Lockdown 3.0:ಷರತ್ತುಗಳ ಆಧಾರದ ಮೇಲೆ ಎಲ್ಲಾ ಜೋನ್ ಗಳಲ್ಲಿ ಸಾರಾಯಿ, ಪಾನ್, ಬೀಡಿ ಶಾಪ್ ತೆರೆಯಲು ಅನುಮತಿ

ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸುವ ಕುರಿತು ಘೋಷಣೆ ಮಾಡಿದೆ.

Last Updated : May 1, 2020, 08:42 PM IST
Lockdown 3.0:ಷರತ್ತುಗಳ ಆಧಾರದ ಮೇಲೆ ಎಲ್ಲಾ ಜೋನ್ ಗಳಲ್ಲಿ ಸಾರಾಯಿ, ಪಾನ್, ಬೀಡಿ ಶಾಪ್ ತೆರೆಯಲು ಅನುಮತಿ title=

ನವದೆಹಲಿ: ಕೇಂದ್ರ ಸರ್ಕಾರ ಮತ್ತೊಮ್ಮೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸುವ ನಿರ್ಣಯ ಕೈಗೊಂಡಿದೆ. ಇದರ ಅಡಿ ಮೇ 17ರವರೆಗೆ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ. ಆದೆ, ಈ ಬಾರಿ ಜೋನ್ ಗಳ ಆಧಾರದ ಮೇಲೆ ಹಲವು ಸಡಿಲಿಕೆಗಳನ್ನು ನೀಡಲು ಸರ್ಕಾರ ಅನುಮತಿ ನೀಡಿದೆ. ಅಂದರೆ, ಮೇ 4 ರಿಂದ ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಯಾದರೂ ಕೂಡ ಮದ್ಯ, ಪಾನ್-ಮಸಾಲಾ ಅಂಗಡಿಗಳಿಗೆ ತೆರೆಯಲು ಅನುಮತಿ ನೀಡಿದೆ ಕೇವಲ ಕಂಟೆನ್ಮೆಂಟ್ ಪ್ರದೇಶಗಳಲ್ಲಿ ಮಾತ್ರ ಮದ್ಯ ಮಾರಾಟದ ಮೇಲೆ ನಿಷೇಧ ಇರಲಿದೆ. ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಸೇವನೆ, ಪಾನ್, ಗುಟಕಾ, ತಂಬಾಕು ಇತ್ಯಾದಿ ಸೇವನೆಗಳ ಮೇಲೆ ನಿಷೇಧ ವಿಧಿಸಲಾಗಿದೆ. ಆದರೆ, ನಿರ್ಧಾರಿತ 6 ಅಡಿ ಅಂತರ ಕಾಯ್ದುಕೊಳ್ಳುವಿಕೆಯನ್ನು ಸುನಿಶ್ಚಿತಗೊಳಿಸಿದ ಬಳಿಕವಷ್ಟೇ ಮದ್ಯ, ಪಾನ್, ತಂಬಾಕು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಜೊತೆಗೆ ಅಂಗಡಿಲ್ಲಿ ಏಕಕಾಲಕ್ಕೆ ಐದರಿಂದ ಅಧಿಕ ಜನರು ಇರಬಾರದು ಎಂದೂ ಕೂಡ ಸೂಚಿಸಲಾಗಿದೆ.

Trending News