ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮ

ಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.   
 

ಬೆಂಗಳೂರು : ಚಿನ್ನದ ಶುದ್ಧತೆಯ ಬಗ್ಗೆ ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳು ಉದ್ಭವಿಸುತ್ತವೆ. ಚಿನ್ನ ಎಷ್ಟು ಶುದ್ಧವಾಗಿದೆ, ಅದರಲ್ಲಿ ಎಷ್ಟು ಕಲಬೆರಕೆ ಇದೆ. ಇಂತಹ ಪ್ರಶ್ನೆಗಳೆಲ್ಲ  ಸದಾ ಕಾಡುತ್ತಲೇ ಇರುತ್ತದೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಚಿನ್ನದ ಶುದ್ಧತೆಯನ್ನು ಖಾತರಿಪಡಿಸುವ ಹಾಲ್‌ಮಾರ್ಕ್‌ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ಕಾನೂನನ್ನು ಮಾಡಿದೆ. ಈಗ ಈ ಕಾನೂನನ್ನು ಇನ್ನೂ 18 ನಗರಗಳಲ್ಲಿ ಜಾರಿಗೆ ತರಲಾಗಿದೆ. 

2 /8

ಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.  

3 /8

ಕಲಬೆರಕೆ ಚಿನ್ನಾಭರಣ ಮತ್ತು ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಸರ್ಕ್ಜರ ಈ ನಿಯಮ ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ, ಪ್ರತಿ ಆಭರಣದ ಮೇಲೆ ಈ ಮಾರ್ಕ್ ಅನ್ನು ಹಾಕಲಾಗುತ್ತದೆ.   

4 /8

ಈ ಗುರುತುಗಳು ಅಥವಾ ಬಿಐಎಸ್ ಸಂಖ್ಯೆಗಳು ಚಿನ್ನದ ಪರಿಶುದ್ಧತೆಯನ್ನು ಖಾತರಿಪಡಿಸುವುದಲ್ಲದೆ, ಆಭರಣವನ್ನು ಎಲ್ಲಿ ಮತ್ತು ಯಾವಾಗ ತಯಾರಿಸಲಾಗುತ್ತದೆ ಎಂಬುದನ್ನು ಸಹ ತಿಳಿಸುತ್ತದೆ. 

5 /8

ಸರ್ಕಾರವು ದೇಶದ 11 ರಾಜ್ಯಗಳ 18 ನಗರಗಳಲ್ಲಿ ಈ ಚಿನ್ನದ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೆ ತಂದಿದೆ. ಹಂತ ಹಂತವಾಗಿ ಈ ನಿಯಮವನ್ನು ದೇಶಾದ್ಯಂತ ಜಾರಿಗೆ ತರಲು ಸರ್ಕಾರ ಮುಂದಾಗಿದೆ. 

6 /8

ಇದೀಗ 11 ರಾಜ್ಯಗಳ 18 ಜಿಲ್ಲೆಗಳಲ್ಲಿ ಹಾಲ್‌ಮಾರ್ಕ್ ಇಲ್ಲದ ಆಭರಣಗಳ ಮಾರಾಟವನ್ನು ಸರ್ಕಾರ ನಿಷೇಧಿಸಿದೆ.ಜೂನ್ 23, 2021 ರಿಂದ ಸರ್ಕಾರವು ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಅಂದಿನಿಂದ, ಹಾಲ್‌ಮಾರ್ಕಿಂಗ್ ಅನ್ನು ಹಂತಹಂತವಾಗಿ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ.

7 /8

ನಾಲ್ಕನೇ ಹಂತದ ಅಡಿಯಲ್ಲಿ, ಆಂಧ್ರಪ್ರದೇಶ, ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಒಡಿಶಾ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 18 ಜಿಲ್ಲೆಗಳನ್ನು ಸೇರಿಸಲಾಗಿದೆ.    

8 /8

ನಾಲ್ಕನೇ ಹಂತದ ನಂತರ, ಕಡ್ಡಾಯ ಹಾಲ್‌ಮಾರ್ಕಿಂಗ್ ವ್ಯಾಪ್ತಿಗೆ ಒಳಪಡುವ ಒಟ್ಟು ಜಿಲ್ಲೆಗಳ ಸಂಖ್ಯೆ ಈಗ 361ಕ್ಕೆ ತಲುಪಿದೆ. ಗ್ರಾಹಕರು 'ಬಿಐಎಸ್ ಕೇರ್ ಮೊಬೈಲ್ ಅಪ್ಲಿಕೇಶನ್' ಅನ್ನು ಬಳಸಿಕೊಂಡು ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ ದೃಢೀಕರಣವನ್ನು ಪರಿಶೀಲಿಸಬಹುದು.