ಬೆಂಗಳೂರು : ಕೂದಲು ಉದುರುವ ಸಮಸ್ಯೆ ಇತ್ತೀಚೆಗೆ ಎಲ್ಲಾ ವಯಸ್ಸಿನವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ.ಇದಕ್ಕೆ ಹಲವು ಕಾರಣಗಳಿರಬಹುದು.ಅದರಲ್ಲಿ ಬಹು ಮುಖ್ಯ ಕಾರಣ ಎಂದರೆ ಆಧುನಿಕತೆಯ ಹೆಸರಿನಲ್ಲಿ ನಾವು ಅನುಸರಿಸುತ್ತಿರುವ ಜೀವನ ಶೈಲಿ ಮತ್ತು ಕೂದಲ ರಕ್ಷಣೆಯ ನೆಪದಲ್ಲಿ ಬಳಸುತ್ತಿರುವ ರಾಸಾಯನಿಕ ಉತ್ಪನ್ನಗಳು.ಈ ಉತ್ಪನ್ನಗಳು ಕೂದಲನ್ನು ಬುಡದಿಂದಲೇ ಹಾನಿಗೊಳಿಸುತ್ತಾ ಬರುತ್ತದೆ. ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಬೇಕಾದರೆ ನೈಸರ್ಗಿಕ ಉಪಾಯವನ್ನು ಅನುಸರಿಸಬೇಕು.
ನಾವಿಲ್ಲಿ ಹೇಳುತ್ತಿರುವ ಶಾಶ್ವತ ಮತ್ತು ನೈಸರ್ಗಿಕ ಪರಿಹಾರ ಎಂದರೆ ಪಾರಿಜಾತ ಹೂವು. ಈ ಹೂವುಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಕ್ರಮದಲ್ಲಿ ಬಳಸಿದರೆ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದರಲ್ಲಿ ಯಾವ ಅನುಮಾನವೂ ಬೇಡ.ಇದು ಕೂದಲಿಗೆ ಹೊಸ ಕಾಂತಿ ಮತ್ತು ಹೊಳಪನ್ನು ನೀಡುತ್ತದೆ.
ಇದನ್ನೂ ಓದಿ : ಕಾಳು ಮೆಣಸಿನ ಪುಡಿಯನ್ನು ಇದರ ಜೊತೆ ಬೆರೆಸಿ ಊಟಕ್ಕೂ ಮುನ್ನ ಸೇವಿಸಿ!ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು
ಪಾರಿಜಾತದ ಪರಿಹಾರ :
ಈ ಪುಟ್ಟ ಪುಟ್ಟ ಬಿಳಿ ಹೂವುಗಳು ರಾತ್ರಿ ವೇಳೆಯಲ್ಲಿ ಅರಳುತ್ತವೆ.ಈ ಹೂವು ಮತ್ತು ಮರದ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ,ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಅಂಶಗಳು ಕಂಡುಬರುತ್ತವೆ.ಅದರ ಔಷಧೀಯ ಗುಣಗಳಿಂದಾಗಿ,ಈ ಹೂವನ್ನು ಅನೇಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.ಈ ಹೂವು ಕೂದಲು ಒಡೆಯುವುದು, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳನ್ನು ಬೇರಿನಿಂದಲೇ ಕಡಿಮೆ ಮಾಡುತ್ತದೆ .
ಪಾರಿಜಾತ ಹೂವುಗಳಿಂದ ಗಿಡಮೂಲಿಕೆ ಶಾಂಪೂ :
೧.100-150 ಮಿಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ.
೨. ಈ ಎಣ್ಣೆ ಸ್ವಲ್ಪ ತಣ್ಣಗಾದಾಗ 2 ಚಮಚ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ.
೩. ನಂತರ ಈ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ.
೪. ಈ ಎಣ್ಣೆ ಚೆನ್ನಾಗಿ ಕಾದ ಮೇಲೆ ಉರಿಯನ್ನು ಆಫ್ ಮಾಡಿ ಅದಕ್ಕೆ ಪಾರಿಜಾತ ಹೂವಿನ ಪೇಸ್ಟ್ ಅಥವಾ ಹೂವಿನ ರಸವನ್ನು ಸೇರಿಸಿ.
೫. ನಂತರ,ಈ ಮಿಶ್ರಣಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ.ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿಡಿ.
೬. ಎಣ್ಣೆ ತಣ್ಣಗಾದಾಗ,ಅದನ್ನು ಫಿಲ್ಟರ್ ಮಾಡಿ ಕೂದಲಿಗೆ ಹಚ್ಚಿ.
ಇದನ್ನೂ ಓದಿ : ನಿಮಗೆ ಹೀಗಾಗುತ್ತಿದ್ದರೆ ಅರ್ಥ ಮಾಡಿಕೊಳ್ಳಿ ರಕ್ತದಲ್ಲಿ ಕೊಲೆಸ್ಟ್ರಾಲ್ ಖಂಡಿತಾ ಜಾಸ್ತಿಯಾಗಿದೆ !
ಕೂದಲಿಗೆ ಹೀಗೆ ಹಚ್ಚಿ :
ಕೂದಲನ್ನು ಮಸಾಜ್ ಮಾಡಲು ಈ ಎಣ್ಣೆಯನ್ನು ಬಳಸಬಹುದು.ಕೂದಲಿಗೆ ಶಾಂಪೂ ಮಾಡುವ 2 ಗಂಟೆಗಳ ಮೊದಲು ಈ ಎಣ್ಣೆಯನ್ನು ಹಚ್ಚಿ.ನಂತರ ತಲೆ ಸ್ನಾನ ಮಾಡಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ