ಬಿರಿಯಾನಿ ಮಾಡೋಕೆ ಕಾಗೆಗಳನ್ನ ಕೊಲ್ಲುತ್ತಿದ್ದ ದಂಪತಿ..! ಈ ಹೊಟೇಲ್‌ನಲ್ಲಿ ನೀವು ಕಾಗೆ ಮಾಂಸ ತಿಂದಿರಬಹುದು.. ನೋಡಿ..

Crow Biryani : ವೆಜ್ ಬಿರಿಯಾನಿ ಮಾತ್ರವಲ್ಲದೆ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ, ಪ್ರಾನ್ಸ್‌ ಬಿರಿಯಾನಿ ಹೀಗೆ ಬಗೆಬಗೆಯ ಬಿರಿಯಾನಿಗಳು ಮಾಂಸಾಹಾರಿಗಳಿಗೆ ತುಂಬಾ ಇಷ್ಟ. ಆದರೆ ಈ ದಂಪತಿಗೆ ವಿಚಿತ್ರ ಎಂಬಂತೆ ಕಾಗೆ ಬಿರಿಯಾನಿ ತಿನ್ನುವ ಆಸೆಯಾಗಿದೆ.. ಅದಕ್ಕಾಗಿ ಇವರು ಮಾಡಿದ ಕೆಲಸ ಮಾತ್ರ ಅಚ್ಚರಿ ಮೂಡಿಸಿದೆ..

Written by - Krishna N K | Last Updated : Dec 19, 2024, 05:54 PM IST
    • ಬಗೆಬಗೆಯ ಬಿರಿಯಾನಿಗಳು ಮಾಂಸಾಹಾರಿಗಳಿಗೆ ತುಂಬಾ ಇಷ್ಟ.
    • ಈ ದಂಪತಿಗೆ ವಿಚಿತ್ರ ಎಂಬಂತೆ ಕಾಗೆ ಬಿರಿಯಾನಿ ತಿನ್ನುವ ಆಸೆ
    • ಕಾಗೆಗಳನ್ನು ಕೊಂದು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ದಂಪತಿ
ಬಿರಿಯಾನಿ ಮಾಡೋಕೆ ಕಾಗೆಗಳನ್ನ ಕೊಲ್ಲುತ್ತಿದ್ದ ದಂಪತಿ..! ಈ ಹೊಟೇಲ್‌ನಲ್ಲಿ ನೀವು ಕಾಗೆ ಮಾಂಸ ತಿಂದಿರಬಹುದು.. ನೋಡಿ.. title=

Crow killed for Biryani : ತಮಿಳುನಾಡಿನ ತಿರುವಳ್ಳೂರಿನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಿರುವಳ್ಳೂರಿನ ಹಳ್ಳಿಯೊಂದರಲ್ಲಿ ಕಾಗೆಗಳನ್ನು ಕೊಂದು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ದಂಡವನ್ನೂ ವಿಧಿಸಿದೆ. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ರಮೇಶ್ ದಂಪತಿಯ ಮನೆಯಲ್ಲಿ ಶೋಧ ನಡೆಸಿದ್ದಾರೆ. ಮನೆಯಲ್ಲಿದ್ದ 19 ಕಾಗೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಈಕೆ ಸ್ಟಾರ್‌ ಕ್ರಿಕೆಟರ್‌ ಪತ್ನಿ, ಸ್ಟೇಡಿಯಂನಲ್ಲಿ ಪತಿ ಅರ್ಭಟಿಸಿದ್ರೆ ಈಕೆ ಇಂಟರ್‌ನೆಟ್‌ ಸೆನ್ಸೆಷನ್‌..! ಯಾರ್‌ ಗೊತ್ತೆ..?

ಅರಣ್ಯಾಧಿಕಾರಿಗಳು ದಂಪತಿಯನ್ನು ವಿಚಾರಿಸಿದಾಗ, ರಮೇಶ್‌ಗೆ 4 ಹೆಣ್ಣು ಮಕ್ಕಳು ಮತ್ತು 1 ಗಂಡು ಇದೆ.. ಊಟಕ್ಕಾಗಿ ಕಾಗೆಗಳನ್ನು ಹಿಡಿದ್ದರಂತೆ. ಆದರೆ, ರಸ್ತೆ ಬದಿಯ ಮತ್ತು ಹೆದ್ದಾರಿಗಳಲ್ಲಿನ ಸಣ್ಣ ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಈ ಮಾಂಸವನ್ನು ಪೂರೈಸಲು ಈ ಕಾಗೆಗಳನ್ನು ಹಿಡಿಯಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.

ಮಾಂಸಕ್ಕಾಗಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಕಾಗಿ ಮಾಂಸ ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ದಂಪತಿ. ಈಗಾಗಲೇ ಕಾಗೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. 

ಇದನ್ನೂ ಓದಿ:ಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌

ಅರಣ್ಯ ಇಲಾಖೆಯ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ಕಾಗೆಗಳನ್ನು ಕೀಟಗಳೆಂದು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ದಂಪತಿಯನ್ನು ಬಂಧಿಸಲಿಲ್ಲ. ಆದರೂ ಎಚ್ಚರಿಕೆ ನೀಡಿ 5 ಸಾವಿರ ರೂ.ದಂಡ ವಿಧಿಸಿ, ಅರಣ್ಯ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News