ಬೆಂಗಳೂರು: ಹೋಂ ಕ್ವಾರೆಂಟೈನ್ ನಲ್ಲಿರುವವರು 14 ದಿನಗಳ ಕಾಲ ಮನೆಯಲ್ಲಿ ಇರಲೇಬೇಕು. ಆದರೆ ರಾಜ್ಯದಲ್ಲಿ ಈಗಾಗಲೇ ಓರ್ವ ವ್ಯಕ್ತಿ ಇದನ್ನು ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದ ಘಟನೆ ನಡೆದಿತ್ತು. ಈಗ ಬೆಂಗಳೂರಿನಲ್ಲಿ ಮತ್ತೆ ಅಂಥದೇ ಘಟನೆ ನಡೆದಿದ್ದು ಪೊಲೀಸರು ಆ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಬಳಿ ಹೋಂ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ ಹೊರಗಡೆ ಬಂದು ಓಡಾಡುತ್ತಿದ್ದರು. ಈ ವೇಳೆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಜಾಲಹಳ್ಳಿ ಠಾಣೆಯ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಆತ 'ಸಿಟಿ ನೋಡ್ಬೇಕು ಅಂತಾ ರೌಂಡ್ಸ್ ಹಾಕ್ತಿದ್ದೀನಿ ಎಂಬ ಅಸಡ್ಡೆ ಉತ್ತರ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಬೇಜವಾಬ್ದಾರಿ ಉತ್ತರ ಕೊಟ್ಟ ವ್ಯಕ್ತಿ ಮೇಲೆ ಐಪಿಸಿ ಸೆಕ್ಷನ್ 269, 271 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕರೋನವೈರಸ್ (Coronavirus) ಡೆಹಿಡಿಯುವ ಉದ್ದೇಶದಿಂದ ದೇಶಾದ್ಯಂತ ಲಾಕ್ಡೌನ್(LOCKDOWN) ಆಗಿದ್ದರೂ ಈ ವ್ಯಕ್ತಿ ರಾಜಾರೋಷವಾಗಿ ಓಡಾಡುತ್ತಿದ್ದರು. ಕೈ ಮೇಲೆ ಹೋಂ ಕ್ವಾಂರಂಟೈನ್ ಸೀಲ್ ಇದ್ದರೂ ಬೈಕ್ ನಲ್ಲಿ ಸುತ್ತಾಡ್ತಿದ್ದರು. ಇವರು ಮಾರ್ಚ್ 17ರಂದು ಇಂಡೋನೇಷಿಯಾದಿಂದ ಬಂದಿದ್ದರು. ಥಣಿಸಂದ್ರದಿಂದ ಓಡಾಟ ಆರಂಭಿಸಿದ್ದರು. ಸದ್ಯ ಇವರನ್ನು ಆಕಾಶ್ ಆಸ್ಪತ್ರೆಯ ಸರ್ಕಾರಿ ಕ್ವಾರೆಂಟೈನ್ ಗೆ ಕಳುಹಿಸಲಾಗಿದೆ.
ಇದಕ್ಕೂ ಮೊದಲು ಸಾರ್ವಜನಿಕ ಹಿತದೃಷ್ಟಿಯಿಂದ ಅವರು ಮನೆಯಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಲು 5000 ಹೋಮ್ ಕ್ಯಾರೆಂಟೈನ್ ಸ್ಟ್ಯಾಂಪಿಂಗ್ ನಡೆಸಲಾಯಿತು. ಸ್ಟ್ಯಾಂಪ್ ಮಾಡಿದ ಕೆಲವರು ಬಿಎಂಟಿಸಿ ಬಸ್ಗಳಲ್ಲಿ ಚಲಿಸುತ್ತಿದ್ದಾರೆ ಮತ್ತು ರೆಸ್ಟೋರೆಂಟ್ಗಳಲ್ಲಿ ಕುಳಿತಿದ್ದಾರೆ ಎಂದು ನನಗೆ ಕರೆಗಳು ಬಂದಿವೆ. ದಯವಿಟ್ಟು 100 ಕ್ಕೆ ಕರೆ ಮಾಡಿ, ಈ ಜನರನ್ನು ಬಂಧಿಸಿ ಸರ್ಕಾರಿ ಕ್ಯಾರೆಂಟೈನ್ ಗೆ ಕಳುಹಿಸಲಾಗುವುದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದರು.
5000Home quarantine stamping was carried to ensure they remain home in public interest.I have received calls some of those stamped are moving in BMTC buses and sitting in restaurants. Please call 100,these people will be picked up, arrested and sent to Government Quarantine.
— Bhaskar Rao IPS (@deepolice12) March 23, 2020
ಇನ್ನೊಂದೆಡೆ ಬೆಂಗಳೂರಿನಲ್ಲಿ ಜನರಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಭ್ಯಾಸ ಮಾಡಲಾಗುತ್ತಿದೆ. ಇದರ ಅಂಗವಾಗಿ ಕಿರಾಣಿ ಅಂಗಡಿಯ ಹೊರಗೆ ವಲಯಗಳ ದೃಶ್ಯಗಳನ್ನು ಚಿತ್ರಿಸಲಾಗಿದೆ (24.3.20) # COVID-19 #lockdown
Karnataka: People in #Bengaluru practice social distancing. Visuals of circles been drawn outside a grocery store (24.3.20) #COVID19 #lockdown (Source: Police) pic.twitter.com/hyic3Oz7Ce
— ANI (@ANI) March 25, 2020
ಬೆಂಗಳೂರಿನ ಪೊಲೀಸರು ನಿನ್ನೆ ಪೀಣ್ಯಾ ಹೊರವಲಯದಲ್ಲಿ ನಿರ್ಗತಿಕರಿಗೆ ಆಹಾರವನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
Karnataka: Police in Bengaluru distributed food to the needy yesterday, visuals from Peenya area. (Pics source: Bengaluru Police) #21daysLockdown #COVID19 pic.twitter.com/rjwjwtRyVe
— ANI (@ANI) March 25, 2020