ನಟ ಅಲ್ಲು ಅರ್ಜುನ್‌ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?

Allu Arjun Arrest : ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್‌ ಬಂಧನದ ಕೂಗು ಕೇಳಿ ಬಂದಿದೆ..

1 /6

ಯಾವುದೇ ಹೀರೋ ತಮ್ಮ ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಜೊತೆ ನೇರವಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡುವುದು ಸಾಮಾನ್ಯ. ಇದರಲ್ಲಿ ಯಾವುದೇ ತಪ್ಪೇನಿಲ್ಲ, ಆದರೆ ಅಭಿಮಾನಿಗಳ ಸುರಕ್ಷತೆ ಬಹಳ ಮುಖ್ಯ ಅಂತಲೇ ಹೇಳಬೇಕು. ಅದರಲ್ಲೂ ಪ್ಯಾನ್‌ ಇಂಡಿಯಾ ಹೀರೋಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಭಿಮಾನಿಗಳೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.   

2 /6

ಹೌದು.. ತಮ್ಮ ನೆಚ್ಚಿನ ನಾಯಕ ಥಿಯೇಟರ್ ಗೆ ಬರುತ್ತಿದ್ದರೆ ಅಭಿಮಾನಿಗಳೂ ಅವರನ್ನು ನೋಡಲು ಮುಗಿಬೀಳುತ್ತಾರೆ. ಈ ಅನುಕ್ರಮದಲ್ಲಿ ಪುಷ್ಪ-2 ದೇಶಾದ್ಯಂತ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರವಾಗಿದೆ. ಭಾರೀ ನಿರೀಕ್ಷೆಗಳ ನಡುವೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಿ ಹಿಟ್ ಟಾಕ್‌ನೊಂದಿಗೆ ಓಡುತ್ತಿದೆ.   

3 /6

ಇದೇ ವೇಳೆ ಪುಷ್ಪಾ 2 ಶೋಗಳು ರಾತ್ರಿಯಿಂದಲೇ ಆರಂಭವಾಗಿದ್ದು, ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಕೂಡ ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ಗೆ ಸಿನಿಮಾ ನೋಡಲು ತೆರಳಿದ್ದರು.  

4 /6

ಈ ವೇಳೆ ಭಾರಿ ನೂಕುನುಗ್ಗಲು ಉಂಟಾಗಿತ್ತು. ಘಟನೆಯಲ್ಲಿ ಕಾಲ್ತುಳಿತ ಉಂಟಾಗಿ 39 ವರ್ಷದ ರೇವತಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಾಂಗ್ರೆಸ್‌ ನಾಯಕ ಬಕ್ಕಾ ಜಡ್ಸನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.   

5 /6

ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಯುವತಿ ಸಾವನ್ನಪ್ಪಿದ್ದಾಳೆ. ಅಲ್ಲು ಅರ್ಜುನ್, ಪೊಲೀಸರು ಮತ್ತು ನಿರ್ಮಾಪಕರು ಇದಕ್ಕೆ ಹೊಣೆಗಾರರಾಗಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲು ಅರ್ಜುನ್ ರಾತ್ರಿ ಬರುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಅವರು, ನಟನನ್ನು ಬಂಧಿಸಿ ಮೃತನ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.   

6 /6

ಇನ್ನು ಇದಕ್ಕೆ ಅಲ್ಲು ಅರ್ಜುನ್ ಚಿತ್ರತಂಡ ಪ್ರತಿಕ್ರಿಯಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇಂದು ತೆರೆಕಂಡು ಪುಷ್ಪಾ 2 ಸುಕುಮಾರ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹದ್‌ ಫಾಸಿಲ್‌, ಸುನೀಲ್‌, ಡಾಲಿ ಧನಂಜಯ ಸೇರಿದಂತೆ ಹಲವು ಸ್ಟಾರ್‌ ನಟರಿದ್ದಾರೆ..