ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಥಿಯೇಟರ್‌ನಲ್ಲೇ ನಟನ ಕಪಾಳಕ್ಕೆ ಹೊಡೆದ ಮಹಿಳೆ..! ವಿಡಿಯೋ ವೈರಲ್..

Love Reddy viral video : ಲವ್ ರೆಡ್ಡಿ ಚಿತ್ರತಂಡಕ್ಕೆ ಆಘಾತಕಾರಿ ಅನುಭವವಾಗಿದೆ. ಹೈದರಾಬಾದ್‌ನ ನಿಜಾಂಪೇಟೆಯ ಜಿಪಿಆರ್ ಮಾಲ್‌ನಲ್ಲಿ ಮಹಿಳೆಯೊಬ್ಬರು ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಕೋಪಗೊಂಡು, ಥಿಯೇಟರ್‌ಗೆ ಬಂದಿದ್ದ ನಟನ ಮೇಲೆ ಹಲ್ಲೆ ಮಾಡಿದ್ದಾಳೆ.. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.

Written by - Krishna N K | Last Updated : Oct 25, 2024, 05:09 PM IST
    • ಲವ್ ರೆಡ್ಡಿ ಚಿತ್ರತಂಡಕ್ಕೆ ಆಘಾತಕಾರಿ ಅನುಭವವಾಗಿದೆ.
    • ಮಹಿಳೆಯೊಬ್ಬರು ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಕೋಪಗೊಂಡಿದ್ದಾಳೆ.
    • ಥಿಯೇಟರ್‌ಗೆ ಬಂದಿದ್ದ ನಟನ ಮೇಲೆ ಹಲ್ಲೆ ಮಾಡಿದ್ದಾಳೆ..
ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಥಿಯೇಟರ್‌ನಲ್ಲೇ ನಟನ ಕಪಾಳಕ್ಕೆ ಹೊಡೆದ ಮಹಿಳೆ..! ವಿಡಿಯೋ ವೈರಲ್.. title=

Love Reddy : ಸಿನಿಮಾದಲ್ಲಿನ ಘಟನೆಗಳನ್ನು ನೋಡಿ ಕೆಲವು ಪ್ರೇಕ್ಷಕರು ಭಾವುಕರಾಗುತ್ತಾರೆ. ಕೆಲವೊಮ್ಮೆ ಸಿನಿಮಾದಲ್ಲಿನ ಘಟನೆಗಳು ನಮ್ಮನ್ನ ಅಳುವಂತೆ ಮಾಡುತ್ತವೆ. ಇನ್ನೂ ಕೆಲವರಿಗೆ ಸಿನಿಮಾದಲ್ಲಿ ನಡೆಯುವ ಘಟನೆ ತಮ್ಮ ಜೀವನದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಕೆಲವರು ಕೆಲವು ಸೀನ್‌ ನೋಡಿ, ಸೀಟಿನಲ್ಲಿ ದೆವ್ವ, ದೇವರು ಬಂದಂತೆ ವರ್ತಿಸುತ್ತಾರೆ. 

ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಲವ್ ರೆಡ್ಡಿ ಚಿತ್ರತಂಡಕ್ಕೆ ಒಂದು ಕಹಿ ಅನುಭವವಾಗಿದೆ. ಮಹಿಳೆಯೊಬ್ಬರು ಚಿತ್ರತಂಡದ ಹತ್ತಿರ ಬಂದು ನಟರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:60 ವರ್ಷದ ಹೀರೋ ಜೊತೆ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್‌ ಹೀರೋಯಿನ್‌! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್‌ ಸುದ್ದಿ

ಲವ್ ರೆಡ್ಡಿ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ.. ಆರಂಭದಲ್ಲಿ ಈ ಸಿನಿಮಾ ಪಾಸಿಟಿವ್‌ ಟಾಕ್‌ ಪಡೆದರೂ ಆ ನಂತರ.. ಜನರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ರೆಬೆಲ್ ಸ್ಟಾರ್ ಪ್ರಭಾಸ್ ಈ ಸಿನಿಮಾ ಚೆನ್ನಾಗಿದ್ದು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದರು. ಇದರೊಂದಿಗೆ ಈ ಸಿನಿಮಾದ ಬಗ್ಗೆ ಮತ್ತೆ ಪಾಸಿಟಿವ್ ಟಾಕ್‌ ಶುರುವಾಗಿದೆ..

ಆದ್ರೆ.. ಇತ್ತೀಚೆಗಷ್ಟೇ.. ಈ ಚಿತ್ರತಂಡದ ಜನರ ಪ್ರತಿಕ್ರಿಯೆ ತಿಳಿಯಲು.. ಒಟ್ಟಿಗೆ ಹೈದರಾಬಾದ್‌ನ ನಿಜಾಂಪೇಟ್ ನಲ್ಲಿರುವ ಮಾಲ್ ವೊಂದಕ್ಕೆ ತೆರಳಿದ್ದರು. ಕಲಾವಿದರನ್ನು ನೋಡಿ ಥಿಯೇಟರ್ ನಲ್ಲಿದ್ದ ಅಭಿಮಾನಿಗಳು ಸಿಳ್ಳೆ ಹೊಡೆದು ಕೇಕೆ ಹಾಕಿದರು. ಆದರೆ ಅಲ್ಲಿದ್ದ ಮಹಿಳೆಯೊಬ್ಬಳು, ವೇದಿಕೆ ಮೇಲಿದ್ದ ಲವ್ ರೆಡ್ಡಿ ಸಿನಿಮಾದಲ್ಲಿ ನಟಿಸಿರುವ  ಕನ್ನಡ ಕಿರುತೆರೆ ಹಿರಿಯ ನಟ ಎನ್‌.ಟಿ. ರಾಮಸ್ವಾಮಿ ಅವರ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ. 

ಇದನ್ನೂ ಓದಿ:ಕೊರಗಜ್ಜ ಚಿತ್ರ ವೀಕ್ಷಿಸಿ ಫಿದಾ ಆಗಿರುವ ನಿರ್ಮಾಪಕರಿಂದ ನಿರ್ದೇಶಕ ಸುಧೀರ್ ಅತ್ತಾವರ್ ಗೆ ಬಂಪರ್‌ ಗಿಫ್ಟ್!!

ಇದರಿಂದ ಕೆಲಕಾಲ ವೇದಿಕೆಯಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಘಟನೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಮಸ್ ಆಗಲು ಮಹಿಳೆ ಈ ರೀತಿ ವರ್ತಿಸಿದ್ದಾರೆ ಎಂದೂ ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಘಟನೆ ಚಿತ್ರತಂಡ ಶಾಕ್ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News