12 ಅಡಿ ಉದ್ದದ ಕಾಳಿಂಗ ಸರ್ಪವನ್ನ ಹಿಡಿದಿದ್ದೇ ರೋಚಕ; ಎರಡೆರಡು ಬಾರಿ ಕಡಿಯಲು ಮುಂದಾಗಿದ್ದ ದೈತ್ಯ ಸರ್ಪ!!

King Cobra Viral Video: ಈ ವಿಡಿಯೋದಲ್ಲಿ ಕರ್ನಾಟಕದ ಆಗುಂಬೆಯಲ್ಲಿ ವನ್ಯಜೀವಿ ಅಧಿಕಾರಿಗಳ ಸಹಾಯದಿಂದ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.

Written by - Puttaraj K Alur | Last Updated : Nov 29, 2024, 07:34 PM IST
  • ಆಗುಂಬೆಯಲ್ಲಿ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ
  • 12 ಅಡಿ ಉದ್ದದ ಕಾಳಿಂಗ ಸರ್ಪವನ್ನ ಹಿಡಿದಿರುವ ರೋಚಕ ವಿಡಿಯೋ ಸಖತ್‌ ವೈರಲ್‌
  • ಎರಡೆರಡು ಬಾರಿ ಕಡಿಯಲು ಮುಂದಾಗಿದ್ದ ದೈತ್ಯ ಸರ್ಪವನ್ನು ಹಿಡಿದ ಅರಣ್ಯಾಧಿಕಾರಿಗಳು
12 ಅಡಿ ಉದ್ದದ ಕಾಳಿಂಗ ಸರ್ಪವನ್ನ ಹಿಡಿದಿದ್ದೇ ರೋಚಕ; ಎರಡೆರಡು ಬಾರಿ ಕಡಿಯಲು ಮುಂದಾಗಿದ್ದ ದೈತ್ಯ ಸರ್ಪ!! title=
ಬೃಹತ್ ಕಿಂಗ್ ಕೋಬ್ರಾ ರಕ್ಷಣೆ!

12-foot King Cobra Viral Video: ಹಾವು ಹಿಡಿಯುವ ಉರಗ ರಕ್ಷಕರ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಏಕೆಂದರೆ ಅವರು ತುಂಬಾ ರಿಸ್ಕ್‌ ತೆಗೆದುಕೊಂಡು ವಿಷಸರ್ಪಗಳನ್ನು ಹಿಡಿಯುತ್ತಾರೆ. ಹಾವುಗಳನ್ನು ನೋಡಲು ಜನರೇ ಭಯಪಡುವಾಗ ಉರಗ ರಕ್ಷಕರು ಯಾವುದೇ ರೀತಿ ಭಯವಿಲ್ಲದೆ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸುವ ಕೆಲಸ ಮಾಡುತ್ತಾರೆ. ಹಾವು ಹಿಡಿಯುವುದು ತುಂಬಾ ರಿಸ್ಕ್‌, ಸ್ವಲ್ಪ ಹೆಚ್ಚುಕಮ್ಮಿ ಆದ್ರೂ ವಿಷಸರ್ಪಗಳಿಂದ ಕಚ್ಚಿಸಿಕೊಂಡು ಪ್ರಾಣವನ್ನೇ ಬಿಡಬೇಕಾಗುತ್ತದೆ. 

ಇಂತಹ ಪರಿಸ್ಥಿತಿಯಲ್ಲಿ ಉರಗ ರಕ್ಷಕರು ತುಂಬಾ ರಿಸ್ಕಿ ಕೆಲಸ ಮಾಡುತ್ತಾರೆ. ಹಾವುಗಳನ್ನು ರಕ್ಷಿಸಬೇಕು, ಅವುಗಳನ್ನು ಕೊಲ್ಲದೆ ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಅವರು ಜೀವಕ್ಕೆ ಅಪಾಯವಿದ್ದರೂ ಈ ಕೆಲಸ ಮಾಡುತ್ತಾರೆ. ಹಾವು ಹಿಡಿಯುವುದು ಒಂದು ರೀತಿಯ ಕೌಶಲ್ಯ ಅಂತಾನೇ ಹೇಳಬಹುದು. ಏಕೆಂದರೆ ಈ ರಿಸ್ಕಿ ಕೆಲಸಲ್ಲಿ ಕೊಂಚವೂ ಅತ್ತಇತ್ತ ಆಗಬಾರದು. ಪ್ರತಿದಿನ ಹಾವುಗಳನ್ನು ಹಿಡಿಯುವ ಉರಗ ರಕ್ಷಕರ ವಿಡಿಯೋಗಳನ್ನು ನೀವು ನೋಡಿಯೇ ಇರ್ತೀರಾ..! ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: 28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ..

ಈ ವಿಡಿಯೋದಲ್ಲಿ ಕರ್ನಾಟಕದ ಆಗುಂಬೆಯಲ್ಲಿ ವನ್ಯಜೀವಿ ಅಧಿಕಾರಿಗಳ ಸಹಾಯದಿಂದ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ (ARRS) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಅದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ʼದಕ್ಷಿಣ ಕರ್ನಾಟಕದ ಪಶ್ಚಿಮ ಘಟ್ಟದ ​​ಆಗುಂಬೆ ಘಟ್ಟದಲ್ಲಿ ಕಿಂಗ್ ಕೋಬ್ರಾವನ್ನು ರಕ್ಷಿಸಲಾಗಿದೆ ಮತ್ತು ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ ಮಾಡಲಾಗಿದೆ, ಎಂದು ನಂದಾ ಅವರು ಈ ವಿಡಿಯೋಗೆ ಕ್ಯಾಪ್ಶನ್‌ ನೀಡಿದ್ದಾರೆ. ಅಜಯ್ ಗಿರಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಪ್ರಕಾರ, ಸ್ಥಳೀಯ ಗ್ರಾಮಸ್ಥರು ಬಹೃತ್‌ ಕಾಳಿಂಗ ಸರ್ಪವು ಮುಖ್ಯ ರಸ್ತೆಯನ್ನು ದಾಟುತ್ತಿರುವುದನ್ನು ಗಮನಿಸಿದ್ದರು. ನಂತರ ಅದು ಮನೆಯ ಕಾಂಪೌಂಡ್‌ನೊಳಗಿನ ಪೊದೆಯಲ್ಲಿ ಆಶ್ರಯ ಪಡೆದಿದೆ. ಮನೆಯ ಮಾಲೀಕರು ಹಾವನ್ನು ಕಂಡು ಕೂಡಲೇ ಅರಣ್ಯ ಇಲಾಖೆ ಹಾಗೂ ಎಆರ್‌ಆರ್‌ಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭವಾಗಲಿದೆ..! ಸಂಚಲನ ಸೃಷ್ಟಿಸುತ್ತಿದೆ ಬಾಬಾ ವಂಗಾ ಭವಿಷ್ಯವಾಣಿ

ಅಜಯ್ ಗಿರಿ ಅವರು ಕೂಡಲೇ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಅತ್ಯಂತ ಸುರಕ್ಷಿತವಾಗಿ ಹಾವು ಹಿಡಿಯುವ ಬಗ್ಗೆ ತಮ್ಮ ತಂಡಕ್ಕೆ ಅವರು ಸಲಹೆ ನೀಡಿದ್ದರು. ಅದರಂತೆ ಹಾವು ಹಿಡಿಯು ಕಾರ್ಯಾಚರಣೆ ನಡೆಯಿತು. ಈ ವೇಳೆ ಸುತ್ತಮುತ್ತಲ ಜನರು ಸಹ ನೆರೆದಿದ್ದರು. ಕಬ್ಬಿಣದ ರಾಡ್‌ ಬಳಸಿ ಹಾವನ್ನು ಎಚ್ಚರಿಕೆಯಿಂದ ಪೊದೆಯಿಂದ ಕಳಕ್ಕೆ ಇಳಿಸಲಾಯಿತು. ಬಳಿಕ ಅದನ್ನು ಹಿಡಿದು ಸುರಕ್ಷಿತವಾಗಿ ಚೀಲಕ್ಕೆ ಹಾಕಿ ಕಾಡಿಗೆ ಬಿಡಲಾಯಿತು. ಈ ಕಾರ್ಯಾಚರಣೆ ವೇಳೆ ಬೆದರಿದ್ದ ಬೃಹತ್‌ ಕಾಳಿಂಗ ಸರ್ಪವು ಎರಡ್ಮೂರು ಬಾರಿ ಸಿಬ್ಬಂದಿಗೆ ಕಚ್ಚಲು ಪ್ರಯತ್ನಿಸಿತ್ತು. ಆದರೆ ಅದನ್ನು ಯಶಸ್ವಿಯಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News