ಈ ಬಿಳಿ ವಸ್ತುವನ್ನು ನೀರಿಗೆ ಬೆರೆಸಿ ತುಳಸಿಗೆ ಅರ್ಪಿಸಿದ ಮರು ಕ್ಷಣದಿಂದಲೇ ಒಲಿಯುವಳು ಧನ ಲಕ್ಷ್ಮೀ !ಬೆಟ್ಟದಷ್ಟಿದ್ದ ಸಾಲ ಕೂಡಾ ಮಂಜಿನಂತೆ ಕರಗಿ ಹೋಗುವುದು

ವೈದಿಕ ಗ್ರಂಥಗಳ ಪ್ರಕಾರ, ತುಳಸಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ ಎನ್ನುವ ನಂಬಿಕೆಯಿದೆ. ಆದ್ದರಿಂದ ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು.

Written by - Ranjitha R K | Last Updated : Dec 19, 2024, 05:44 PM IST
  • ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕು
  • ತುಳಸಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ ಎನ್ನುವ ನಂಬಿಕೆಯಿದೆ.
  • ಶ್ರೀಮಂತರಾಗಲು ಇರುವುದು ಒಂದೇ ಮಾರ್ಗ
ಈ ಬಿಳಿ ವಸ್ತುವನ್ನು ನೀರಿಗೆ ಬೆರೆಸಿ ತುಳಸಿಗೆ ಅರ್ಪಿಸಿದ ಮರು ಕ್ಷಣದಿಂದಲೇ ಒಲಿಯುವಳು ಧನ ಲಕ್ಷ್ಮೀ !ಬೆಟ್ಟದಷ್ಟಿದ್ದ ಸಾಲ ಕೂಡಾ ಮಂಜಿನಂತೆ ಕರಗಿ ಹೋಗುವುದು  title=

ಬೆಂಗಳೂರು : ಪ್ರತಿಯೊಬ್ಬರೂ ತಮ್ಮ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕು ಎಂದೇ  ಬಯಸುತ್ತಾರೆ. ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬಾರದು. ಅದೃಷ್ಟ ನಮ್ಮೊಂದಿಗೆ ಇರಬೇಕು ಎಂದು ಬಯಸುವವರೇ ಹೆಚ್ಚು. ಆದರೆ, ಅದೃಷ್ಟ ಎನ್ನುವುದು ಎಲ್ಲರ ಬೆನ್ನಿಗೆ ಇರುವುದಿಲ್ಲ. ಅನೇಕ ಜನರು ದಿನವಿಡೀ ದುಡಿದರೂ,   ಕೈಯ್ಯಲ್ಲಿ ದುಡ್ಡು ಉಳಿಯುವುದೇ ಇಲ್ಲ. ಹೀಗಾದಾಗ ತುಳಸಿಗೆ ಸಂಬಂಧಪಟ್ಟ ಈ ಸಣ್ಣ ಕೆಲಸ ಪರಿಹಾರವನ್ನು ಮಾಡಬಹುದು. ಈ ತುಳಸಿ ಪರಿಹಾರವನ್ನು ಅನುಸರಿಸುವ  ಮೂಲಕ ಸಿರಿವಂತಿಕೆ ಹರಿದು ಬರುವಂತೆ ಮಾಡಬಹುದು.

ವೈದಿಕ ಗ್ರಂಥಗಳ ಪ್ರಕಾರ, ತುಳಸಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ ಎನ್ನುವ ನಂಬಿಕೆಯಿದೆ. ಆದ್ದರಿಂದ ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು. ಬೆಳಿಗ್ಗೆ ತುಳಸಿ ನೀರನ್ನು ಅರ್ಪಿಸಿ ಮತ್ತು ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಬೆಳಗಿಸಬೇಕು. ಈ ನಿಯಮದ ಪ್ರಕಾರ ತುಳಸಿಯನ್ನು ಪೂಜಿಸುವ ಮನೆಯಲ್ಲಿ ಆರ್ಥಿಕ ಕೊರತೆ ಇರುವುದಿಲ್ಲ. 

ಇದನ್ನೂ ಓದಿ : ಈ ರಾಶಿಯವರಿಗೆ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಕುಚೇಲ ಕೂಡಾ ಕುಬೇರನಾಗುವ ಕಾಲ ! ಬೆನ್ನ ಹಿಂದೆಯೇ ಇರುವಳು ಮಹಾ ಲಕ್ಷ್ಮೀ

ಶ್ರೀಮಂತರಾಗಲು ಇರುವುದು ಒಂದೇ ಮಾರ್ಗ :  
 ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ತುಳಸಿ ಪೂಜೆ ಮಾಡುವಾಗ ವಿಶೇಷ ಪರಿಹಾರ ಕಾರ್ಯವನ್ನು ಮಾಡಬೇಕು. ಲಕ್ಷ್ಮೀಗೆ ಬಿಳಿ ವಸ್ತುಗಳೆಂದರೆ ಅಚ್ಚುಮೆಚ್ಚು. ಬೆಳಿಗ್ಗೆ ತುಳಸಿಗೆ ನೀರನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ಹಸಿ ಹಾಲನ್ನು ಬೆರೆಸಬೇಕು.  ಹಸಿ ಹಾಲನ್ನು ಬೆರೆಸಿದ ನೀರನ್ನು ತುಳಸಿಗೆ ಅರ್ಪಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಮನಸ್ಸಿನ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. 

ಮನೆಯಲ್ಲಿ ಆರ್ಥಿಕ ತೊಂದರೆ ಇರುವವರು ಗುರುವಾರದಂದು ನೀರಿಗೆ ಹಾಲು ಸೇರಿಸಿ ತುಳಸಿಗೆ ಅರ್ಪಿಸಿದರೆ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಂಡು  ಲಕ್ಷ್ಮೀ ನಾರಾಯಣರಿಬ್ಬರ ಆಶೀರ್ವಾದವೂ ಸಿಗುವುದು. 
 
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE Kannada News ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News