ದಸರಾ ಹಬ್ಬದ ಪ್ರಯುಕ್ತ ಚಿರು 'ವಿಶ್ವಂಭರ' ಟೀಸರ್ ರಿಲೀಸ್‌..! ದುರ್ಗೆಯ ಆರಾಧನೆಯಂದು.. ಹನುಮ ದರ್ಶನ..

Vishwambhara teaser : ಮೆಗಾ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಹತ್ತಿರ ಬಂದಿದೆ. ಚಿರಂಜೀವಿ ಅವರ ಇತ್ತೀಚಿನ ಚಿತ್ರ ವಿಶ್ವಂಭರ ಟೀಚರ್ ಇಂದು (ಶನಿವಾರ) ಬೆಳಿಗ್ಗೆ ಬಿಡುಗಡೆಯಾಗಿದೆ. ದಸರಾ ಹಬ್ಬದಂದು ವಿಶ್ವರಂಭರ ಸಂಭ್ರಮ ಶುರುವಾಗಿದ್ದು, ಮೆಗಾ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ.. 

Written by - Krishna N K | Last Updated : Oct 12, 2024, 03:19 PM IST
    • ಬಹುನಿರೀಕ್ಷಿತ ಸಿನಿಮಾ ʼವಿಶ್ವಂಭರʼ ಟೀಸರ್ ಬಿಡುಗಡೆ
    • ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ʼವಿಶ್ವಂಭರʼ
    • ವಿಷುಯಲ್ ವಂಡರ್, ಸೋಶಿಯೋ ಫ್ಯಾಂಟಸಿ ಥ್ರಿಲ್ಲರ್, ಸಾಹಸಮಯ ಚಿತ್ರ
ದಸರಾ ಹಬ್ಬದ ಪ್ರಯುಕ್ತ ಚಿರು 'ವಿಶ್ವಂಭರ' ಟೀಸರ್ ರಿಲೀಸ್‌..! ದುರ್ಗೆಯ ಆರಾಧನೆಯಂದು.. ಹನುಮ ದರ್ಶನ..  title=

Megastar Chiranjeevi Vishwambhara : ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ʼವಿಶ್ವಂಭರʼ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವು ವಿಷುಯಲ್ ವಂಡರ್, ಸೋಶಿಯೋ ಫ್ಯಾಂಟಸಿ ಥ್ರಿಲ್ಲರ್, ಸಾಹಸಮಯ ಚಿತ್ರವಾಗಿ ವಶಿಷ್ಟ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ.

ಈ ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ಸುಮಾರು ರು.200 ​​ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಈ ಚಿತ್ರದ ನಿರ್ಮಾಪಕರು. ಜಗದೇಕವೀರುಡು ಅತಿಲೋಕಸುಂದರಿ, ಅಂಜಿ ಚಿತ್ರಗಳ ನಂತರ ಚಿರಂಜೀವಿಯಿಂದ ಬರುತ್ತಿರುವ ಸೋಶಿಯಲ್ ಫ್ಯಾಂಟಸಿ ಚಿತ್ರ ಇದಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ:ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್...

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ನಲ್ಲಿ ಮೆಗಾಸ್ಟಾರ್ ಬಿಳಿ ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಟೀಸರ್ ನೋಡುವಾಗ ಬೇರೊಂದು ಲೋಕದಲ್ಲಿದ್ದ ಅನುಭವವಾಗುತ್ತಿದೆ. ಒಟ್ಟಿನಲ್ಲಿ ಟೀಸರ್ ವಿಶ್ವಂಭರ ಸಿನಿಮಾದ ನಿರೀಕ್ಷೆಯನ್ನು ತುಂಬಾನೇ ಹೆಚ್ಚಿಸಿದೆ. ಇದರೊಂದಿಗೆ ಮೆಗಾ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. 

 

ಈ ಚಿತ್ರದಲ್ಲಿ ಚಿರಂಜೀವಿ ಎದುರು ನಾಯಕಿ ತ್ರಿಷಾ ನಟಿಸುತ್ತಿದ್ದಾರೆ. ಸ್ಟಾಲಿನ್ ನಂತರ ಚಿರು ಮತ್ತು ತ್ರಿಷಾ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಇದಾಗಿದೆ. ಖ್ಯಾತ ನಟರಾದ ಮೀನಾಕ್ಷಿ ಚೌಧರಿ, ಆಶಿಕಾ ರಂಗನಾಥ್, ಸುರಭಿ, ಇಶಾ ಚಾವ್ಲಾ... ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂಕ್ರಾಂತಿಯ ಉಡುಗೊರೆಯಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 

ಇದನ್ನೂ ಓದಿ:ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್‌ ನೋಡಿ..

ಈ ಸಿನಿಮಾದಲ್ಲಿ ಸಿಸ್ಟರ್‌ ಸೆಂಟಿಮೆಂಟ್ ಪ್ರಧಾನವಾಗಿರಲಿದೆಯಂತೆ. ರಮ್ಯಾ ಕುರಲೂಟಿ ಚಿರಂಜೀವಿಯ ತಂಗಿಯಾಗಿ ನಟಿಸುತ್ತಿದ್ದಾರೆ. ‘ಮಾರುತಿನಗರ ಸುಬ್ರಹ್ಮಣ್ಯಂ’ ಸಿನಿಮಾದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ರಮ್ಯಾ ತಮ್ಮ ಸೌಂದರ್ಯ ಮತ್ತು ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಸೂರೆಗೊಂಡಿದ್ದರು.. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ವಿಶ್ವಂಭರ ಚಿತ್ರಕ್ಕಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News