Subramaniam Badrinath statement on Ravichandran Ashwins retirement: ಈ ಪೀಳಿಗೆಯ ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಅವರು ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಅಂತ್ಯದ ನಂತರ ತಮ್ಮ ಹಠಾತ್ ನಿವೃತ್ತಿ ಘೋಷಣೆಯೊಂದಿಗೆ ಕ್ರೀಡಾ ಜಗತ್ತನ್ನು ಬೆರಗುಗೊಳಿಸಿದ್ದರು. ಟೆಸ್ಟ್ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಎಂದು ಕೀರ್ತಿ ಪಡೆದಿರುವ ಅಶ್ವಿನ್, "ಅಂತರಾಷ್ಟ್ರೀಯ ಹಂತಕ್ಕೆ ವಿದಾಯ ಹೇಳುವ ಸಮಯ ಬಂದಿದೆ" ಎಂದು ಹೇಳುತ್ತಿದ್ದಂತೆ ಅಭಿಮಾನಿಗಳ ಕಣ್ಣು ತುಂಬಿಬಂದಿತ್ತು.
ಇದನ್ನೂ ಓದಿ: ಈಕೆ ಸ್ಟಾರ್ ಕ್ರಿಕೆಟರ್ ಪತ್ನಿ, ಸ್ಟೇಡಿಯಂನಲ್ಲಿ ಪತಿ ಅರ್ಭಟಿಸಿದ್ರೆ ಈಕೆ ಇಂಟರ್ನೆಟ್ ಸೆನ್ಸೆಷನ್..! ಯಾರ್ ಗೊತ್ತೆ..?
ಇನ್ನು ಈ ಬೆನ್ನಲ್ಲೇ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟರ್ ಸುಬ್ರಮಣ್ಯಂ ಬದ್ರಿನಾಥ್ ಅವರು ಆಶ್ಚರ್ಯಕರ ಹೇಳಿಕೆಯೊಂದನ್ನು ನೀಡಿದ್ದಾರೆ.
"ನನಗೆ ಇದು ಶಾಕಿಂಗ್ ಸಂಗತಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರನ್ನು ಸರಿಯಾಗಿ ನಡೆಸಿಕೊಳ್ಳಲಾಗಿಲ್ಲ ಎಂದು ನನಗನಿತ್ತಿದೆ. ನಾನೂ ಒಂದನ್ನು ಹೇಳುತ್ತಿದ್ದೇನೆ, ತಮಿಳುನಾಡಿನ ಕ್ರಿಕೆಟಿಗನಿಗೆ ಇದು ದೊಡ್ಡ ವಿಷಯ. ಅದಕ್ಕೆ ಹಲವು ಕಾರಣಗಳಿವೆ. ಕೆಲವು ಇತರ ರಾಜ್ಯಗಳ ಆಟಗಾರರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಇಷ್ಟೆಲ್ಲಾ ವಿರೋಧಾಭಾಸಗಳ ನಡುವೆಯೂ ಅಶ್ವಿನ್ 500 ಕ್ಕೂ ಹೆಚ್ಚು ವಿಕೆಟ್ಗಳನ್ನು ಕಬಳಿಸಿ ದಂತಕಥೆಯಾಗಿದ್ದಾರೆ" ಅವರು ಸೇರಿಸಿದರು.
"ಅಶ್ವಿನ್ ಅವರನ್ನು ಸೈಡ್ಲೈನ್ ಮಾಡಲು ಪ್ರಯತ್ನಿಸಲಾಯಿತು. ಆದರೆ ಅವರು ಮತ್ತೆ ಪುಟಿದೇಳುವುದನ್ನು ಮುಂದುವರೆಸಿದರು. ಈಗ ತಂಡದಲ್ಲಿ ವಾಷಿಂಗ್ಟನ್ ಸುಂದರ್ಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ, ತಂಡದೊಂದಿಗೆ ಅವರ ಸಮಯ ಮುಗಿದಿದೆ ಎಂದು ಅಶ್ವಿನ್ ಹೀಗೆ ನಿರ್ಧರಿಸಿದ್ದಾರೆ" ಎಂದು ಬದರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ: ದುಡ್ಡಿದ್ರೆ ದುನಿಯಾನೆ ಆಳಬೋದು ಗುರು! 31 ವರ್ಷದ ಹಾಟ್ ನಟಿಯನ್ನ ಪಾಟಾಯಿಸಿದ 70 ವರ್ಷದ ಸ್ಟಾರ್ ನಟ?
"ಅವನು ಏನನ್ನು ಅನುಭವಿಸಿರಬಹುದೆಂದು ಊಹಿಸಿ. ಕೆಲವು ವಿಷಯಗಳನ್ನು ಎದುರಿಸಿದ್ದಾನೆಂದು ನನಗೆ ತಿಳಿದಿದೆ. ಅನೇಕ ಸಂದರ್ಭಗಳಲ್ಲಿ, ಅವನನ್ನು ಸೈಡ್ಲೈನ್ ಮಾಡಲು ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಪ್ರತಿ ಬಾರಿಯೂ, ಅವನು ಫೀನಿಕ್ಸ್ ಹಕ್ಕಿಯಂತೆ ಪುಟಿದೇಳುತ್ತಿದ್ದ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.