Abhishek Bachchan On Having Second Child: ಬಿ ಟೌನ್ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ. ಆದರೆ, ಈ ಸುದ್ದಿಗಳ ಬಗ್ಗೆ ಇಬ್ಬರೂ ಇನ್ನೂ ಮೌನ ಮುರಿದಿಲ್ಲ. ಈ ಬೆನ್ನಲ್ಲೇ ಈ ಜೋಡಿ ಒಟ್ಟಿಗೆ ಇರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಿ ಟೌನ್ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ. ಆದರೆ, ಈ ಸುದ್ದಿಗಳ ಬಗ್ಗೆ ಇಬ್ಬರೂ ಇನ್ನೂ ಮೌನ ಮುರಿದಿಲ್ಲ. ಈ ಬೆನ್ನಲ್ಲೇ ಈ ಜೋಡಿ ಒಟ್ಟಿಗೆ ಇರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇವೆಲ್ಲದರ ಮಧ್ಯೆ ಅಭಿಷೇಕ್ ಬಚ್ಚನ್, ನಟ ರಿತೇಶ್ ದೇಶಮುಖ್ ಅವರ 'Case Toh Banta Hai' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕೆಲವೊಂದು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಜೊತೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಎರಡನೇ ಬಾರಿಗೆ ಪೋಷಕರಾಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2007 ರಲ್ಲಿ ವಿವಾಹವಾದರು. 4 ವರ್ಷಗಳ ನಂತರ, ಇಬ್ಬರೂ ಮಗಳು ಆರಾಧ್ಯ ಬಚ್ಚನ್ ಅವರಿಗೆ ಪೋಷಕರಾದರು. ಈಗ ಆರಾಧ್ಯಾಗೆ 13 ವರ್ಷ.
'Case Toh Banta Hai' ಕಾರ್ಯಕ್ರಮದಲ್ಲಿ ಅಭಿಷೇಕ್ಗೆ ‘ಅಮಿತಾಭ್, ಐಶ್ವರ್ಯ, ಆರಾಧ್ಯ ಮತ್ತು ನೀವು ಅಭಿಷೇಕ್, ಎಲ್ಲರ ಹೆಸರು ಕೂಡ ‘ಎ’ ಯಿಂದ ಪ್ರಾರಂಭವಾಗುತ್ತದೆ. ಹಾಗಾದರೆ ಜಯಾ ಆಂಟಿ ಮತ್ತು ಶ್ವೇತಾ ಏನು ಮಾಡಿದ್ರು?" ಎಂದು ತಮಾಷೆಯಾಗಿ ರಿತೇಶ್ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ಜೋರಾಗಿ ನಗುತ್ತಾ, "ಈ ಬಗ್ಗೆ ಅವರನ್ನೇ ಕೇಳಬೇಕು. ಇದು ಬಹುಶಃ ನಮ್ಮ ಕುಟುಂಬದಲ್ಲಿ ಸಂಪ್ರದಾಯವಾಗಿದೆ. ಅಭಿಷೇಕ್, ಆರಾಧ್ಯ.." ಎನ್ನುತ್ತಿದ್ದಂತೆ ರಿತೇಶ್ ಅಡ್ಡಿಪಡಿಸಿ, "ಆರಾಧ್ಯ ನಂತರ?" ಎಂದು ಕೇಳಿದರು. ಅದಕ್ಕೆ ಅಭಿಷೇಕ್, "ಮುಂದಿನ ಪೀಳಿಗೆ ಬಂದಾಗ ನೋಡೋಣ" ಎಂದು ನಗುತ್ತಲೇ ಹೇಳಿದ್ದಾರೆ
ರಿತೇಶ್ ತಕ್ಷಣವೇ ಮರುಪ್ರಶ್ನೆ ಹಾಕಿ, "ಯಾರು ಇಷ್ಟು ದಿನ ಕಾಯುತ್ತಾರೆ? ಈಗ ನಮ್ಮನ್ನೇ ನೋಡಿ, ರಿತೇಶ್, ರಿಯಾನ್, ರಾಹಿಲ್ (ರಿತೇಶ್ ಅವರ ಇಬ್ಬರು ಮಕ್ಕಳು) ಹೀಗೆ... ಅಭಿಷೇಕ್, ಆರಾಧ್ಯ" ಎನ್ನುತ್ತಾರೆ. ಇದಕ್ಕೆ ನಾಚಿಕೆಪಟ್ಟ ಅಭಿಷೇಕ್, "ದಯವಿಟ್ಟು ನನ್ನ ವಯಸ್ಸನ್ನು ಪರಿಗಣಿಸಿ ರಿತೇಶ್. ನಾನು ನಿನಗಿಂತ ದೊಡ್ಡವನು" ಎಂದು ಹೇಳುತ್ತಾರೆ. ಇದಾದ ನಂತರ ರಿತೇಶ್, ಅಭಿಷೇಕ್ ಅವರ ಪಾದಗಳನ್ನು ಮುಟ್ಟಿ ಈ ಸಂಭಾಷಣೆಯನ್ನು ಇಲ್ಲಿಗೇ ಕೊನೆಗೊಳಿಸುತ್ತಾರೆ. ವಿಡಿಯೋ ಲಿಂಕ್:
ಇತ್ತೀಚೆಗೆ, ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನದ ವದಂತಿಗೆ ಫುಲ್ಸ್ಟಾಪ್ ಬಿದ್ದಿದೆ. ಈ ಜೋಡಿ ಆಪ್ತರ ಮದುವೆಯ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲರಿಗೂ ಪರೋಕ್ಷವಾಗಿ ಉತ್ತರ ನೀಡಿದ್ದರು.