'ನಾನು 12 ವರ್ಷಗಳಿಂದ....' ಡ್ರಗ್‌ ದೊರೆ ಜೊತೆಗಿನ ಮದುವೆ ಕುರಿತು ಮೌನ ಮುರಿದ ಸ್ಟಾರ್‌ ನಟಿ!

ಸಿನಿ ಕರಿಯರ್‌ನ ಉತ್ತುಂಗದಲ್ಲಿದ್ದಾಗ ಮಮತಾ ಕುಲಕರ್ಣಿ ಅವರ ಹೆಸರು ವಿಕ್ಕಿ ಗೋಸ್ವಾಮಿ ಜೊತೆ ತಳಕು ಹಾಖಿಕೊಂಡಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.   

Written by - Chetana Devarmani | Last Updated : Dec 19, 2024, 10:59 AM IST
  • ಡ್ರಗ್‌ ದೊರೆ ಜೊತೆಗಿನ ಮದುವೆ
  • 'ನಾನು 12 ವರ್ಷಗಳಿಂದ....'
  • ಮದುವೆ ಕುರಿತು ಮೌನ ಮುರಿದ ಸ್ಟಾರ್‌ ನಟಿ!
'ನಾನು 12 ವರ್ಷಗಳಿಂದ....' ಡ್ರಗ್‌ ದೊರೆ ಜೊತೆಗಿನ ಮದುವೆ ಕುರಿತು ಮೌನ ಮುರಿದ ಸ್ಟಾರ್‌ ನಟಿ!   title=
Mamta Kulkarni

ಮಮತಾ ಕುಲಕರ್ಣಿ 1990 ರ ದಶಕದ ಅತ್ಯಂತ ಯಶಸ್ವಿ ಮತ್ತು ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಕರಣ್ ಅರ್ಜುನ್, ಚೈನಾ ಗೇಟ್ ಹೀಗೆ ಅನೇಕ ಚಿತ್ರಗಳ ಭಾಗವಾಗಿದ್ದರು. ಸಿನಿ ಕರಿಯರ್‌ನ ಉತ್ತುಂಗದಲ್ಲಿದ್ದಾಗ ಮಮತಾ ಕುಲಕರ್ಣಿ ಅವರ ಹೆಸರು ವಿಕ್ಕಿ ಗೋಸ್ವಾಮಿ ಜೊತೆ ತಳಕು ಹಾಖಿಕೊಂಡಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. 

ಅಂದಿನಿಂದ ಮಮತಾ ಕುಲಕರ್ಣಿ ತನ್ನ ತಾಯ್ನಾಡಿನಿಂದ ದೂರವಾಗಿದ್ದರು. ಇತ್ತೀಚಿನ ವೀಡಿಯೊದಲ್ಲಿ, 24 ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ನಟಿ ತನ್ನ ಇತ್ತೀಚಿನ ಸಂದರ್ಶನಗಳಲ್ಲಿ ತನ್ನ ಜೀವನ, ಡ್ರಗ್ ಲಾರ್ಡ್ ವಿಕ್ಕಿ ಗೋಸ್ವಾಮಿಯೊಂದಿಗಿನ ಮದುವೆ ಕುರಿತು ಮಾತನಾಡುತ್ತಿದ್ದಾರೆ.  

ಐಎಎನ್‌ಎಸ್‌ನ ಮನರಂಜನಾ ಸುದ್ದಿ ವಿಭಾಗಕ್ಕೆ ನೀಡಿದ ಸಂದರ್ಶನದಲ್ಲಿ ಮಮತಾ ಕುಲಕರ್ಣಿ ಅವರು ವಿಕ್ಕಿ ಗೋಸ್ವಾಮಿ ಅವರನ್ನು ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು 1996 ರಲ್ಲಿ ಭೇಟಿಯಾದರು ಮತ್ತು ಒಂದು ವರ್ಷದಲ್ಲಿ ವಿಕ್ಕಿ ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲ್ಪಟ್ಟರು ಎಂದು ತಿಳಿಸಿದ್ದಾರೆ. ಅವರು 12 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರು ಜೈಲಿನಲ್ಲಿದ್ದಾಗ, ಮಮತಾ ಕುಲಕರ್ಣಿ ಆಧ್ಯಾತ್ಮಿಕತೆಯತ್ತ ಗಮನಹರಿಸಿದರು. 2012 ರಲ್ಲಿ ಕುಂಭಮೇಳಕ್ಕೆ ಹೋಗಿದ್ದೆ ಎಂದು ನೆನಪಿಸಿಕೊಂಡರು. 

ಇದನ್ನೂ ಓದಿ: ದುಡ್ಡಿದ್ರೆ ದುನಿಯಾನೆ ಆಳಬೋದು ಗುರು! 31 ವರ್ಷದ ಹಾಟ್ ನಟಿಯನ್ನ ಪಾಟಾಯಿಸಿದ 70 ವರ್ಷದ ಸ್ಟಾರ್ ನಟ?

"ಇದೆಲ್ಲ ಸುಳ್ಳು, ನಾನು ವಿಕ್ಕಿಯನ್ನು ಮದುವೆಯಾಗಿಲ್ಲ. ನಾನು 12 ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದೆ. ಈ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನುತ್ತಿರಲಿಲ್ಲ. ಹೌದು, ನಾನು ವಿಕ್ಕಿ ಗೋಸ್ವಾಮಿಯೊಂದಿಗೆ ಇದ್ದೆ. ಯಾವಾಗಲೂ ಅವನನ್ನು ಪ್ರೀತಿಸುತ್ತೇನೆ. ಆದರೆ ಎಲ್ಲವೂ ಕೊನೆಗೊಂಡಿತು. ಈಗ ಆಧ್ಯಾತ್ಮಿಕತೆ ಒಂದೇ ಉಳಿದಿದೆ"  ಎಂದಿದ್ದಾರೆ. 

ಮಮತಾ ಕುಲಕರ್ಣಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಸಹ ಪ್ರತಿಕ್ರಿಯಿಸಿದ್ದು, ತನ್ನ ವಿರುದ್ಧ ಪ್ರಕರಣ ದಾಖಲಿಸಿದ ಆ ಕಮಿಷನರ್ ಎಲ್ಲಿದ್ದಾರೆ? ಪೊಲೀಸರ ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದರು.
 
ಸಂದರ್ಶನವೊಂದರಲ್ಲಿ ನಟಿ ಮಮತಾ ಕುಲಕರ್ಣಿ ಅವರಿಗೆ ಶೀಘ್ರದಲ್ಲೇ ಬಾಲಿವುಡ್‌ಗೆ ಮರಳುತ್ತೀರಾ ಎಂದು ಕೇಳಲಾಯಿತು. ಈ ವೇಳೆ ಆಕೆ ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಡುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ ದೊಡ್ಮನೆ ಹಿರಿಮಗ ಶಿವರಾಜ್‌ ಕುಮಾರ್‌ ಮತ್ತು ಹಿರಿಸೊಸೆ ಗೀತಾ... ಇವರ ಹೆಸರಲ್ಲಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News