗೆ ಜಿಮ್‌-ಡಯೆಟ್‌ ಯಾವುದೂ ಬೇಡ: ಎಳನೀರಿಗೆ ಈ ಬೀಜ ಬೆರೆಸಿ ಕುಡಿಯಿರಿ... 5 ದಿನದಲ್ಲಿ ಸೊಂಟದ ಹಠಮಾರಿ ಬೊಜ್ಜು ಕರಗಿ ಸ್ಲಿಮ್‌ ಆಗ್ತೀರಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News