ಟೀಂ ಇಂಡಿಯಾದಿಂದ ಹೊರಗುಳಿದಿರುವ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕಳೆದ ಕೆಲವು ದಿನಗಳಿಂದ ತಮ್ಮ ದಾಂಪತ್ಯದಲ್ಲಿನ ಬಿರುಗಾಳಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.ಅದರಲ್ಲೂ ಬಹುತೇಕ ಮಾಧ್ಯಮಗಳು ಚಹಾಲ್ ಪತ್ನಿ ಧನಶ್ರೀ ಇಬ್ಬರೂ ಬೇರ್ಪಟ್ಟಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ.ಈ ಬೆನ್ನಲ್ಲೇ ಪತ್ನಿ ಧನಶ್ರೀ ತಮ್ಮ ಮೌನ ಮುರಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಅಚ್ಚರಿ ಎಂದರೆ ಚಹಲ್ ಹೆಸರನ್ನು ಎಲ್ಲಿಯೂ ತೆಗೆದುಕೊಂಡಿಲ್ಲ ಅಥವಾ ಅವರ ವಿಚ್ಛೇದನದ ವದಂತಿಗಳನ್ನು ನಿರಾಕರಿಸಲಿಲ್ಲವಾದರೂ, ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
ಅನೇಕ ಬಳಕೆದಾರರು ಧನಶ್ರೀ ಚಹಾಲ್ ಜನಪ್ರಿಯತೆಯನ್ನು ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
'ನನ್ನ ಹೆಸರು ಮತ್ತು ಖ್ಯಾತಿಯನ್ನು ನಿರ್ಮಿಸಲು ನಾನು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ದೌರ್ಬಲ್ಯವಲ್ಲ, ನನ್ನ ಶಕ್ತಿಯಾಗಿದೆ.ಋಣಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ, ಆದರೆ ಇತರರನ್ನು ಮೇಲಕ್ಕೆತ್ತಲು ಧೈರ್ಯ ಮತ್ತು ಔದಾರ್ಯವಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಊಹಾಪೋಹಗಳ ನಡುವೆ, ಜನವರಿ 8 ಬುಧವಾರದಂದು, ಧನಶ್ರೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ 'ನನ್ನನ್ನು ಹೆಚ್ಚು ತೊಂದರೆಗೊಳಿಸಿರುವುದು ಅಸಂಬದ್ಧ ಸುದ್ದಿಯಾಗಿದ್ದು, ಇದು ಸತ್ಯವನ್ನು ಪರಿಶೀಲಿಸದ ಸುದ್ದಿಯಾಗಿದ್ದು, ಟ್ರೋಲ್‌ಗಳು, ದ್ವೇಷವನ್ನು ಹರಡುವ ಮೂಲಕ ನನ್ನ ಗೌರವವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಇದುವರೆಗೂ ಇಬ್ಬರೂ ವಿಚ್ಛೇದನದ ವಿಚಾರವಾಗಿ ಬಹಿರಂಗವಾಗಿ ಮಾತನಾಡಿಲ್ಲ.ಆದರೆ ನಿರಂತರ ಆನ್‌ಲೈನ್ ಟ್ರೋಲಿಂಗ್ ನಂತರ,ಕೊನೆಗೂ ಮೌನ ಮುರಿದಿರುವ ಧನಶ್ರೀ ತಮ್ಮ ಮೇಲಾಗುತ್ತಿರುವ ಆನ್ಲೈನ್ ಟ್ರೋಲಿಂಗ್ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಚಾರಿತ್ರ್ಯದ ವಧೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.