Sun Transit: ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. 2025 ರ ಹೊಸ ವರ್ಷದ ಆರಂಭದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಮೇಷದಿಂದ ಹಿಡಿದು ಮೀನ ರಾಶಿಯ ಮೇಲೆ ಪರಿಣಾಮ ಬೀರಲಿದೆ. ಮಕರ ರಾಶಿಯು ಜನವರಿ 14, 2025 ರಂದು 09:03 AM ಕುಂಭ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಫೆಬ್ರವರಿ 12, 2025 ರಂದು ರಾತ್ರಿ 10:03 ಕ್ಕೆ ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
ಮಕರ ರಾಶಿಯಲ್ಲಿ ಸೂರ್ಯ ಸಂಕ್ರಮಣ ಆಗುವುದರಿಂದ, ಕೆಲವು ರಾಶಿಯ ಜನರಿಗೆ ಆರ್ಥಿಕ ಪ್ರಗತಿಯನ್ನು ತರಲಿದೆ ಮತ್ತು ವ್ಯಾಪಾರದಲ್ಲಿ ಲಾಭ ಸಿಗಲಿದೆ. ಹಾಗಾದರೆ ಸೂರ್ಯ ಸಂಕ್ರಮಣದಿಂದ ಯಾವೆಲ್ಲಾ ರಾಶಿಗಳಿಗೆ ಲಾಭ ಸಿಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ...
ಮೇಷ: ಮೇಷ ರಾಶಿಯವರಿಗೆ ಸೂರ್ಯ ಸಂಕ್ರಮಣ ಮಂಗಳಕರವಾಗಿದೆ . ಈ ಅವಧಿಯಲ್ಲಿ ಆರ್ಥಿಕ ಪ್ರಗತಿ ಮತ್ತು ವ್ಯಾಪಾರ ಯಶಸ್ಸಿನ ಸಾಧ್ಯತೆಗಳಿವೆ. ಕೆಲವು ಒಳ್ಳೆಯ ಸುದ್ದಿಗಳು ಸಿಗಲಿವೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಚಿಹ್ನೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯನ ಸಂಕ್ರಮಣ ಉತ್ತಮ ಯಶಸ್ಸು ಹಾಗೂ ಆದಾಯವನ್ನು ತರಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಈ ಸಮಯ ಅನುಕೂಲಕರವಾಗಿದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುವಿರಿ. ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆಯಬಹುದು.
ಮಕರ: ಮಕರ ರಾಶಿಯವರಿಗೆ ಇದು ಬಹಳ ಒಳ್ಳೆಯ ಸಮಯ. ಹೊಸ ವರ್ಷದಲ್ಲಿ ಆರ್ಥಿಕ ಪ್ರಗತಿ ಸಾಧಿಸಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಸಂಗಾತಿಯ ಬೆಂಬಲ ದೊರೆಯುತ್ತದೆ. ವ್ಯಾಪಾರದಲ್ಲಿ ವಿಸ್ತರಣೆ ಸಾಧ್ಯತೆ ಹೆಚ್ಚಾಗುತ್ತದೆ.
ಸಿಂಹ: ಸೂರ್ಯ ಸಂಕ್ರಮಣವು ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳನ್ನು ಹೊತ್ತು ತರಲಿದೆ. ಈ ರಾಶಿಯವರು ಸೂರ್ಯ ಸಂಕ್ರಮಣದ ನಂತರ ಆತ್ಮಸ್ಥೆರ್ಯದಿಂದ ತಮ್ಮ ಕೆಲಸದಲ್ಲಿ ಮುನ್ನಡೆಯುತ್ತಾರೆ. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಲಿವೆ. ವ್ಯಾಪಾರದಲ್ಲಿ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಅದೃಷ್ಟವಂತರು. ಅದೃಷ್ಟದಿಂದ ಯಾವುದೇ ಪ್ರಯತ್ನದಲ್ಲಿ ಯಶಸ್ಸು ಸಾಧ್ಯ. ಗೌರವ ಹೆಚ್ಚುತ್ತದೆ. ನಿಮ್ಮ ಮಾತಿನ ಮೂಲಕ ಜನರನ್ನು ಮೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.