Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!

IND vs BAN: ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಭಾರತ ತಂಡವು 280 ರನ್‌ಗಳಿಂದ ಭರ್ಜರಿ ಜಯಗಳಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಗಿನ್‌ ಡ್ಯಾನ್‌ ಮೂಲಕ ಬಾಂಗ್ಲಾದೇಶ ತಂಡವನ್ನು ಲೇವಡಿ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Written by - Puttaraj K Alur | Last Updated : Sep 22, 2024, 06:25 PM IST
  • ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 280 ರನ್‌ಗಳ ಭರ್ಜರಿ ಜಯ
  • ಮೈದಾನದಲ್ಲಿ ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡವನ್ನು ಲೇವಡಿ ಮಾಡಿದ ವಿರಾಟ್‌ ಕೊಹ್ಲಿ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ‌ ವಿರಾಟ್ ಕೊಹ್ಲಿ ನಾಗಿನ್‌ ಡ್ಯಾನ್ಸ್
Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ! title=
ವಿರಾಟ್ ಕೊಹ್ಲಿ ನಾಗಿನ್‌ ಡ್ಯಾನ್ಸ್!

IND vs BAN: ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 280 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಚೆನ್ನೈ ಟೆಸ್ಟ್‌ ಗೆಲುವಿನ ಬಳಿಕ ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾದೇಶದ ತಂಡವನ್ನು ವಿರಾಟ್‌ ಕೊಹ್ಲಿ ಲೇವಡಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 17 ರನ್ ಗಳಿಸಿದರು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭಿಸಿದ ಕೊಹ್ಲಿ ಫೀಲ್ಡಿಂಗ್‌ನಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. 2ನೇ ಇನ್ನಿಂಗ್ಸ್‌ ವೇಳೆ ಮೈದಾನದಲ್ಲಿ ನಾಗಿನ್ ಡ್ಯಾನ್ಸ್ ಮೂಲಕ ಕೊಹ್ಲಿ ಬಾಂಗ್ಲಾದೇಶವನ್ನು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಕುಣಿದಾಡಿದ ರೋಹಿತ್ ಶರ್ಮಾ! ಈ ಗೆಲುವಿನ ನಿಜವಾದ ಹೀರೋ ಈತನೇ ಎಂದು ಕೊಂಡಾಡಿದ ಕ್ಯಾಪ್ಟನ್

ಅಭಿಮಾನಿಗಳ ಮನ ಗೆದ್ದ ಕೊಹ್ಲಿ!

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ನಾಗಿನ್ ಡ್ಯಾನ್ಸ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿತು. ಕೊಹ್ಲಿಯವರ ಈ ಆ್ಯಕ್ಷನ್ ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ. ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದಾಗ ಕೊಹ್ಲಿ ನಾಗಿನ್‌ ಡ್ಯಾನ್ಸ್‌ ಮೂಲಕ ಸೆಲೆಬ್ರೆಷನ್‌ ಮಾಡಿದರು. ಇದು ಮೈದಾನದಲ್ಲಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿದೆ. ಕೊಹ್ಲಿ ವಿಡಿಯೋ ವೈರಲ್‌ ಆದ ಬಳಿಕ ಅಭಿಮಾನಿಗಳು ಸಹ ಬಾಂಗ್ಲಾದೇಶ ತಂಡವನ್ನು ವಿವಿಧ ರೀತಿಯ ಫನ್ನಿ ಫನ್ನಿಯಾದ ಮೀಮ್ಸ್‌ಗಳ ಮೂಲ ಟ್ರೋಲ್‌ ಮಾಡುತ್ತಿದ್ದಾರೆ.  

ಕಾನ್ಪುರ ಟೆಸ್ಟ್‌ನಲ್ಲಿ ಮಿಂಚುತ್ತಾರಾ ಕೊಹ್ಲಿ?

ಚೆನ್ನೈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿಯವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಇದೀಗ ಕಾನ್ಪುರದಲ್ಲಿ ನಡೆಯಲಿರುವ ಈ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಇದರಲ್ಲಿ ಅವರು ಕೇವಲ 27 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕೊಹ್ಲಿ ಮೇಲೆ ಎರಡು ಪಟ್ಟು ಒತ್ತಡ ಬೀಳಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 27ರಿಂದ ಕಾನ್ಪುರದ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: ಭಾರತದ ಈ ಪ್ರತಿಷ್ಠಿತ ಶಾಲೆಯಲ್ಲಿ ಮಗಳಿಗೆ ದಾಖಲಾತಿ ಮಾಡಿಸಿದ ಧೋನಿ! 3ನೇ ತರಗತಿ ಓದುತ್ತಿರುವ ಝಿವಾ ಫೀಜ್‌ ಎಷ್ಟು ಗೊತ್ತಾ? ಆ ಸ್ಕೂಲ್‌ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News