ಅವರ ಜೊತೆ 12 ದಿನ ಕಳೆದರೆ, ಫ್ಲಾಟ್, ಕಾರು, ಹತ್ತು ಲಕ್ಷ ಕೊಡ್ತಾರಂತೆ..! ಸ್ಟಾರ್‌ ನಟನ ಮುಖವಾಡ ಕಳಚಿದ ನಟಿ

Casting Couch : ಕಳೆದ ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ಸದ್ದು ಮಾಡಿದ್ದವು.. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡಲ್‌ನಲ್ಲೂ ಸಹ ಕೆಲವು ನಟಿಯರು ಈ ಕುರಿತು ಧ್ವನಿ ಎತ್ತಿದ್ದಾರೆ.. ಅಲ್ಲದೆ, ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.. ಈ ಸುದ್ದಿಯ ನಡುವೆ ಇದೀಗ ನಟಿಯೊಬ್ಬರ ಹೇಳಿಕೆ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ..

1 /7

ಜಾನಿ ಮಾಸ್ಟರ್ ವಿರುದ್ಧ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ. ಜಾನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಧರ್ಮವನ್ನು ಬದಲಾಯಿಸಿ ಮದುವೆಯಾಗುವಂತೆ ಪೀಡಿಸಿದ್ದಾನೆ ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದೀಗ ಪೊಲೀಸರು ಜಾನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ನಡುವೆ ಮತ್ತೊಬ್ಬ ನಟಿಯ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ..  

2 /7

ಹೌದು.. ಜಾನಿ ಮಾಸ್ಟರ್ ಪ್ರಕರಣ ಸದ್ಯ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿದೆ. ಸಹಾಯಕಿಗೆ ಜಾನಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಗಂಭೀರ ಆರೋಪ ಕೇಳಿಬಂದಿದೆ. ಜಾನಿ ಮಾಸ್ಟರ್ ವಿರುದ್ಧ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ. ಜಾನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಧರ್ಮವನ್ನು ಬದಲಾಯಿಸಿ ಮದುವೆಯಾಗುವಂತೆ ಪೀಡಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.  

3 /7

ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಮಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ. ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಸಮಿತಿ ರಚನೆಯ ಬೇಡಿಕೆಗಳು ಮುನ್ನೆಲೆಗೆ ಬಂದಿದ್ದವು. ಅಲ್ಲದೆ, ಅನೇಕ ನಟಿಯರು ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಹೊರಗೆ ಬಂದು ಮಾತನಾಡುತ್ತಿದ್ದಾರೆ.  

4 /7

ಅಲ್ಲದೆ, ಉಳಿದ ನಟಿಯರಿಗೂ ಹೊರ ಬಂದು ಮಾತನಾಡುವಂತೆ ಸಾಕಷ್ಟು ಮಂದಿ ಧೈರ್ಯ ತುಂಬುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆಕೆ ಬೇರೆ ಯಾರೂ ಅಲ್ಲ, ಗಾಯತ್ರಿ ಗುಪ್ತಾ. ಗಾಯತ್ರಿ ಬಗ್ಗೆ ಅನೇಕರಿಗೆ ತಿಳಿದಿದೆ.   

5 /7

ಗಾಯತ್ರಿ ಗುಪ್ತಾ ಹೆಚ್ಚಾಗಿ ಶಾರ್ಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಾಯಕಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದಾರೆ. ಫಿದಾ ಸಿನಿಮಾದಲ್ಲಿ ಸಾಯಿ ಪಲ್ಲವಿಯನ್ನ ಫ್ರೆಂಡ್ ಆಗಿ ನಟಿಸಿದ್ದರು. ಅಲ್ಲದೆ ಊಈ ನಟಿ ಹಲವು ವಿವಾದಗಳಿಂದಲೂ ಜನಪ್ರಿಯರಾಗಿದ್ದಾರೆ.. ಈ ಹಿಂದೆ ಬಿಗ್ ಬಾಸ್ ಶೋ ಕುರಿತು ಶಾಕಿಂಗ್ ಕಾಮೆಂಟ್ಸ್ ಮಾಡಿದ್ರು.  

6 /7

ಗಾಯತ್ರಿ ಗುಪ್ತಾ ಬಿಗ್ ಬಾಸ್ ಶೋ ಬ್ಯಾನ್ ಮಾಡುವಂತೆಯೂ ಒತ್ತಾಯಿಸಿದ್ದರು. ತನಗೆ ಬಿಗ್‌ಬಾಸ್‌ ಆಫರ್‌ಗಳು ಬಂದಿವೆ, ಆದರೆ ಅವರು ಅದನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಇನ್ನು ಇತ್ತೀಚೆಗೆ ಗಾಯತ್ರಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.   

7 /7

ತೆಲುಗಿನಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದೇನೆ. ಬಾಲಿವುಡ್‌ನಿಂದಲೂ ನನಗೆ ಆಫರ್‌ಗಳು ಬಂದಿವೆ. ಆದರೆ ಹಿಂದಿಯಲ್ಲಿ ಕೆಲವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ಅಷ್ಟೇ ಅಲ್ಲ, ತಮ್ಮೊಂದಿಗೆ 12 ದಿನಗಳನ್ನು ಕಳೆದರೆ, ಫ್ಲಾಟ್, ಕಾರು ಸೇರಿ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಯಾರಿಗೆ ಏನು ಹೇಳಬೇಕೆಂದು ತಿಳಿಯದೆ ಅಲ್ಲಿಂದ ಬಂದೆ ಎಂದು ಕಾಸ್ಟಿಂಗ್ ಕೌಚ್ ಕುರಿತು ಗಾಯತ್ರಿ ಗುಪ್ತಾ ಹೇಳಿದ್ದಾರೆ.