Bigg Boss Gold Suresh: ಬಿಗ್‌ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಏಕಾಏಕಿ ಹೊರಹೋಗಿದ್ದು, ಬಹು ಚರ್ಚೆಗೆ ಕಾರಣವಾಗಿದೆ.. ಅವರ ತಂದೆಯ ಅನಾರೋಗ್ಯ ಎಂದು ಕೆಲವು ವದಂತಿಗಳು ಹರಿದಾಡಿದ್ದವು.. ಆದರೆ ಸ್ವತಃ ಗೋಲ್ಡ್ ಸುರೇಶ್ ಅವರ ತಂದೆ ತಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.. ಹಾಗಾದರೆ ಗೋಲ್ಡ್ ಸುರೇಶ್ ದಿಢೀರ್ ನಿರ್ಗಮನಕ್ಕೆ ಕಾರಣವೇನು?..
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಲಿಮಿನೇಷನ್ ನಡೆದು ಹೋದವು.. ಶಿಶಿರ್ ಅವರು ಕಳೆದ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.. ಆದರೆ ಇದರ ಬೆನ್ನಲ್ಲೇ ನಾಮಿನೇಟ್ ಕೂಡಾ ಆಗಿರದ ಗೋಲ್ಡ್ ಸುರೇಶ್ ಕೂಡ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ..
ಹೌದು ಬಿಗ್‌ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಇದೆ.. ಅವರ ಅವಶ್ಯಕತೆ ಕುಟುಂಬಕ್ಕಿದೆ ಎಂದು ಘೋಷಣೆ ಮಾಡಲಾಯಿತು.. ಇದರ ಬಳಿಕ ತಡಮಾಡದೇ ಗೋಲ್ಡ್ ಸುರೇಶ್ ಮನೆಯಿಂದ ನಿರ್ಗಮಿಸಿದರು.. ಇದೀಗ ಅವರು ಹೊರಬಂದಿದ್ದೇಕೆ ಎನ್ನುವ ಚರ್ಚೆಗಳು ಶುರುವಾಗಿವೆ..
ಗೋಲ್ಡ್ ಸುರೇಶ್ ಮನೆಯಿಂದ ಏಕಾಏಕಿ ಹೊರಬಂದಿದ್ದು ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.. ಮೊದಲಿಗೆ ಗೋಲ್ಡ್ ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು.. ಆದರೆ ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.. ಜೊತೆಗೆ ಅವರ ಕುಟುಂಬದಲ್ಲಿಯೂ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಇದೀಗ ಬಿಗ್‌ಬಾಸ್ ಮನೆಯಲ್ಲಿಯೂ ಅವರು ಹೊರಹೋಗಿದ್ದರ ಚರ್ಚೆ ಶುರುವಾಗಿದ್ದು, "ಬಹುಶಃ ಗೋಲ್ಡ್ ಸುರೇಶ್ ಅವರ ಬಿಜಿನೆಸ್‌ನಲ್ಲಿ ಏನೋ ತೊಂದರೆ ಆಗರಬಹುದು.. ಒಂದು ವೇಳೆ ಕುಟುಂಬದಲ್ಲಿ ತೊಂದರೆಯಾಗಿದ್ದರೆ ಹೆದರುವ ಅಗತ್ಯವಿಲ್ಲ ಎಂದು ಬಿಗ್‌ಬಾಸ್ ಹೇಳುತ್ತಿರಲಿಲ್ಲ.. ಅವರ ಉದ್ಯಮದಲ್ಲಿಯೇ ಏನೋ ಸಮಸ್ಯೆಯಾಗಿದೆ.. ಅವರು ಏನನ್ನೂ ಹೇಳಿಕೊಳ್ಳುವುದಿಲ್ಲ.. ಇತ್ತೀಚೆಗೆ ಯಾಯೋ ತುಂಬಾ ಸೈಲೆಂಟ್ ಆಗಿದ್ದರು" ಎಂದು ಸ್ಪರ್ಧಿ ಐಶ್ವರ್ಯ ಹೇಳಿದ್ದಾರೆ.. ಜೊತೆಗೆ ಈ ವಿಚಾರವೇ ನಿಜವಾಗಿರಬಹುದು ಎಂದು ಎಲ್ಲರ ಅಭಿಪ್ರಾಯ..
ಇಷ್ಟೇ ಅಲ್ಲ.. ಗೋಲ್ಡ್ ಸುರೇಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.. ಆದರೆ ನಿಜಕ್ಕೂ ಆಗಿದ್ದೇನು? ಅವರ ದಿಢೀರ್ ನಿರ್ಗಮನಕ್ಕೆ ಕಾರಣವೇನು? ಎಂಬುದನ್ನು ಗೋಲ್ಡ್ ಸುರೇಶ್ ಅವರೇ ಬಹಿರಂಗಪಡಿಸಬೇಕಿದೆ..