Coffee For Hair Growth: ಕಾಫಿ ಕೂದಲಿಗೆ ವರದಾನವಾಗಿದೆ.. ಇದನ್ನು ಈ ರೀತಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಗಾಢ ಕಡು ಕಪ್ಪು ಕೂದಲು ನಿಮ್ಮದಾಗುತ್ತೆ..
ಉದ್ದ ಹಾಗೂ ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಬಯಕೆ.. ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ.. ಆದರೆ ಇಂದು ನಾವು ಹೇಳಲು ಹೊರಟಿರುವ ಮನೆಮದ್ದು ನಿಮ್ಮ ಕೂದಲನ್ನು ಬುಡದಿಂದ ಸ್ಟ್ರಾಂಗ್ ಮಾಡಿ ಉದ್ದ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ..
ಉದ್ದ ಮತ್ತು ದಪ್ಪನಾದ ಹೊಳೆಯುವ ಕೇಶರಾಶಿ ಪಡೆಯಲು ಕಾಫಿ ಪುಡಿ ಉತ್ತಮ ಮನೆಮಮದ್ದಾಗಿದೆ.. ಹೌದು ಕಾಫಿ ಕುಡಿಯಲು ರುಚಿಕರವಾಗಿರುವುದಲ್ಲದೇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ..
ಕಾಫಿಯ ಪ್ರಯೋಜನಗಳು: ಕಾಫಿಯು ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ಅನ್ನು ಹೊಂದಿದ್ದು, ಇವು ಬೇರುಗಳಿಂದ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಕಾಫಿ ತುಂಬಾ ಪರಿಣಾಮಕಾರಿ ಎನ್ನಲಾಗುತ್ತದೆ..
ಕಾಫಿಪುಡಿಯನ್ನು ಕೂದಲಿಗೆ ಬಳಸುವ ವಿಧಾನ: ಒಂದು ಬೌಲ್ನಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಂಡೀಷನರ್ ಮತ್ತು ತೆಂಗಿನ ಎಣ್ಣೆಗೆ ಚೆನ್ನಾಗಿ ಮಿಶ್ರಣ ಮಾಡಿ.. ನಂತರ ಪೇಸ್ಟ್ನ್ನು ಕೂದಲಿಗೆ 30 ನಿಮಿಷಗಳ ಕಾಲ ಹಚ್ಚಿ, ಬಳಿಕ ಶಾಂಪು ಬಳಸಿ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಬುಡದಿಂದ ಸ್ಟ್ರಾಂಗ್ ಆಗುತ್ತವೆ..
ವಿಧಾನ 2: ಎರಡು ಚಮಚ ಕಾಫಿ ಪುಡಿ, ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ 20 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.