ಕಾರು ಅಡ್ಡಹಾಕಿದ್ದಕ್ಕೆ ಬ್ಯಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನೇ 100 ಮೀ.ದೂರ ಎಳೆದೊಯ್ದ ಚಾಲಕ! ಶಾಕಿಂಗ್‌ ವಿಡಿಯೋ ಸೆರೆ

Shivamogga: ಕಾರು ಚಾಲಕನ ವರ್ತನೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅದೇ ವೇಳೆ ಅತ್ತ ಟ್ರಾಫಿಕ್‌ ಸಿಬ್ಬಂದಿಯನ್ನ ಕಾರು ಚಲಾಯಿಸುತ್ತಾ ತಳ್ಳಿಕೊಂಡು ಬಂದ ವ್ಯಕ್ತಿ, ಆನಂತರ ಇದ್ದಕ್ಕಿದ್ದಂತೆ ಕಾರಿನ ಸ್ಪೀಡ್‌ ಜಾಸ್ತಿ ಮಾಡಿದ್ದಾನೆ.

Written by - Bhavishya Shetty | Last Updated : Oct 24, 2024, 08:17 PM IST
    • ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಳಿ ಟ್ರಾಫಿಕ್‌ ಸಿಬ್ಬಂದಿಯಿಂದ ವಾಹನಗಳ ದಾಖಲೆ ತಪಾಸಣೆ
    • ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್‌ ಸಿಬ್ಬಂದಿ ತಡೆದಿದ್ದಾರೆ
    • ಕಾರಿನ ಚಾಲಕ ಪೊಲೀಸ್‌ ಪೇದೆಯ ಮೇಲೆಯೇ ಕಾರು ಹತ್ತಿಸುವ ರೀತಿ ವರ್ತಿಸಿದ್ದಾನೆ
ಕಾರು ಅಡ್ಡಹಾಕಿದ್ದಕ್ಕೆ ಬ್ಯಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನೇ 100 ಮೀ.ದೂರ ಎಳೆದೊಯ್ದ ಚಾಲಕ! ಶಾಕಿಂಗ್‌ ವಿಡಿಯೋ ಸೆರೆ title=
Shivamogga Traffic Police

Shivamogga Viral Video: ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಳಿ ಟ್ರಾಫಿಕ್‌ ಸಿಬ್ಬಂದಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್‌ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಕಾರಿನ ಚಾಲಕ ಪೊಲೀಸ್‌ ಪೇದೆಯ ಮೇಲೆಯೇ ಕಾರು ಹತ್ತಿಸುವ ರೀತಿ ವರ್ತಿಸಿದ್ದಾನೆ. ಪದೇ ಪದೇ ಹಿಂದೆ ಸರಿದು, ಕಾರನ್ನ ನಿಲ್ಲಿಸುವಂತೆ ಸೂಚಿಸಿದರು ಸಹ ಕಾರಿನ ಚಾಲಕ ತನ್ನ ಅಹಂಕಾರವನ್ನ ಪ್ರದರ್ಶಿಸಿದ್ದಾನೆ.

ಇದನ್ನೂ ಓದಿ: ಬೆಳಗ್ಗೆ ಏಳುತ್ತಿದ್ದಂತೆ ಈ ಒಣಹಣ್ಣನ್ನು ತಿನ್ನಿ: ಯಾವುದೇ ಶ್ರಮವಿಲ್ಲದೆ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!

ಕಾರು ಚಾಲಕನ ವರ್ತನೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅದೇ ವೇಳೆ ಅತ್ತ ಟ್ರಾಫಿಕ್‌ ಸಿಬ್ಬಂದಿಯನ್ನ ಕಾರು ಚಲಾಯಿಸುತ್ತಾ ತಳ್ಳಿಕೊಂಡು ಬಂದ ವ್ಯಕ್ತಿ, ಆನಂತರ ಇದ್ದಕ್ಕಿದ್ದಂತೆ ಕಾರಿನ ಸ್ಪೀಡ್‌ ಜಾಸ್ತಿ ಮಾಡಿದ್ದಾನೆ. ಈ ವೇಳೆ ಟ್ರಾಫಿಕ್‌ ಸಿಬ್ಬಂದಿ ಬ್ಯಾನೆಟ್‌ ಮೇಲೆ ಬಿದ್ದಿದ್ದಾರೆ. ಅದಕ್ಕೂ ಕೇರ್‌ ಮಾಡದೇ ಕಾರು ಚಾಲಕ ಸುಮಾರು ನೂರು ಮೀಟರ್‌ಗೂ ಹೆಚ್ಚು ದೂರ ಅವರನ್ನ ಎಳೆದೊಯ್ದಿದ್ದಾನೆ.

ಇದನ್ನೂ ಓದಿ: ಬಂತು, ಬಂತು ಸಿಹಿಸುದ್ದಿ... ಕೇಂದ್ರ ಸರ್ಕಾರದ ಬೆನ್ನಲೇ ದೀಪಾವಳಿ ಬೋನಸ್‌ ಘೋಷಿಸಿದ ರಾಜ್ಯ ಸರ್ಕಾರ! ವೇತನದ ಜೊತೆಗೆ ಸಿಗಲಿದೆ ಇಷ್ಟು ಮೊತ್ತದ ʼಭರ್ಜರಿ ಗಿಫ್ಟ್ʼ

ಅದೃಷ್ಟಕ್ಕೆ ಟ್ರಾಫಿಕ್‌ ಸಿಬ್ಬಂದಿಯ ಜೀವಕ್ಕೆ ಅಪಾಯವಾಗಿಲ್ಲ ಎನ್ನಲಾಗಿದೆ. ಇನ್ನು ಕಾರು ಚಲಾಯಿಸುತ್ತಿದ್ದಿದ್ದು ಯಾರು? ಮಾಲೀಕನೆ? ಆತನ ಉದ್ದೇಶವೇನಾಗಿತ್ತು ಇನ್ನಷ್ಟೆ ಗೊತ್ತಾಗಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News