ಧನುಷ್ ಜೊತೆ ಲವ್‌.. ಮದುವೆಗೂ ಮುನ್ನವೇ ಗರ್ಭಿಣಿಯಾದ ಕನ್ನಡದ ಪ್ರಖ್ಯಾತ ನಟಿ ಈಕೆ!!

Famous Kannada Actress: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಜೀವನವೂ ಅವರ ಪಾತ್ರಗಳಂತೆ ಬಣ್ಣ ಬಣ್ಣವಾಗಿರುವುದಿಲ್ಲ.. ಅದೇ ರೀತಿ ಇಂದು ನಾವು ಮಾತನಾಡುತ್ತಿರುವ ನಟಿಯೊಬ್ಬರ ಜೀವನವೂ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು.. ಹಾಗಾದರೇ ಯಾರು ಆ ನಟಿ..?   

Written by - Savita M B | Last Updated : Nov 29, 2024, 08:32 PM IST
  • ಕೇರಳದಿಂದ ಬಂದು ತಮಿಳು ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದ ಈ ನಟಿ
  • ಮತ್ತೆ ಪ್ರೀತಿಯ ಬಲೆಗೆ ಬಿದ್ದು ಮದುವೆಗೆ ಮುಂಚೆಯೇ ಗರ್ಭಿಣಿಯಾದರು
ಧನುಷ್ ಜೊತೆ ಲವ್‌.. ಮದುವೆಗೂ ಮುನ್ನವೇ ಗರ್ಭಿಣಿಯಾದ ಕನ್ನಡದ ಪ್ರಖ್ಯಾತ ನಟಿ ಈಕೆ!! title=

Amala Paul: ಕೇರಳದಿಂದ ಬಂದು ತಮಿಳು ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದ ಈ ನಟಿಯನ್ನ ನಿರ್ದೇಶಕ ಎ.ಎಲ್. ವಿಜಯ್ ಪ್ರೀತಿಸಿ ಮದುವೆಯಾದ. ಆದರೆ ಅವರಿಬ್ಬರ ನಡುವಿನ ಜಗಳದಿಂದಾಗಿ ವಿಚ್ಛೇದನ ಪಡೆದರು. ಆ ನಂತರ ಆಕೆ ಧನುಷ್ ಜೊತೆ ಅಫೇರ್ ಹೊಂದಿದ್ದಾಳೆ ಎಂದು ಇಂಡಸ್ಟ್ರಿಯಲ್ಲಿ ಚರ್ಚೆಯಾಗಿತ್ತು.. ಆದರೆ ಅದು ಬರೀ ವದಂತಿಯಾಗಿತ್ತು.. ಮುಂದೆ ಆರು ವರ್ಷಗಳ ನಂತರ ನಟಿ ಮತ್ತೆ ಪ್ರೀತಿಯ ಬಲೆಗೆ ಬಿದ್ದು ಮದುವೆಗೆ ಮುಂಚೆಯೇ ಗರ್ಭಿಣಿಯಾದರು. ಮತ್ತು ಬೇಬಿ ಬಂಪ್‌ ಜೊತೆಗೆ ಮದುವೆಯಾದರು.. 

ಆ ನಟಿ ಬೇರಾರೂ ಅಲ್ಲ.. ಸೌತ್‌ ಬ್ಯೂಟಿ ಅಮಲಾ ಪೌಲ್.. ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಸಿನಿಮಾದಿಂದ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು.. ಇವರು ‘ಸಿಂಧು ಸಮವೇಲಿ’ ಚಿತ್ರದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರೂ ಅವರಿಗೆ ಹೆಸರು ತಂದುಕೊಟ್ಟಿದ್ದು ‘ಮೈನಾ’ ಸಿನಿಮಾ. ಆ ಚಿತ್ರದ ನಂತರ ಅವರಿಗೆ ತಮಿಳು ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು.

ಇದನ್ನೂ ಓದಿ-15 ವರ್ಷದಿಂದ ಪ್ರೀತಿ, ಗುಟ್ಟಾಗಿ ನಡೆದ ಖ್ಯಾತ ನಟಿಯ ಮದುವೆ.. ಒಂದು ವರ್ಷದ ಬಳಿಕ ಹೊರಬಂತು ರಿಯಲ್‌ ಮ್ಯಾಟರ್!

ವಿಜಯ್ ಜೊತೆ ‘ತಲೈವ’ ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ಎ.ಎಲ್. ಅಮಲಾ ಪಾಲ್ ಅವರನ್ನು ಪ್ರೀತಿಸುತ್ತಿದ್ದರು. ಅವರಿಬ್ಬರೂ 2014 ರಲ್ಲಿ ವಿವಾಹವಾದರು. ಮದುವೆಯ ನಂತರವೂ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಆದರೆ 2017ರಲ್ಲಿ ವಿಜಯ್ ಜತೆಗಿನ ಕೆಲ ಕಲಹಗಳಿಂದ ವಿಚ್ಛೇದನ ಪಡೆದರು..

ಇದನ್ನೂ ಓದಿ-ವಿಚ್ಚೇದನದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಆರ್. ರೆಹಮಾನ್?! ಫ್ಯಾನ್ಸ್‌ ಶಾಕ್!!‌

ಎ.ಎಲ್. ವಿಜಯ್ ಜೊತೆ ಬ್ರೇಕ್ ಅಪ್ ಆದ ನಂತರ ಅಮಲಾ ಪೌಲ್ ‘ಆಡೈ’ ಚಿತ್ರದಲ್ಲಿ ಬಟ್ಟೆ ಇಲ್ಲದೆ ನಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಆ ನಂತರ ಆಕೆಗೆ ತಮಿಳು ಚಿತ್ರಗಳಲ್ಲಿ ಅವಕಾಶ ಕಡಿಮೆಯಾಯಿತು. ಅವರು 'ಬೋಲಾ', 'ಆಡುಜೀವಿತಂ' ಮತ್ತು 'ಲೆವೆಲ್ ಕ್ರಾಸ್' ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಳೆದ ವರ್ಷ, ಅಮಲಾ ಪೌಲ್ ಜಗತ್ ದೇಸಾಯಿ ಎಂಬ ವ್ಯಕ್ತಿಯೊಂದಿಗೆ ಎರಡನೇ ಬಾರಿಗೆ ವಿವಾಹವಾದರು. ಮದುವೆಯಾದ 8 ತಿಂಗಳ ನಂತರ ಒಬ್ಬ ಮಗ ಜನಿಸಿದನು. ಆದರೆ ಮದುವೆಗೂ ಮುನ್ನವೇ ನಟಿ ಗರ್ಭಿಣಿಯಾಗಿರುವುದು ಎಲ್ಲರಿಗೂ ಗೊತ್ತಾಗಿತ್ತು. ಕಳೆದ ಜೂನ್ ನಲ್ಲಿ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನ ಜನನದ ನಂತರ ಸಿನಿಮಾದಿಂದ ದೂರ ಉಳಿದಿರುವ ಅಮಲಾ ಪೌಲ್ ಸದ್ಯ ಮಗನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News