ಜುಲೈ 10ರವರೆಗೆ 'ಕೊರೊನಾ ಕವಚ' ವಿಮಾ ಪಾಲಸಿಯನ್ನು ಪ್ರಸ್ತುತ ಪಡಿಸಲು ವಿಮಾ ಕಂಪನಿಗಳಿಗೆ ಸೂಚನೆ ನೀಡಿದ IRDAI

ದೇಶಾದ್ಯಂತ ಹೆಚ್ಚುತ್ತಿರುವ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಮಧ್ಯೆ ಜುಲೈ 10 ರೊಳಗೆ ಅಲ್ಪಾವಧಿಯ ಗುಣಮಟ್ಟದ ಕೋವಿಡ್ ವೈದ್ಯಕೀಯ ವಿಮಾ ಪಾಲಿಸಿ ಅಥವಾ ಕೋವಿಡ್ ಕವಚ್ ವಿಮೆಯನ್ನು ಪರಿಚಯಿಸುವಂತೆ ವಿಮಾ ಕಂಪನಿಗಳಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಸೂಚನೆ ನೀಡಿದೆ.

Last Updated : Jun 28, 2020, 04:28 PM IST
ಜುಲೈ 10ರವರೆಗೆ 'ಕೊರೊನಾ ಕವಚ' ವಿಮಾ ಪಾಲಸಿಯನ್ನು ಪ್ರಸ್ತುತ ಪಡಿಸಲು ವಿಮಾ ಕಂಪನಿಗಳಿಗೆ ಸೂಚನೆ ನೀಡಿದ IRDAI title=

ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಮಧ್ಯೆ ಜುಲೈ 10 ರೊಳಗೆ ಅಲ್ಪಾವಧಿಯ ಗುಣಮಟ್ಟದ ಕೋವಿಡ್ ವೈದ್ಯಕೀಯ ವಿಮಾ ಪಾಲಿಸಿ ಅಥವಾ ಕೋವಿಡ್ ಕವಚ್ ವಿಮೆಯನ್ನು ಪರಿಚಯಿಸುವಂತೆ ವಿಮಾ ಕಂಪನಿಗಳಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ವಿಮಾ ನಿಯಂತ್ರಕ ಐಆರ್‌ಡಿಎ ಈ ವಿಮಾ ಪಾಲಿಸಿಗಳ ಅವಧಿಯನ್ನು ಮೂರೂವರೆ ತಿಂಗಳು, ಆರೂವರೆ ತಿಂಗಳು ಮತ್ತು ಒಂಬತ್ತೂವರೆ ತಿಂಗಳುಗಳವರೆಗೆ ಇಡಬಹುದು ಎಂದು ಹೇಳಿದೆ. ಸ್ಟ್ಯಾಂಡರ್ಡ್ ಕೋವಿಡ್ ವಿಮಾ ಪಾಲಿಸಿಯು 50 ಸಾವಿರ ರೂಪಾಯಿಯಿಂದ ಐದು ಲಕ್ಷ ರೂಪಾಯಿಗಳವರೆಗೆ ಇರುವ ಸಾಧ್ಯತೆ ಇದೆ.

ಈ ಉತ್ಪನ್ನಗಳ ಹೆಸರುಗಳು 'ಕೊರೊನಾ ಕವಚ್ ಇನ್ಶುರೆನ್ಸ್' ಆಗಿರಬೇಕು ಎಂದು ನಿಯಂತ್ರಕ ಹೇಳಿದೆ. ನಂತರ ಕಂಪನಿಗಳು ತಮ್ಮ ಹೆಸರನ್ನು ಇದಕ್ಕೆ ಸೇರಿಸಬಹುದು ಎಂದೂ ಕೂಡ ಸ್ಪಷ್ಟಪಡಿಸಿದೆ. ಈ ವಿಮಾ ಉತ್ಪನ್ನಗಳಿಗೆ ಒಂದೇ ಕೇವಲ ಪ್ರೀಮಿಯಂ ನಿಗದಿಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಪಾಲಸಿಗಳ ಪ್ರೀಮಿಯಂಗಳು ದೇಶಾದ್ಯಂತ ಏಕರೂಪವಾಗಿರಬೇಕು. ಆದರೆ, ಸ್ಥಳ ಅಥವಾ ಭೌಗೋಳಿಕ ಸ್ಥಿತಿಗೆ ಅನುಗುಣವಾಗಿ ಈ ವಿಮಾ ಉತ್ಪನ್ನಗಳಿಗೆ ವಿಭಿನ್ನ ಪ್ರೀಮಿಯಂಗಳನ್ನು ನಿಗದಿಪಡಿಸುವ ಸ್ವಾತಂತ್ರ್ಯ ಇರಲಿದೆ.

ಈ ವಿಮಾ ಉತ್ಪನ್ನಗಳಲ್ಲಿ ಕೋವಿಡ್ ಚಿಕಿತ್ಸೆಯ ವೆಚ್ಚಗಳ ಜೊತೆಗೆ ಇತರೆ ಹಳೆ ದೀರ್ಘಕಾಲದ ಅಥವಾ ಹೊಸ ಕಾಯಿಲೆಗಳ ವೆಚ್ಚಗಳೂ ಕೂಡ ಶಾಮೀಲಾಗಿರಬೇಕು ಎಂದು ನಿಯಂತ್ರಕ ಸ್ಪಷ್ಟಪಡಿಸಿದೆ. ಇದರ ಅಡಿಯಲ್ಲಿ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ, ಮನೆಯಲ್ಲಿ ಚಿಕಿತ್ಸೆ, ಆಯುಷ್‌ನೊಂದಿಗೆ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ಭರಿಸಲಾಗುವುದು. "ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಇಂತಹ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಜುಲೈ 10, 2020 ರ ಮೊದಲು ಲಭ್ಯವಾಗುವಂತೆ ನೋಡಿಕೊಳ್ಳಬೇಕು" ಎಂದು ಪ್ರಾಧಿಕಾರ ಹೇಳಿದೆ.

Trending News