Don Bradman: ತಮ್ಮ ಇಡೀ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಫಾರ್ಮ್ʼನಿಂದ ಹೊರಗುಳಿಯದೆ ಅದ್ಭುತವಾಗಿ ಆಡಿದ ಕೆಲವೇ ಕೆಲವು ಬ್ಯಾಟ್ಸ್‌ಮನ್ʼಗಳಿದ್ದಾರೆ. ಅಂತಹ ಓರ್ವ ಕ್ರಿಕೆಟಿಗನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಆ ದಂತಕಥೆಯ ಹೆಸರು ಡಾನ್ ಬ್ರಾಡ್ಮನ್. ಈ ಶ್ರೇಷ್ಠ ಆಸ್ಟ್ರೇಲಿಯಾದ ಕ್ರಿಕೆಟಿಗನನ್ನು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ʼಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಬ್ರಾಡ್ಮನ್ ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಬೌಲರ್ʼಗಳನ್ನು ಬೆಂಡೆತ್ತಿದ್ದರು, ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದ ಅವರು, ಇಂದಿಗೂ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ನವೆಂಬರ್ 1928 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಈ ಅನುಭವಿ ಟೆಸ್ಟ್ ಕ್ರಿಕೆಟ್ ಬಿಟ್ಟರೆ ಬೇರಾವುದೇ ಸ್ವರೂಪದಲ್ಲಿ ಆಡಿಲ್ಲ. ಇನ್ನು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಬ್ರಾಡ್ಮನ್ ಅನೇಕ ಅದ್ಭುತ ಇನ್ನಿಂಗ್ʼಗಳನ್ನು ಆಡಿದ್ದಾರೆ.
ಬ್ರಾಡ್ಮನ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗದಿದ್ದರೂ, ಈ ದಂತಕಥೆ ಗಳಿಸಿದ ರನ್ʼಗಳ ಬಗ್ಗೆ ಜಗತ್ತಿಗೆ ವಿಶೇಷವಾಗಿ ಹೇಳಬೇಕೆಂದೇನಿಲ್ಲ. ಆ ಕಾಲದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರು ಎಂಬುದಕ್ಕೆ ಅಂಕಿಅಂಶಗಳೇ ಸಾಕ್ಷಿ ಹೇಳುತ್ತವೆ.
ಇದನ್ನೂ ಓದಿ: ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್
ಇನ್ನು ಆಡಿದ 52 ಟೆಸ್ಟ್ ಪಂದ್ಯಗಳಲ್ಲಿ, ಬ್ರಾಡ್ಮನ್ 29 ಶತಕ ಬಾರಿಸಿದ್ದರು. ಇದರಲ್ಲಿ 12 ದ್ವಿಶತಕಗಳು ಮತ್ತು 2 ತ್ರಿಶತಕಗಳು. ಒಟ್ಟಾರೆ 6996 ರನ್ ಕಲೆ ಹಾಕಿದ್ದಾರೆ. ಬ್ರಾಡ್‌ಮನ್ ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಅಂದರೆ 99.94 ರೊಂದಿಗೆ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಅಂಕಿಅಂಶಗಳು ಅವರ ವೃತ್ತಿಜೀವನದುದ್ದಕ್ಕೂ ಅತ್ಯುತ್ತಮ ಫಾರ್ಮ್ ಹೇಗೆ ಕಾಪಾಡಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews