ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಲಡ್ಕಿ ಬಹಿನ್ ಯೋಜನೆ ಅಡಿಯಲ್ಲಿ ದೀಪಾವಳಿ ಬೋನಸ್ 2024 ಅನ್ನು ಘೋಷಿಸಿದೆ. ಅಧಿಸೂಚನೆಯ ಪ್ರಕಾರ, ಲಡ್ಕಿ ಬಹಿನ್ ಯೋಜನೆ ದೀಪಾವಳಿ ಬೋನಸ್ 2024 ಮೂಲಕ ಅರ್ಹ ಮಹಿಳೆಯರಿಗೆ ನಾಲ್ಕನೇ ಮತ್ತು ಐದನೇ ಕಂತುಗಳನ್ನು ಪಾವತಿಸಲಾಗುತ್ತದೆ.ಇದರ ಅಡಿಯಲ್ಲಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 3,000 ರೂ.ಯನ್ನು ವರ್ಗಾಯಿಸಲಾಗುವುದು.
ಬ್ಯಾಂಕ್ ಖಾತೆಗೆ ಹಣ :
ಮಹಾರಾಷ್ಟ್ರದ 94,000 ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳು ಈಗಾಗಲೇ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಈ ಮುಂಗಡ ಪಾವತಿಯನ್ನು ಪಡೆದಿದ್ದಾರೆ.ಅಧಿಕಾರಿಗಳ ಪ್ರಕಾರ,ದೀಪಾವಳಿ ಬೋನಸ್ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿಸಬೇಕು.ಈ ಮೂಲಕ ಯಾವುದೇ ಆರ್ಥಿಕ ಚಿಂತೆಯಿಲ್ಲದೆ ದೀಪಾವಳಿ ಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತದೆ.ಇದಲ್ಲದೆ,ಮಹಾರಾಷ್ಟ್ರ ರಾಜ್ಯ ಸರ್ಕಾರವು ಮಾಝಿ ಲಡ್ಕಿ ಬಹಿನ್ ಯೋಜನೆಯ ನಾಲ್ಕು ಮತ್ತು ಐದನೇ ಕಂತನ್ನು ಸಮಯಕ್ಕಿಂತ ಮುಂಚಿತವಾಗಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರೊಂದಿಗೆ ಅಕ್ಟೋಬರ್ನಲ್ಲಿ ಮಹಿಳೆಯರಿಗೆ ಸಾಮಾನ್ಯ 1500 ರೂ.ಗಳ ಬದಲಿಗೆ 3000 ರೂ.ವರ್ಗಾಯಿಸಲಾಗುವುದು. ದೀಪಾವಳಿ ಬೋನಸ್ ಅನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ : Arecanut Price in Karnataka: ಯಲ್ಲಾಪುರದಲ್ಲಿ 56 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ
ಏನಿದು ಯೋಜನೆ?
ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆಯನ್ನು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸಮ್ಮಿಶ್ರ ಸರ್ಕಾರ ಆರಂಭಿಸಿದೆ.ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಡಳಿತದಲ್ಲಿ ಈಗಾಗಲೇ ಜಾರಿಗೊಳಿಸಲಾದ 'ಲಾಡ್ಲಿ ಬ್ರಾಹ್ಮಣ ಯೋಜನೆ' ಮಾದರಿಯಲ್ಲಿ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ.ರಕ್ಷಾಬಂಧನ ಸಂದರ್ಭದಲ್ಲಿ ಪ್ರಾರಂಭಿಸಲಾದ ಈ ಯೋಜನೆಯನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಅವರು ಪೂರಕ ಬಜೆಟ್ನಲ್ಲಿ ಸೇರಿಸಿದ್ದಾರೆ.
46,000 ಕೋಟಿ ವಾರ್ಷಿಕ ವೆಚ್ಚ :
21 ರಿಂದ 65 ವರ್ಷದೊಳಗಿನ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.ಇದರ ಅಡಿಯಲ್ಲಿ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತದೆ.ಬಡತನ ರೇಖೆಗಿಂತ ಕೆಳಗಿರುವ ಅಥವಾ ಸೀಮಿತ ಆದಾಯದೊಂದಿಗೆ ವಾಸಿಸುವ ಮಹಿಳೆಯರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್ !ಬೋನಸ್ ಜೊತೆಗೆ 18 ತಿಂಗಳ ಬಾಕಿ ಡಿಎ ಬಗ್ಗೆ ದೀಪಾವಳಿಗೂ ಮುನ್ನವೇ ಮಹತ್ವದ ನಿರ್ಧಾರ
ಯೋಜನೆಯ ನಿಯಮಗಳು:
ಯೋಜನೆಯು ಮಹಾರಾಷ್ಟ್ರ ರಾಜ್ಯದ ಮಹಿಳಾ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.ಅರ್ಜಿದಾರರು ಮಹಾರಾಷ್ಟ್ರದ ಖಾಯಂ ನಿವಾಸಿಗಳಾಗಿರಬೇಕು. ಇದಲ್ಲದೆ,ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 21 ರಿಂದ 65 ವರ್ಷಗಳ ನಡುವೆ ಇರಬೇಕು.ವಿವಾಹಿತರು,ಅವಿವಾಹಿತರು, ವಿಚ್ಛೇದಿತರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರ ಮಹಿಳೆ ಯಾವುದೇ ಬ್ಯಾಂಕ್ನಲ್ಲಿ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.ಇದರೊಂದಿಗೆ ಅರ್ಜಿದಾರ ಮಹಿಳೆಯ ಕುಟುಂಬದ ಆದಾಯ 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು ಎಂಬುದು ಈ ಯೋಜನೆಯ ಮುಖ್ಯ ನಿಯಮ.
ಅರ್ಜಿ ಸಲ್ಲಿಸುವುದು ಹೇಗೆ ?:
ಮಹಾರಾಷ್ಟ್ರದಲ್ಲಿ ಲಾಡ್ಲಿ ಬಹಿನ್ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಇತ್ತೀಚೆಗೆ ಅಕ್ಟೋಬರ್ 15 ರವರೆಗೆ ವಿಸ್ತರಿಸಲಾಗಿದೆ. ಯೋಜನೆಗೆ ಇನ್ನೂ ಅರ್ಜಿ ಸಲ್ಲಿಸದ ಮಹಿಳೆಯರಿಗೆ ಹೊಸ ಗಡುವಿನ ಮೊದಲು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ