ಗಡ್ಡ ಅಡ್ಡಿಯಾಗುತ್ತಿದೆ.. ಯುವಕರೇ ಕ್ಲೀನ್‌ ಶೇವ್‌ ಮಾಡಿಸಿ..! ಯುವತಿಯರ ವಿನೂತನ ಪ್ರತಿಭಟನೆ..

Women Protest Beards : ‘ನೋ ಕ್ಲೀನ್ ಶೇವ್.. ನೋ ಲವ್‌’... ‘ನಮಗೆ ಗಡ್ಡ ಇಲ್ಲದ ಬಾಯ್‌ಫ್ರೆಂಡ್‌ಗಳು ಬೇಕು’ ಎಂಬ ಘೋಷವಾಕ್ಯಗಳನ್ನು ಬರೆದುಕೊಂಡು ಬೀದಿಗಿಳಿದ ಹುಡುಗಿಯರು.. ಹೀಗೊಂದು ವಿನೂತನ ಪ್ರತಿಭಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಷ್ಟಕ್ಕೂ ಈ ಪ್ರೋಟೆಸ್ಟ್‌ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..

Written by - Krishna N K | Last Updated : Oct 19, 2024, 02:34 PM IST
    • ‘ನೋ ಕ್ಲೀನ್ ಶೇವ್.. ನೋ ಲವ್‌’... ‘ನಮಗೆ ಗಡ್ಡ ಇಲ್ಲದ ಬಾಯ್‌ಫ್ರೆಂಡ್‌ಗಳು ಬೇಕು’
    • ವಿನೂತನ ಪ್ರತಿಭಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌
    • ಪುರುಷರ ಗಡ್ಡವನ್ನು ವಿರೋಧಿಸಿ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಗಡ್ಡ ಅಡ್ಡಿಯಾಗುತ್ತಿದೆ.. ಯುವಕರೇ ಕ್ಲೀನ್‌ ಶೇವ್‌ ಮಾಡಿಸಿ..! ಯುವತಿಯರ ವಿನೂತನ ಪ್ರತಿಭಟನೆ.. title=

No Beard No Love girl protest : ಪ್ರಪಂಚದಾದ್ಯಂತ ವಿವಿಧ ವಿಷಯಗಳ ಮೇಲೆ ಪ್ರತಿಭಟನೆಗಳು ನಡೆಯುತ್ತವೆ. ಕೆಲವೊಮ್ಮೆ ಕೆಲವರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರೆ, ಇನ್ನು ಕೆಲವರು ಸಮಾಜದ ಬದಲಾವಣೆಗಾಗಿ ಪ್ರತಿಭಟನೆ ನಡೆಸುತ್ತಾರೆ.. ಸದ್ಯ ಕೆಲ ಹುಡುಗಿಯರು ಪುರುಷರ ಗಡ್ಡವನ್ನು ವಿರೋಧಿಸಿ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 

ಇನ್ನು ವೈರಲ್‌ ವೀಡಿಯೊದಲ್ಲಿ, ಕೃತಕ ಗಡ್ಡವನ್ನು ಧರಿಸಿರುವ ಕೆಲವು ಹುಡುಗಿಯರು ನಗರದ ಬೀದಿಗಳಲ್ಲಿ ಗಡ್ಡಕ್ಕೆ ವಿರೋಧ ವ್ಯಕ್ತಪಡಿಸುತ್ತಾ ರ್ಯಾಲಿ ನಡೆಸುವ ದೃಶ್ಯವಿದೆ.. ಈ ಘಟನೆ ನಡೆದದ್ದು ನಮ್ಮ ದೇಶದಲ್ಲೇ.. ವಿಡಿಯೋದಲ್ಲಿ ಕೆಲ ಹುಡುಗಿಯರು ಕೈಯಲ್ಲಿ ವಿಚಿತ್ರ ಬರಹವುಳ್ಳ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ:ಡೀಪ್‌ಫೇಕ್‌ಗೆ ಬಲಿಯಾದ ಸೀತಾರಾಮಂ ಬೆಡಗಿ ಮೃಣಾಲ್‌..! ಆ ರೀತಿಯ ಫೋಟೋಸ್‌ ಹರಿಬಿಟ್ಟ ಕಿಡಿಗೇಡಿಗಳು..

ವಾಸ್ತವವಾಗಿ ಈ ಹುಡುಗಿಯರು ಕ್ಲೀನ್ ಶೇವ್ ಬಾಯ್‌ಫ್ರೆಂಡ್‌ಗಾಗಿ ರ್ಯಾಲಿ ಮಾಡುತ್ತಿದ್ದಾರೆ. ಅದೇ ಬರಹವಿರುವ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.. ವ್ಯಕ್ತಿಯೊಬ್ಬರು ಹುಡುಗಿಯರ ಈ ಪ್ರತಿಭಟನೆಯ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by ghantaa (@ghantaa)

ಇಂದೋರ್‌ನಲ್ಲಿ ಇಂತಹ ವಿನೂತನ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಆದರೆ ಹುಡುಗಿಯರು ಈ ಪ್ರತಿಭಟನೆ ಆಯೋಜಿಸಿದ್ದಾರಾ..? ಇಲ್ಲವೇ.. ರೀಲ್ಸ್‌ಗಾಗಿ ಈ ರೀತಿ ಮಾಡಿದ್ದಾರಾ ಎಂಬ ವಿಚಾರ ಸ್ಪಷ್ಟವಾಗಿಲ್ಲ. ವಿಡಿಯೋ ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೇಂಡ್‌ ಆಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News