ಈ ನೀರು ಅಮೃತ್ತಕ್ಕಿಂತಲೂ ಮಿಗಿಲು.. ಮಧುಮೇಹಕ್ಕೆ ಬೆಸ್ಟ್‌ ಮನೆಮದ್ದು.. ಇದನ್ನು ಸೇವಿಸುವುದರಿಂದ ಕ್ಷಣಾರ್ಧದಲ್ಲೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌..!

Barley water: ಬಾರ್ಲಿ ನೀರು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ, ಇದೇ ಕಾರಣದಿಂದ ಇದನ್ನು ಬಡವರ ಅಮೃತ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಬ್ಲಡ್‌ ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ ನಿಮ್ಮ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
 

1 /7

Barley water: ಬಾರ್ಲಿ ನೀರು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ, ಇದೇ ಕಾರಣದಿಂದ ಇದನ್ನು ಬಡವರ ಅಮೃತ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಬ್ಲಡ್‌ ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ ನಿಮ್ಮ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡುವಲ್ಲಿ ಸಹಾಯ ಮಾಡುತ್ತದೆ.  

2 /7

ಇತ್ತೀಚಿನ ಜೀವನಶೈಲಿಯ ಕಾರಣ ಜನರು ಹಲವಾರು ಆರೋಗ್ಯ ಸಮಸ್ಯೆಗಲಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಹಲವು ಔಷಧಿಗಳು ಹಾಗೂ ಮನೆಮದ್ದುಗಳ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಮಧುಮೇಹ. ಈ ರೋಗ ಜನರನ್ನು ವಯಸ್ಸಿನ ಭೇದವಿಲ್ಲದೆ ಕಾಡಲು ಆರಂಭಿಸಿದೆ, ಈ ರೋಗವನ್ನು ಸಾಮಾನ್ಯವಾಗಿ ತೆಗೆದುಕೊಂಡರೆ, ಮುಂದೆ ಶುಗರ್‌ ಜಾಸ್ತಿಯಾಗುವುದರಿಂದ ಹೃದಯ ಕಾಯಿಲೆ ಹಾಗೂ ಕಿಡ್ನಿ ಪೇಲ್ಯೂರ್‌ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  

3 /7

ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ಬಾರ್ಲಿ ನೀರು ತುಂಬಾ ಉತ್ತಮ. ಇದು ಹೆಚ್ಚಿನ ಫೈಬರ್‌ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ನಿಮ್ಮ ದೇಹದಲ್ಲಿನ ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಗ್ಯಾಸ್-ಹಾರ್ಟ್ ಬರ್ನ್ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಬಾರ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ನೀವು ಸುಧಾರಣೆ ಮಾಡಬಹುದು. ಈ ಡಿಟಾಕ್ಸ್ ಪಾನೀಯವು ಬಿಸಿ ವಾತಾವರಣದಲ್ಲೂ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.   

4 /7

ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುತ್ತದೆ ಹಾಗೂ ಕಿಡ್ನಿಗಲನ್ನು ಶುದ್ಧವಾಗಿಸುತ್ತದೆ. ಇದು, ಯಾವುದೇ ತ್ಯಾಜವನ್ನು ದೇಹದಲ್ಲಿ ಸಂಗ್ರಹಿಸಲು ಬಿಡುವುದಿಲ್ಲ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾರ್ಲಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.  

5 /7

ಜಿಮ್‌ಗೆ ಹೋಗುವವರು ಬೆಳಿಗ್ಗೆ ಮತ್ತು ಮಧ್ಯಾಹ್ನ ನಿಯಮಿತವಾಗಿ ಬಾರ್ಲಿ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಬಾರ್ಲಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೀರಿಕೊಳ್ಳುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.  

6 /7

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಸಹ ಬಾರ್ಲಿ ನೀರನ್ನು ಸೇವಿಸಬಹುದು. ಬಾರ್ಲಿ ನೀರು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬಾರ್ಲಿ ಸೇವನೆಯ ಜೊತೆಗೆ ನೀವು ಬಳಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದು ಮೂತ್ರಪಿಂಡದ ಆರೋಗ್ಯವನ್ನೂ ಸುಧಾರಿಸುತ್ತದೆ.  

7 /7

ಬಾರ್ಲಿಯಲ್ಲಿ ಫೈಬರ್ ಇರುವುದರಿಂದ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಂದರೆ ಮಧುಮೇಹದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ಕೂಡ ಸೇವಿಸಬಹುದು. ಬಾರ್ಲಿಯಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ ಇದರಲಲ್ಲಿ ಕಡಿಮೆಯಾಗಿರುವುದರಿಂದ ಇದು ಮಧುಮೇಹಿಗಳಿಗೆ ಅಮೃತವಿದ್ದಂತೆ.