ಬೆಂಗಳೂರು : ಅದು 2014 ಏಪ್ರಿಲ್ 11 ನೇ ತಾರೀಖು. ಪ್ರೇಮಿಗಳಿಬ್ಬರು ಎಂಜಿ ರೋಡ್ ನಲ್ಲಿ ಡಿನ್ನರ್ ಮುಗಿಸಿ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೇತಾಜಿ ರೋಡ್ ನಲ್ಲಿ ಮಧ್ಯರಾತ್ರಿ 12:30ರ ಸಮಯಲ್ಲಿ ಕಾರಿನಲ್ಲಿ ಕುಳಿತಿದ್ರು. ಈ ವೇಳೆ ಬಂದ ಕಾಮುಕರ ದಂಡು ಅವರನ್ನ ಸುತ್ತುವರಿದು ತಾವು ಕಾರು ಏರಿಕೊಂಡಿದ್ರು. ಶೇಕ್ ಹೈದರ್, ಸೈಯದ್ ಶಫಿಕ್, ಮಹಮ್ಮಸ್ ಹಫೀಜ್, ಶೋಯಬ್ @ ಶೇಖ್ ಕಲ್ವಾನ ಕಾರು ಹುಡುಗ ಹುಡುಗಿ ಕಾರಿ ಹತ್ತಿದ್ರೆ ಮಹಮ್ಮದ್ ಇಸಾಕ್ ಕಾಮುಕರ ಕಾರ್ ನ ಫಾಲೋ ಮಾಡಿದ್ದ.
ರಾತ್ರಿಯಿಡಿ ಸಂತ್ರಸ್ತೆಯಿದ್ದ ಕಾರಿನಲ್ಲೇ ಪುಲಕೇಶಿ ನಗರ ಸುತ್ತಾಡಿದ್ರು. ಕಾರಿನಲ್ಲಿ ಆ ಯುವತಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ರು. ಕೊನೆಗೆ ಕಾಮುಕರ ಗುಂಪಿನ ನಾಯಕ ಶೇಕ್ ಹೈದರ್ ಆಜ್ಞೆಯಂತೆ ಸಂತ್ರಸ್ತೆಯ ಸ್ನೇಹಿತನನ್ನ ಕಾರಿನಿಂದ ಇಳಿಸಿ ಸೈಯದ್ ಶಫಿಕ್, ಹಫಿಜ್, ಶೋಯಬ್ ಆ ಯುವಕನ ಕುತ್ತಿಗೆಗೆ ಚಾಕು ಹಿಡಿದುಕೊಂಡಿದ್ದಾರೆ.
ಇದನ್ನೂ ಓದಿ:ಹಸಿವಿನ ಸೂಚ್ಯಂಕವೂ, ಭಕ್ತಾಸುರನ ಸಮರ್ಥನೆಯೂ
ಇತ್ತ ಯುವತಿ ಜೊತೆಗೆ ಕಾರಿನಲ್ಲಿ ಶೇಕ್ ಹೈದರ್ ನಾನು ಹೇಳಿದ ಹಾಗೆ ಕೇಳದಿದ್ರೆ ನಿನ್ನ ಹುಡುಗನನ್ನ ಕೊಲೆ ಮಾಡೋದಾಗಿ ಹೇಳಿ ಯುವತಿ ಮೇಲೆ ಮೃಘೀಯ ವರ್ತನೆ ತೋರಿದ್ದ. ಇತ್ತ ಆ ಯುವಕ ಕೂಡ ತನ್ನ ಕಣ್ಣಮುಂದೆಯೇ ತನ್ನ ನಂಬಿ ಬಂದ ಪ್ರೇಯಸಿ ಮೇಲೆ ಕಾಮುಕರು ಪಿಶಾಚಿಗಳಂತೆ ಎಗರಿದ್ರು ಅಸಹಾಯಕನಾಗಿದ್ದ. ಯುವತಿ ಮೇಲೆ ಅತ್ಯಾಚಾರವೆಸಗಿ 50 ಸಾವಿರಕ್ಕೆ ಆರೋಪಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ರು.
ಹಣ ನೀಡದಿದ್ದಾಗ ಹುಡುಗನ ಕೈಯಲ್ಲಿದ್ದ ವಾಚ್ ನ ಕಿತ್ತುಕೊಂಡು ಹೋಗಿದ್ರು. ಈ ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಅಂದಿನ ಇನ್ಸ್ಪೆಕ್ಟರ್ ಸರಿಯಾದ ಸೆಕ್ಷನ್ ಹಾಕಿಲ್ಲ ಅಂತಾ ಸಸ್ಪೆಂಡ್ ಕೂಡ ಆಗಿದ್ರು. ಇದಾದ ನಂತರ ಅಂದಿನ ಪುಲಕೇಶಿ ನಗರ ಉಪವಿಭಾಗ ಎಸಿಪಿ ನೂರುಲ್ಲ ಶರೀಫ್ ತನಿಖೆ ನಡೆಸಿ ನ್ಯಾಯಲಯಕ್ಕೆ ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು. ಕಾರಿನಲ್ಲಿ ಸಿಕ್ಕ ಆರೋಪಿಯ ತಲೆಕೂದಲು ಮತ್ತು ವೀರ್ಯದ ಕರುಹುಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿತ್ತು.
ಇದನ್ನೂ ಓದಿ:ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐದು ಸಾವು..?
ಇನ್ನೂ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದ ಆರೋಪಿ ಎಷ್ಟೆ ಪ್ರಯತ್ನಿಸಿದ್ರು ಯಾವುದಕ್ಕೂ ಮಣಿಯದೆ ಪೊಲೀಸ್ರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳ ಪೈಕಿ ಎ1 ಆರೋಪಿ ಶೇಕ್ ಹೈದರ್ ಗೆ 14 ವರ್ಷ ಕಠಿಣ ಶಿಕ್ಷೆ 31 ಸಾವಿರ ದಂಡ, ಎ2 ಸೈಯದ್ ಶಫಿಕ್ 10ವರ್ಷ ಸಜೆ 23 ಸಾವಿರ ದಂಡ,ಎ3 ಮೊಹಮ್ಮದ್ ಹಫೀಜ್ ಗೆ 3.500₹ ದಂಡ, ಎ4 ಶೋಯಬ್ ಗೆ 1 ವರ್ಷ ಸಜೆ ಹಾಗೂ 3.500₹ ದಂಡ, ಎ5 ಮಹಮ್ಮದ್ ಇಸಾಕ್ 6 ತಿಂಗಳ ಸಜೆ ಹಾಗೂ 3000 ದಂಡ ವಿಧಿಸಿ 57ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ