ಐಪಿಎಲ್ ಹರಾಜು ಪ್ರಕ್ರಿಯೆ 2018: ಹರಾಜಾಗದ ಕ್ರಿಸ್ ಗೇಲ್, ಬೆನ್ ಸ್ಟೋಕ್ ಗೆ 12.50 ಕೋಟಿ

    

Last Updated : Jan 27, 2018, 11:54 AM IST
ಐಪಿಎಲ್ ಹರಾಜು ಪ್ರಕ್ರಿಯೆ 2018: ಹರಾಜಾಗದ ಕ್ರಿಸ್ ಗೇಲ್, ಬೆನ್ ಸ್ಟೋಕ್ ಗೆ 12.50 ಕೋಟಿ title=

ಬೆಂಗಳೂರು: 2018 ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದ್ದು, ವೆಸ್ಟ್ ಇಂಡಿಸ್ ತಂಡದ ಕ್ರಿಸ್ ಗೇಲ್ ರವರನ್ನು ಇಲ್ಲಿ ನಡೆದ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ಖರೀದಿಸಲು ಮುಂದೆ ಬರದಿರುವುದು ಆಶ್ಚರ್ಯ ತಂದಿದೆ.

ಈ ಬಾರಿಯ ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್  12.5 ಕೋಟಿ ರೂಪಾಯಿಗಳಿಗೆ ರಾಜಸ್ತಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಆ ಮೂಲಕ ಈ ಮೊದಲ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ರಾಯಲ್ ಚಾಲೆಂಜೆರ್ಸ್ ಬೆಂಗಳೂರಿನಲ್ಲಿ ಆಟವಾಡಿದ್ದ ಗೇಲ್ ಈ ಬಾರಿ ಫ್ರಾಂಚೈಸಿಗಳು ಆಕರ್ಷಿಸದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್ 5.2 ಕೋಟಿಗೆ ಹೈದರಾಬಾದ್ ಸನ್ ರೈಸೆರ್ಸ ಪಾಲಾದರೆ. ಆಸ್ಟ್ರೇಲಿಯಾದ ವೇಗದ ಬೌಲರ್ 9.4 ಕೋಟಿಗೆ ಕೊಲ್ಕತಾ ನೈಟ್ ರೈಡೆರ್ಸ್ ತಂಡವು ಖರಿಧಿಸಿತು. ಇನ್ನೊಂದೆಡೆಗೆ ಈ ಬಾರಿ ಆರ್ ಆಶ್ವಿನ್ ರವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 7.6 ಕೋಟಿಗೆ ಖರಿದಿಸುವಲ್ಲಿ ಯಶಸ್ವಿಯಾಯಿತು. ಉಳಿದಂತೆ  ಅಜಿಂಕಾ ರಹಾನೆಯವರನ್ನು  ರಾಜಸ್ತಾನ್ ರಾಯಲ್ಸ್ 4 ಕೋಟಿಗೆ ತಂಡದಲ್ಲಿ ಉಳಿಸಿಕೊಂಡಿದೆ.

ಈ ಹರಾಜಿನಲ್ಲಿ ಒಟ್ಟು 580 ಆಟಗಾರರ ಹರಾಜಿನ ಪಟ್ಟಿಯಲ್ಲಿದ್ದಾರೆ, ಅದರಲ್ಲಿ 361 ಆಟಗಾರರು ಭಾರತೀಯರಾಗಿದ್ದಾರೆ ಉಳಿದೆಲ್ಲರೂ ಕೂಡಾ ವಿದೇಶಿ ಆಟಗಾರರು ಎಂದು ತಿಳಿದು ಬಂದಿದೆ. 

ಹರಾಜಾದ ಆಟಗಾರರ ಪಟ್ಟಿ 

ಬೆನ್ ಸ್ಟೋಕ್ -ರಾಜಸ್ತಾನ್ ರಾಯಲ್ಸ್ -12.5 ಕೋಟಿ 
ಶಿಖರ್ ಧವನ್-ಹೈದರಾಬಾದ್ ಸನ್ ರೈಸೆರ್ಸ-5.2 ಕೋಟಿ
ಆರ್ ಆಶ್ವಿನ್ -ಕಿಂಗ್ಸ್ ಇಲೆವೆನ್ ಪಂಜಾಬ್ - 7.6 ಕೋಟಿ
ಅಜಿಂಕಾ ರಹಾನೆ-ರಾಜಸ್ತಾನ್ ರಾಯಲ್ಸ್- 4 ಕೋಟಿ
ಮೈಕಲ್ ಸ್ಟಾರ್ಕ್ -ಕೋಲ್ಕತ್ತಾ ನೈಟ್ ರೈಡರ್ಸ್- 
ಗ್ಲೆನ್ ಮ್ಯಾಕ್ಸ್ ವೆಲ್ - ಡೆಲ್ಲಿ ಡೆರ್ ಡೆವಿಲ್ಸ್ - 9 ಕೋಟಿ 
ಕೆನ್ ವಿಲಿಯಮ್ಸ್ನ್ - ಸನ್ ರೈಸೆರ್ಸ್ ಹೈದರಾಬಾದ್- 3 ಕೋಟಿ 
ಯುವರಾಜ್ ಸಿಂಗ್ -ಕಿಂಗ್ಸ್ ಇಲೆವನ್ ಪಂಜಾಬ್ -2 ಕೋಟಿ 
ಡ್ವೇನ್ ಬ್ರಾವೋ -ಚೆನ್ನೈ ಸೂಪರ್ ಕಿಂಗ್ಸ್ - 6.40 ಕೋಟಿ 
ಗೌತಮ್ ಗಂಭೀರ್ - ಡೆಲ್ಲಿ ದೇರ್ ಡೆವಿಲ್ಸ್ -2.80 ಕೋಟಿ 

 

Trending News