ಕೊನೆಗೂ ಬಹುದಿನದ ಪ್ರಶ್ನೆಗೆ ಸಿಕ್ತು ಉತ್ತರ..! ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?

Kichcha Sudeep Remunration For Bigg Boss Host: ಪ್ರತಿಬಾರಿಯಂತೆ ಈ ಬಾರಿಯೂ ಕಿಚ್ಚ ಸುದೀಪ್‌ ಅವರಿಂದಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ನಿರೂಪಣೆ ನಡೆಯಲಿದೆ.. ಇದೀಗ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾದ್ಯಮದವರ ಹತ್ತು ಹಲವಾರು ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡಿದ್ದಾರೆ.. ಇದೇ ವೇಳೆ ತಮ್ಮ ಸಂಭಾವನೆ ಬಗ್ಗೆಯೂ ಕಿಚ್ಚ ಬಾಯಿಬಿಟ್ಟಿದ್ದಾರೆ.. 
 

1 /7

ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಬಿಗ್‌ಬಾಸ್‌ ಸೀಸನ್‌ 11ರ ಪತ್ರಿಕಾಗೋಷ್ಟಿಯಲ್ಲಿ ಕಿಚ್ಚ ಸುದೀಪ್‌ ಹಾಗೂ ತಂಡ ಮಾಧ್ಯಮದವರ ಹಲವಾರು ಪ್ರಶ್ನಗಳಿಗೆ ಉತ್ತರ ನೀಡಿದ್ದಾರೆ...   

2 /7

ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಕೆಲವು ಸ್ಪರ್ಧಿಗಳ ಹೆಸರನ್ನು ಒಂದು ದಿನ ಮುಂಚೆಯೇ ಅನೌನ್ಸ್‌ ಮಾಡುವುದಾಗಿ ಬಿಗ್‌ಬಾಸ್‌ ತಂಡ ತಿಳಿಸಿದೆ.. ಅಲ್ಲದೇ ದೊಡ್ಮನೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಸಹ ಹಂಚಿಕೊಳ್ಳಲಾಗಿದೆ..   

3 /7

ಇದೇ ವೇಳೆ ಬಿಗ್‌ಬಾಸ್‌ ಸೀಸನ್‌ 11 ಹೋಸ್ಟ್‌ ಮಾಡಲು ಕಿಚ್ಚ ಸುದೀಪ್‌ ಪಡೆದಿರುವ ಸಂಭಾವನೆ ಎಷ್ಟು ಎಂದು ಅವರನ್ನೇ ಕೇಳಲಾಯಿತು ಇದಕ್ಕೆ ಕಿಚ್ಚ ಬುದ್ಧಿವಂತಿಕೆಯಿಂದಲೇ ಉತ್ತರ ನೀಡಿದ್ದಾರೆ..   

4 /7

"ನಾನು ನನ್ನ ತಟ್ಟೆ ಎಷ್ಟಿದೇ ಅಷ್ಟೇ ತಿನ್ನೋದು.. ನನ್ನ ಯೋಗ್ಯತೆ ಎಷ್ಟಿದೆಯೇ ಅಷ್ಟೇ ದುಡಿಯೋದು" ಎಂದು ಖಡಕ್‌ ಆಗಿ ಉತ್ತರ ನೀಡಿದ್ದಾರೆ.. ಅಲ್ಲದೇ "ನಾನು ಈ ಸೀಸನ್‌ ನಿರೂಪಣೆ ಮಾಡೋದಿಲ್ಲ ಅಂತ ಹೇಳಿದ್ದು ಸ್ಯಾಲರಿ ವಿಚಾರಕ್ಕಲ್ಲ.. ಟ್ರಾವೆಲ್..‌ ಅದು ಇದು ನಂಗೆ ಸ್ವಲ್ಪ ಕಷ್ಟವಾಗುತ್ತಿತ್ತು.. ನಾನು ಇಂಡಸ್ಟ್ರಿಯಲ್ಲಿಯೂ ತುಂಬಾ ವರ್ಷ ಕೆಲಸ ಮಾಡಿದ್ದೇನೆ.. ಅಲ್ಲು ಚೆನ್ನಾಗಿಯೇ ಸಂಭಾವನೆ ತೆಗೆದುಕೊಂಡಿದ್ದೇನೆ.. ಹತ್ತು ವರ್ಷ ಇಲ್ಲಿಯೂ ಚೆನ್ನಾಗಿಯೇ ದುಡಿದಿದ್ದೇನೆ.. ಬನ್ನಿ ನಮ್ಮನೆಗೆ ಯಾವಾತ್ತಾದ್ರು ಊಟಕ್ಕೆ" ಎಂದು ಹೇಳುವ ಮೂಲಕ ಉತ್ತರ ನೀಡಿದ್ದಾರೆ..  

5 /7

ಸದ್ಯ ಈ ಮೂಲಕ ಕಿಚ್ಚ ಸುದೀಪ್‌ ಅರು ಬಿಗ್‌ಬಾಸ್‌ ಸೀಸನ್‌ 11ರ ನಿರೂಪಣೆಗೆ ಎಷ್ಟು ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನುವುದು ಮಾತ್ರ  ರಹಸ್ಯವಾಗಿಯೇ ಉಳಿದಿದೆ..  

6 /7

ಇನ್ನು ಈ ಹಿಂದಿನ ವರದಿಗಳ ಆಧಾರದ ಮೇಲೆ ಹೇಳುವುದಾದರೇ ಬಿಗ್‌ಬಾಸ್‌ ನಿರೂಪಣೆ ಮಾಡಲು ಕಿಚ್ಚ ಸುದೀಪ್‌ ಹಲವು ಕೋಟಿ ಸಂಭಾವನೆ ಪಡೆಯುತ್ತಾರೆ.. ಅಂದಾಜಿನ ಪ್ರಕಾರ ಅವರು 2015ರಲ್ಲಿ 20 ಕೋಟಿ  ಒಪ್ಪಂದಕ್ಕೆ ಸಹಿಹಾಕಿದ್ದರು ಎನ್ನಲಾಗಿದೆ.. ಇದಾದ ಬಳಿಕ ಈಗ ಸಂಭಾವನೆ ದುಪ್ಪಟ್ಟು ಹೆಚ್ಚಾಗಿದ್ದು, ಆದ್ರೆ ಸುದೀಪ್‌ ಸದ್ಯ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ಮಾತ್ರ ಸೀಕ್ರೇಟ್‌ ಆಗಿಯೇ ಉಳಿದುಕೊಂಡಿದೆ..   

7 /7

ಸದ್ಯ ಬಿಗ್‌ಬಾಸ್‌ ಸೆಪ್ಟೆಂಬರ್‌ 29, 2024ರಂದು ಗ್ರ್ಯಾಂಡ್‌ ಓಒನಿಂಗ್‌ನೊಂದಿಗೆ ಆರಂಭವಾಗಲಿದೆ.. ಈ ರಿಯಾಲಿಟಿ ಶೋವನ್ನು ಪ್ರತಿಬಾರಿಯಂತೆ ಈ ಬಾರಿಯೂ ಕಿಚ್ಚನೇ ಹೋಸ್ಟ್‌ ಮಾಡಲಿದ್ದಾರೆ..