ಸಿದ್ದರಾಮಯ್ಯ ಹೇಳಿದವರೇ ಮುಂದಿನ ಸಿಎಂ : ದೇವರಗುಡ್ಡದ ಕಾರಣಿಕ ನುಡಿ..

ಶ್ರೀ ಕ್ಷೇತ್ರ ದೇವರಗುಡ್ಡದ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ ದಶಮಿಯಂತೆ ನಡೆಯುವ ವರ್ಷದ ದೈವವಾಣಿ ಕೇಳಲು ಸಾವಿರಾ ಭಕ್ತರು ಆಗಮಿಸುತ್ತಾರೆ. ಕಾರ್ಣೀಕ ವಾಣಿಯನ್ನ ಮಳೆ, ಬೆಳೆ ಮತ್ತು ರಾಜಕೀಯವನ್ನ ನಿರ್ಧರಿಸ್ತಾರೆ‌. ಈ ವರ್ಷದ ದೇವರಗುಡ್ಡದ ಕಾರ್ಣಿಕ ಭವಿಷ್ಯವಾಣಿ ಏನು ಅಂತೀರಾ ಈ ಸ್ಟೋರಿ ನೋಡಿ...

Written by - Krishna N K | Last Updated : Oct 11, 2024, 08:00 PM IST
    • ಸುಕ್ಷೇತ್ರ ದೇವರ ಗುಡ್ಡದ ಸನ್ನದಿಯಲ್ಲಿ ನುಡಿದ ಗೊರವಯ್ಯ ಸ್ವಾಮಿ ವರ್ಷದ ದೈವವಾಣಿ...
    • ಆಕಶದತ್ತ ಚಿಗುರಿತಲೇ ಬೇರು ಮುತ್ತಾಯಿತಲ್ಲೇ ಪರಾಕ್ ದೈವ ವಾಣಿ..!
    • ರೈತರಿಗೆ ಲಾಭ, ರಾಜಕೀಯಕ್ಕೆ ಇಂದಿನ ನಾಯಕ ಕಿಂಗ್ ಮೇಕರ್...?
ಸಿದ್ದರಾಮಯ್ಯ ಹೇಳಿದವರೇ ಮುಂದಿನ ಸಿಎಂ : ದೇವರಗುಡ್ಡದ ಕಾರಣಿಕ ನುಡಿ.. title=

ರಾಣೆಬೆನ್ನೂರು : ಕಿಕ್ಕಿರಿದು ಸೇರಿರೋ ಜನರ ದಂಡು. ಮೊಳಗಿರೋ ಡಮರುಗದ ಸದ್ದು. ಮೆರವಣಿಯಲ್ಲಿ ಬರ್ತಿರೋ ಗೊರವಪ್ಪ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಾರ್ಣಿಕ ನುಡಿದ ಗೊರವಯ್ಯ. ಹೌದು ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರ ಗುಡ್ಡದಲ್ಲಿ ಕಂಡು ಬಂದ ದೃಶ್ಯಗಳಿವು. ದೇವರ ಗುಡ್ಡದ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸುಮಾರು ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಪ್ರತಿವರ್ಷ ದಸರಾ ನವಮಿಯಂದು ವರ್ಷದ ದೈವವಾಣಿಯನ್ನ ನುಡಿಯಲಾಗುತ್ತದೆ. 

ಹೌದು, ನೂರಾರು ಭಕ್ತರ ಮಧ್ಯ ಆಗಮಿಸಿದ ಗೊರವಯ್ಯಸ್ವಾಮಿ 18 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾನೆ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ಕಾರ್ಣಿಕ ನುಡಿಯನ್ನ ನಾಗಪಜ್ಜ ಉರ್ಮಿ ಗೊರವಯ್ಯಾ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ‌. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ನಾಗಪಜ್ಜ ಉರ್ಮಿ 18 ಅಡಿ ಗೊರವಯ್ಯ ಸದ್ದಲೇ ಅನ್ನುತ್ತಾ ಆಕಶದತ್ತ ಚಿಗುರಿತಲೇ ಬೇರು ಮುತ್ತಾಯಿತಲ್ಲೇ ಪರಾಕ್ ಅನ್ನೋ ದೈವವಾಣಿ ನುಡಿದ್ದಾನೆ. ದೇವರ ಗುಡ್ಡದ ಧರ್ಮದರ್ಶಿ ಸಂತೋಷ ಭಟ್ ಗುರುಜೀ ಅವರು ವಿಶ್ಲೇಷಣೆ ಮಾಡಿದ್ದಾರೆ. ರೈತರು ಬೆಳೆದ ಬೆಳೆ ಫಲವತ್ತಾಗಿ ಬೆಳೆಯುತ್ತದೆ. ರೈತರು ಸಂತೋಷವಾಗಿ ಇರುತ್ತಾರೆ ಅಂತಾರೆ. ಇನ್ನು ರಾಜಕೀಯವಾಗಿ ಸಿಎಂ ಸಿದ್ದರಾಮಯ್ಯ ಅವರು ಬೇರುಯಿದ್ದಂತೆ ಅಂತ ಪರೋಕ್ಷವಾಗಿ ದೈವವಾಣಿ ಇದಂತೆ ಎಂದು ದೇವಗುಡ್ಡದ ಪ್ರಧಾನ ಅರ್ಚಕರು ಸಂತೋಷಭಟ್ಟ ಗುರುಜೀ  ಹೇಳಿದರು...

ಇನ್ನು ವರ್ಷದ ಭವಿಷ್ಯವಾಣಿ ಅಂತಲೆ ನಂಬಿಕೊಂಡು ಬಂದಿರೋ ಕಾರ್ಣಿಕವಾಣಿ ಕೇಳಲು ರಾಜ್ಯದ ಬೇರೆ ಬೇರೆ ಜಿಲ್ಲೆಯ ಸಾವಿರಾರು ಜನರು ಆಗಮಿಸಿರ್ತಾರೆ. ಸಂಜೆಯಾಗುತ್ತಿದ್ದಂತೆ  ಕಾರ್ಣಿಕ ನುಡಿಯೋ ಸ್ಥಳ ಜನರಿಂದ ತುಂಬಿ ಬಿಡುತ್ತದೆ.ಸುಮಾರು ವರ್ಷಗಳಿಂದ ರೈತರು ದೇವರಗುಡ್ಡದ ಕಾರ್ಣಿಕವನ್ನು ಕೇಳಿ ಮಳೆ ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ದೇವರಗುಡ್ಡದ ಕಾರ್ಣಿಕ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಕಾರ್ಣಿಕ ವಾಣಿ ಆಲಿಸಿದ ಕಿಕ್ಕಿರಿದು ಸೇರಿದ್ದ ರೈತಾಪಿ ವರ್ಗದ ಜನರಿಗೆ ಮಳೆ ಬೆಳೆಗಳು ಕೈಕೋಡೋ ಸಾಧ್ಯತೆ ಇದೆ. 

ಆಕಾಶದತ್ತ ಚಿಗುರಿತಲ್ಲೇ ಅಂದರೆ ರೈತ ವರ್ಗದವರು ಕೋಟ್ಯಾಂತರ ರೂಪಾಯಿ ಭೂಮಿಗೆ ಹಾಕ್ತಾರೆ. ಅದರಿಂದ ರೈತರಿಗೆ ಲಾಭವಾಗುವ ನಿರೀಕ್ಷೆಗಳು ಹೆಚ್ಚಿವೆ. ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರೈತರು ಸಂತೋಷವಾಗಿ ಇರುತ್ತಾರೆ. ಬೇರು ಮುತ್ತಾಯಿತಲ್ಲೇ ಪರಾಕ್ ಎಂದರೆ ರಾಜ್ಯದಲ್ಲಿರೋ ಸರ್ಕಾರಕ್ಕೆ ಆಪತು ಬಂದರು. ಇಂದಿನ ನಾಯಕ ಆಕಾಶದ ಎತ್ತರಕ್ಕೆ ಸಾಗಿದ್ದಾರೆ. ಅವರು ಹೇಳಿದಂತೆ ಎಲ್ಲ ನಡೆಯಿತ್ತದಯಂತೆ. ಇನ್ನು ರಾಜ್ಯದ ವಿವಿಧೆ ಜನರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ರು. ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ದೇವರಗುಡ್ಡದ ಕಾರ್ಣಿಕೋತ್ಸವದ ವಾಣಿ ಸತ್ಯವಾಗುತ್ತದೆ ಅನ್ನೋ ನಂಬಿಕೆ ಬಲವಾಗಿದೆ. 

ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ದೇವರಗುಡ್ಡದ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಫೇಮಸ್ ಆಗಿದೆ. ಸಾಕ್ಷಾತ್ ದೇವರಗುಡ್ಡದ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ರೈತರು ಸಂತೋಷದಿಂದ ಇದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಏನು ಬದಲಾವಣೆ ಆಗುತ್ತೆ ಅಂತಾ ದೈವವಾಣಿವನ್ನ ಅವರವರೇ ವಿಶ್ಲೇಷಣೆ ಮಾಡುತ್ತಾ ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ರು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News